Site icon Vistara News

Karnataka Election 2023: ಬಿಜೆಪಿ ಪರ ಪ್ರಚಾರಕ್ಕೆ ಶಾರ್ಟ್ ಬ್ರೇಕ್; ನಟ ಸುದೀಪ್ ಕೊಟ್ಟ ಕಾರಣವೇನು?

Break for BJP campaign; What is the reason given by actor Sudeep?

ಬೆಂಗಳೂರು, ಕರ್ನಾಟಕ: ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಹೊರತು, ನನ್ನ ಪ್ರಚಾರ ಪಕ್ಷದ ಪರವಾಗಿ ಅಲ್ಲ ಎಂದು ನಟ ಸುದೀಪ್ (kichcha sudeepa) ಅವರು ಹೇಳಿದ್ದಾರೆ. ಭರ್ಜರಿಯಾಗಿ ಪ್ರಚಾರ ಕೈಗೊಂಡಿದ್ದ ನಟ ಸುದೀಪ್ ಇದ್ದಕ್ಕಿದ್ದಂತೆ ಬ್ರೇಕ್ ತೆಗೆದುಕೊಂಡಿದ್ದರು. ಈ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ, ನನ್ನ ಪ್ರಚಾರ ಬೊಮ್ಮಾಯಿ ಅವರ ಪರವಾಗಿ ಎಂದು ಹೇಳಿದರು(Karnataka Election 2023).

ಬ್ರೇಕ್‌ ತೆಗೆದುಕೊಂಡಿದ್ದಕ್ಕೆ ಕಾರಣ ಇಲ್ಲ ಎಂದಲ್ಲ. ಬೇಸರ ಆಯಿತು ಅಂತಾ ಹೇಳಿದ್ರೂ ತಪ್ಪಾಗುತ್ತದೆ. ಆಗಿಲ್ಲ ಎಂದರೂ ತಪ್ಪಾಗುತ್ತದೆ. ನಾರ್ಮಲ್ ಚುನಾವಣೆಗಳು ಬೇರೆ, ಆದರೆ ಜನ ಸೇರಿದಾಗ ಪ್ರಚಾರ ಮಾಡೋದು ಬೇರೆ. ಎಲ್ಲ ಸ್ಥಳಗಳಿಗೂ ಕಾಪ್ಟರ್‌ನಲ್ಲೇ ಹೋಗೋಕೆ ಆಗಲ್ಲ. ಪರ್ಫೆಕ್ಟ್ ಆಗಿ ಪ್ಲ್ಯಾನ್ ಮಾಡಿ ಎಂದು ಬ್ರೇಕ್ ತೆಗೆದುಕೊಂಡಿದ್ದೆ ಎಂದು ನಟ ಸುದೀಪ್ ಅವರು ಹೇಳಿದ್ದಾರೆ.

ನಾನು ಈ ಮೊದಲೇ ಹೇಳಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದೇನೆ. ಅದಕ್ಕೆ ಬದ್ಧವಾಗಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೂ ನನಗೆ ಬೇಕಾದವರು. ಈ ಒಂದು ಚುನಾವಣಾ ನಾನು ಎಲ್ಲರೊಂದಿಗೆ ಹೊಂದಿರುವ ಸಂಬಂಧಗಳನ್ನು ಕಡಿದು ಹಾಕುವುದಿಲ್ಲ. ಡಿಕೆಶಿ ಅವರ ಸ್ವಲ್ಪ ಮಜಾ ತೆಗೆದುಕೊಳ್ಳುತ್ತಾರೆ. ತೆಗೆದುಕೊಳ್ಳಲಿ ಎಂದು ಹೇಳಿದರು. ಹೆಬ್ಬುಲಿ ಸಿನಿಮಾ ನಂತರದ ಇದೇ ಮೊದಲ ಬಾರಿಗೆ ನಾನು ರೋಡ್ ಶೋ ಮಾಡುತ್ತಿರುವುದು ಎಂದು ನಟ ಸುದೀಪ್ ಹೇಳಿದರು.

ಕುಂದಾನಗರಿ ಬೆಳಗಾವಿಯಲ್ಲಿ ಇಂದು ಕಿಚ್ಚ ಸುದೀಪ್ ಚುನಾವಣಾ ಪ್ರಚಾರ

ಇಡೀ ದಿನ ಬೆಳಗಾವಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ನಟ ಸುದೀಪ್ ರೋಡ್ ಶೋ ನಡೆಸಲಿದ್ದಾರೆ. ಕಿತ್ತೂರು, ಬೆಳಗಾವಿ ಗ್ರಾಮೀಣ, ಯಮಕನಮರಡಿ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸುದೀಪ್ ರೋಡ್ ಶೋ ನಡೆಸಿ, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.

ಇದನ್ನೂ ಓದಿ: Karnataka Election 2023: ಕಾಂಗ್ರೆಸ್ ಪರ ನಟ ದರ್ಶನ್, ಸುದೀಪ್ ಪ್ರಚಾರ ಎಂದ ಗೀತಾ ಶಿವರಾಜಕುಮಾರ್

ಬೆಳಗ್ಗೆ 10.40ಕ್ಕೆ ವಿಶೇಷ ವಿಮಾನ ಮೂಲಕ ಬೆಂಗಳೂರಿಂದ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ಗೆ ಕಿಚ್ಚ‌ ಆಗಮನ. ಬೆಳಗ್ಗೆ 11.20ಕ್ಕೆ ಕಿತ್ತೂರು ಕ್ಷೇತ್ರದ ನೇಸರಗಿಯಲ್ಲಿ ಸುದೀಪ್ ರೋಡ್ ಶೋ. ನೇಸರಗಿಯಲ್ಲಿ ಬೆಳಗ್ಗೆ 11.20ರಿಂದ ಮಧ್ಯಾಹ್ನ 12.30ರವರೆಗೆ ಸುದೀಪ್ ರೋಡ್ ಶೋ. ಕಿತ್ತೂರು ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಪರ ಮತಯಾಚನೆ. ಮಧ್ಯಾಹ್ನ 1ಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿಗೆ ಆಗಮಿಸುವ ಸುದೀಪ್. ಮಧ್ಯಾಹ್ನ 1 ಗಂಟೆಯಿಂದ 1.50ರವರೆಗೆ ಸುಳೇಭಾವಿ ಗ್ರಾಮದಲ್ಲಿ ರೋಡ್ ಶೋ. ಬೆಳಗಾವಿ ಗ್ರಾಮೀಣ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೋಳಕರ್ ಪರ ಪ್ರಚಾರ. ಮಧ್ಯಾಹ್ನ 2.15ಕ್ಕೆ ಬೆಳಗಾವಿಯ ಖಾಸಗಿ ಹೋಟೆಲ್‌ಗೆ ಆಗಮಿಸಿ ಭೋಜನ. ಸಂಜೆ 4ಕ್ಕೆ ಯಮಕನಮರಡಿಗೆ ತೆರಳುವ ನಟ ಸುದೀಪ್. ಸಂಜೆ 4 ರಿಂದ 5ರವರೆಗೆ ಯಮಕನಮರಡಿಯಲ್ಲಿ ಸುದೀಪ್ ರೋಡ್ ಶೋ. ಯಮಕನಮರಡಿ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಪರ ಮತಯಾಚನೆ. ಸಂಜೆ 5.30ಕ್ಕೆ ಬೆಳಗಾವಿ ಮಹಾನಗರಕ್ಕೆ ಆಗಮಿಸುವ ನಟ ಸುದೀಪ್. ಸಂಜೆ 5.30ರಿಂದ 6.30ರವರೆಗೆ ಬೆಳಗಾವಿ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ. ಬೆಳಗಾವಿ ಉತ್ತರ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ್ ಪರ ಪ್ರಚಾರ. ಸಂಜೆ 6.40ಕ್ಕೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ನಟ ಸುದೀಪ್ ರೋಡ್ ಶೋ. ಸಂಜೆ 6.40ರಿಂದ 7.30ರವರೆಗೆ ಬೆಳಗಾವಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಸುದೀಪ್ ರೋಡ್ ಶೋ. ಬೆಳಗಾವಿ ದಕ್ಷಿಣ ಬಿಜೆಪಿ ಅಭ್ಯರ್ಥಿ ಅಭಯ್ ಪಾಟೀಲ್ ಪರ ಮತಯಾಚನೆ. ಸಂಜೆ 7.40ಕ್ಕೆ ಬೆಳಗಾವಿಯ ಖಾಸಗಿ ಹೋಟೆಲ್‌ಗೆ ಆಗಮಿಸಿ ವಾಸ್ತವ್ಯ ಹೂಡುವವರು.

Exit mobile version