Site icon Vistara News

Demand for bride : ರೈತರಿಗೆ ಹುಡುಗಿ ಸಿಗಲಿ; ದುರ್ಗಾಂಬಿಕೆ ತೇರಿಗೆ ಬಾಳೆಹಣ್ಣು ಎಸೆದು ಕೋರಿಕೆ ಸಲ್ಲಿಸಿದ ಹುಡುಗರು!

Demand for bride

#image_title

ವಿಜಯನಗರ: ಗಂಡು ಮಕ್ಕಳಿಗೆ ಮದುವೆಯಾಗಲು ಹೆಣ್ಣು ಹುಡುಕುವುದೇ ಈಗ ಒಂದು ಸವಾಲಿನ ಕೆಲಸ. ಅದರಲ್ಲೂ ರೈತರು, ಪುರೋಹಿತರು, ಸಣ್ಣ ಉದ್ಯೋಗಿಗಳು ಅಂದರೆ ಹುಡುಗಿ ಕೊಡಲು ಒಪ್ಪುವುದೇ ಇಲ್ಲ. ಹುಡುಗಿಯರಂತೂ ಇಂಥವರನ್ನು ಕಣ್ಣೆತ್ತಿಯೂ ನೋಡುವುದಿಲ್ಲ ಅನ್ನುವ ಥರ ವರ್ತಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಬೇರೆ ದಾರಿ ಕಾಣದೆ (Demand for bride) ಜನರು ದೇವರ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಚಿಮ್ಮನಹಳ್ಳಿಯ ಜಾತ್ರೆ ವೇಳೆ ಹುಡುಗರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಿಯ ತೇರಿಗೆ ಬಾಳೆ ಹಣ್ಣು ಎಸೆದಿದ್ದಾರೆ. ಎಸೆದ ಬಾಳೆಹಣ್ಣಿನಲ್ಲಿ ʻʻರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿʼ ಎಂಬ ಕೋರಿಕೆ ಸಲ್ಲಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲೂಕು ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವದ ವೇಳೆ ಈ ಘಟನೆ ನಡೆದಿದೆ. ʻʻದೇಶದ ಎಲ್ಲ ಸಮಸ್ಯೆಗಳಲ್ಲಿ ಬಹುದೊಡ್ಡ ಸಮಸ್ಯೆ ಅಂದರೆ ರೈತರಿಗೆ ಕನ್ಯಾ ಕೊಡುವುದಿಲ್ಲ ಅನ್ನುವುದು. ಕೇವಲ ನೌಕರಿ ಇದ್ದರೆ ಮಾತ್ರ ಕನ್ಯಾ ಕೊಡ್ತೀವಿ ಅನ್ನೋ ಮನಸ್ಥಿತಿ ಇದೆ. ಅದು ಬದಲಾಗಲಿ. ಹೆಣ್ಣು ಮಕ್ಕಳು ಮತ್ತು ಹೆಣ್ಣು ಹೆತ್ತವರ ಮನಸ್ಸು ಬದಲಾಗಲಿ. ರೈತರಿಗೆ ಕನ್ಯಾ ಕೊಡಲಿʼʼ ಎಂದು ತಾಯಿ ದುರ್ಗಾ ಮಾತೆಗೆ ನಮನ ಸಲ್ಲಿಸಿದ ಯುವಕನೊಬ್ಬ ಹೇಳಿದ್ದಾರೆ.

ಇಲ್ಲಿ ಒಬ್ಬಿಬ್ಬರು ಅಂತಲ್ಲ ನೂರಾರು ಮಂದಿ ಹುಡುಗಿ ಬೇಕು ಎನ್ನುವ ಬೇಡಿಕೆ ಇಟ್ಟುಕೊಂಡೇ ದೇವರಲ್ಲಿ ಪ್ರಾರ್ಥನೆ ನಡೆಸಿದ್ದಾರೆ. ಈ ಭಾಗದಲ್ಲಿ ಸಾಕಷ್ಟು ಯುವಕರು ವಯಸ್ಸು ಮೂವತೈದು ದಾಟಿದರೂ ಹುಡುಗಿ ಸಿಗದೆ ಮದುವೆ ಆಗಲು ಆಗದೆ ಸಂಕಷ್ಟದಲ್ಲಿದ್ದಾರೆ.

ಇದನ್ನೂ ಓದಿ | ಸಿದ್ದು ಸಿಎಂ ಆಗಲಿ ಎಂದು ಬಿನ್ನಾಳ ಜಾತ್ರೆಯ ರಥಕ್ಕೆ ಬಾಳೆಹಣ್ಣು ಎಸೆದ ಅಭಿಮಾನಿಗಳು

Exit mobile version