Site icon Vistara News

Road Accident : ಆಗುಂಬೆ ಘಾಟ್‌ನಲ್ಲಿ ಟೋಯಿಂಗ್ ವಾಹನದ ಬ್ರೇಕ್ ಫೇಲ್; 30 ಅಡಿ ಕೆಳಗೆ ಬಿದ್ದ ವ್ಯಕ್ತಿ!

Agumbe Ghat accident and rescue operation

ಶಿವಮೊಗ್ಗ: ಆಗುಂಬೆ ಘಾಟ್‌ನಲ್ಲಿ (Agumbe Ghat) ಟೋಯಿಂಗ್ ವಾಹನದ ಬ್ರೇಕ್ ಫೇಲ್ (Brake failure of towing vehicle) ಆಗಿ ಅಪಘಾತ (Road Accident) ಸಂಭವಿಸಿದೆ. ಘಾಟಿಯಿಂದ ವ್ಯಕ್ತಿಯೊಬ್ಬರು ಸುಮಾರು 25-30 ಅಡಿ ಕೆಳಗೆ ಉರುಳಿ ಬಿದ್ದಿದ್ದಾರೆ. ಅವರ ಸೊಂಟ ಮತ್ತು ತಲೆಗೆ ಏಟಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್‌ನಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಪಾಷಾ ಎಂಬ ವ್ಯಕ್ತಿ ಉರುಳಿ ಬಿದ್ದವರು. ಅಪಘಾತದ ಹಿನ್ನೆಲೆಯಲ್ಲಿ ಆಗುಂಬೆ ಘಾಟ್‌ನಲ್ಲಿ ಟ್ರಾಫಿಕ್ ಜಾಮ್ (Traffic Jam) ಆಗಿದೆ. ಟ್ರ್ಯಾಕ್ಟರ್ ಟೋಯಿಂಗ್ ಮಾಡಿಕೊಂಡು ಬರುತ್ತಿದ್ದ 207 ವಾಹನವನ್ನು ಹೇರ್ ಪಿನ್ ತಿರುವಿನಲ್ಲಿ ತಿರುಗಿಸಲು ಆಗಲಿಲ್ಲ. ಈ ಹಿನ್ನೆಲೆಯಲ್ಲಿ ರಿವರ್ಸ್ ಬರಲು ಟೋಯಿಂಗ್ ವಾಹನ ಚಾಲಕ ಮುಂದಾಗಿದ್ದಾರೆ. ಆಗ ಟೋಯಿಂಗ್ ವಾಹನದ ಬ್ರೇಕ್ ಫೇಲ್ ಆಗಿ ಅವಘಡ ಸಂಭವಿಸಿದೆ.

ಇದನ್ನೂ ಓದಿ: Doodh Sagar Ban : ಅರೆ ಇಸ್ಕಿ, ದೂಧ್‌ ಸಾಗರ್‌ ಹೋದೋರಿಗೆ ಹೊಡೆಸಿದರು ಬಸ್ಕಿ!

ಈ ವೇಳೆ ಟೋಯಿಂಗ್‌ ವಾಹನಕ್ಕೆ ರಿವರ್ಸ್‌ ತೆಗೆದುಕೊಳ್ಳುವಾಗ ಮೊಹಮ್ಮದ್‌ ಪಾಷ ಹಿಂದೆ ಇದ್ದರು. ಅದು ವಾಹನ ಚಾಲಕನಿಗೆ ಗೊತ್ತಿರಲಿಲ್ಲ. ಅಲ್ಲದೆ, ಈ ವೇಳೆ ಆದರೆ, ಇದ್ದಕ್ಕಿದ್ದಂತೆ ಬ್ರೇಕ್‌ ಫೇಲ್‌ ಆಗಿ ವಾಹನ ಹಿಂದಕ್ಕೆ ಬಂದಿದ್ದರಿಂದ ಟೋಯಿಂಗ್‌ ವಾಹನವು ಅಲ್ಲಿದ್ದ ಇವರಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಮೊಹಮ್ಮದ್ ಸೀದಾ ಪ್ರಪಾತಕ್ಕೆ ಬಿದ್ದಿದ್ದಾರೆ.

ಘಾಟಿಯ ಕೆಳಗೆ ಸುಮಾರು 25-30 ಅಡಿ ಆಳಕ್ಕೆ ಮೊಹಮ್ಮದ್‌ ಬಿದ್ದಿದ್ದಾರೆ. ಅವರು ಕೆಳಗೆ ಬೀಳುವುದನ್ನು ಈ ವೇಳೆ ದಾರಿಯಲ್ಲಿ ಬರುತ್ತಿದ್ದ ಹಿಂದು ಜಾಗರಣಾ ವೇದಿಕೆ (Hindu Jagran Vedike) ಕಾರ್ಯಕರ್ತರು ಗಮನಿಸಿದ್ದಾರೆ. ಕೂಡಲೇ ಅವರು ತಮ್ಮ ವಾಹನವನ್ನು ನಿಲ್ಲಿಸಿ ಆತನ ರಕ್ಷಣೆಗೆ ದಾವಿಸಿದ್ದಾರೆ. ಪಾಷ ಅವರ ಸೊಂಟ ಮತ್ತು ತಲೆಗೆ ಪೆಟ್ಟು ಬಿದ್ದಿತ್ತು. ಹೀಗಾಗಿ ಪ್ರಯಾಣಿಕರೊಬ್ಬರಿಂದ ಬೆಡ್‌ಶೀಟ್‌ ಪಡೆದಿದ್ದಾರೆ. ಬಳಿಕ ಹಗ್ಗದ ಸಹಾಯದಿಂದ ಮೇಲಕ್ಕೆ ಕಷ್ಟಪಟ್ಟು ಬಂದಿದ್ದಾರೆ. ಹಿಂಜಾವೇ ಕಾರ್ಯಕರ್ತ ನಿತ್ಯಾನಂದ ಮತ್ತಿತರರ ಕಾರ್ಯಕ್ಕೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಸರಣಿ ಅಪಘಾತ

ಮಂಡ್ಯ: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇ‌ (Bangalore mysore expressway) ಯಲ್ಲಿ ಸರಣಿ ಅಪಘಾತ (Series accident) ನಡೆದಿದೆ. ಮೊದಲಿಗೆ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ (Bus and car accident) ಸಂಭವಿಸಿದೆ. ಬಳಿಕ ಆ ಕಾರು ಮುಂದಿನ ಕಾರಿಗೆ ಡಿಕ್ಕಿ ಹೊಡೆದಿದೆ. ಹೀಗೆ ಒಟ್ಟು ಮೂರು ಕಾರುಗಳು ಜಖಂ ಆಗಿವೆ. ಇದರಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯಗಳಾಗಿದ್ದರೆ, ಮೂರ್ನಾಲ್ಕು ಜನಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಿಂದಾಗಿ ಕೆಲವು ಸಮಯ ಟ್ರಾಫಿಕ್ ಜಾಮ್ (Traffic Jam) ಆಗಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ರಾಜಹಂಸ ಬಸ್ (Rajahamsa Bus) ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಂಬದಿಯ ಮೂರು ಕಾರುಗಳು ಜಖಂ ಆಗಿವೆ. ಕಾರಿನಲ್ಲಿದ್ದ ಮೂರ್ನಾಲ್ಕು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: CT Ravi : ವಿಪಕ್ಷ ನಾಯಕನ ಆಯ್ಕೆ ಆಗಿದ್ದರೆ ಅರ್ಕಾವತಿ ಹಗರಣ ಹೊರ ಬರುತ್ತಿತ್ತು: ಸಿ.ಟಿ. ರವಿ

ತಕ್ಷಣವೇ ಗಾಯಗಳನ್ನು ರಕ್ಷಿಸಿದ ಸ್ಥಳೀಯರು ಮದ್ದೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಹನಗಳ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲವು ಸಮಯ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಬಳಿಕ ಅಪಘಾತವಾದ ವಾಹನಗಳನ್ನು ಪಕ್ಕಕ್ಕೆ ಸರಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version