Site icon Vistara News

BSY – Somanna Tussle : ಮಹದೇಶ್ವರ ಬೆಟ್ಟದ ಕಾರ್ಯಕ್ರಮಕ್ಕೆ ಗೈರು; ಬಿಎಸ್‌ವೈ-ಸೋಮಣ್ಣ ಮುಖಾಮುಖಿ ಚಾನ್ಸ್‌ ಮಿಸ್‌

Somanna BSY

#image_title

ಚಾಮರಾಜನಗರ: ಹೊಸ ರಾಜಕೀಯ ಪರಿಸ್ಥಿತಿಯಲ್ಲಿ ಪರಸ್ಪರ ರಾಜಕೀಯ ವೈರಿಗಳಂತೆ ಬಿಂಬಿಸಲಾಗುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಸಚಿವ ವಿ. ಸೋಮಣ್ಣ (BSY – Somanna Tussle) ಅವರ ಮುಖಾಮುಖಿಯ ಮತ್ತೊಂದು ಅವಕಾಶ ಮಿಸ್‌ ಆಗಿದೆ.

ಸಚಿವರಾಗಿರುವ ಸೋಮಣ್ಣ ಅವರು ಬಿಎಸ್‌ವೈ ಮತ್ತು ಅವರ ಪುತ್ರ ವಿಜಯೇಂದ್ರ ಅವರ ಮೇಲೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ ಎಂಬ ವದಂತಿಗಳಿದ್ದವು. ಇದೇ ಕಾರಣಕ್ಕಾಗಿ ಸೋಮಣ್ಣ ಬಿಜೆಪಿಗೇ ಗುಡ್‌ ಬೈ ಹೇಳುತ್ತಾರೆ ಎಂಬ ಮಾತಿತ್ತು. ಆದರೆ, ಇತ್ತೀಚೆಗೆ ಮಾಧ್ಯಮ ಗೋಷ್ಠಿಯಲ್ಲಿ ಬಿಜೆಪಿ ಬಿಡುವುದನ್ನು ನಿರಾಕರಿಸಿದರು. ಆದರೆ, ಬಿಎಸ್‌ವೈ ಹಾಗೂ ವಿಜಯೇಂದ್ರ ಜತೆಗಿನ ಸಂಘರ್ಷದ ಹಲವು ಸುಳಿವುಗಳನ್ನು ಬಿಟ್ಟುಕೊಟ್ಟಿದ್ದರು. ಬಿಎಸ್‌ವೈ ಮತ್ತು ಸೋಮಣ್ಣ ಅವರು ಮುಖಾಮುಖಿಯಾಗದೆ ಮೂರು ತಿಂಗಳೇ ಆಗಿತ್ತು. ಬಿಎಸ್‌ವೈ ಇದ್ದಾರೆ ಎಂಬ ಕಾರಣಕ್ಕೇ ಸೋಮಣ್ಣ ಅವರು ಚಾಮರಾಜನಗರದಲ್ಲಿ ನಡೆದ ಬಿಜೆಪಿಯ ದೊಡ್ಡ ಕಾರ್ಯಕ್ರಮವನ್ನು ಕೂಡಾ ಮಿಸ್‌ ಮಾಡಿಕೊಂಡಿದ್ದರು ಎಂಬ ಮಾತಿತ್ತು. ಒಮ್ಮೆ ಮುಖಾಮುಖಿಯಾದರೆ, ಮಾತುಕತೆ ನಡೆದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು ಎಂಬ ನಿರೀಕ್ಷೆ ಇತ್ತು.

ಹೀಗಾಗಿ ಚಾಮರಾಜನಗರದ ಮಹದೇಶ್ವರ ಬೆಟ್ಟದಲ್ಲಿ ಆಯೋಜನೆಗೊಂಡಿರುವ 108 ಅಡಿ ಎತ್ತರದ ಮಹದೇಶ್ವರನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹದೇಶ್ವರನ ವಿರಾಟ್‌ ಮೂರ್ತಿಯನ್ನು ಲೋಕಾರ್ಪಣೆಗೊಳಿಸುವ ಈ ಕಾರ್ಯಕ್ರಮದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದಾರೆ. ಸಚಿವರಾದ ಶಶಿಕಲಾ ಜೊಲ್ಲೆ, ಎಸ್‌ಟಿ ಸೋಮಶೇಖರ್‌, ಸಿ.ಸಿ. ಪಾಟೀಲ್‌ ಭಾಗಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ವಿ. ಸೋಮಣ್ಣ ಅವರ ಉಸ್ತುವಾರಿಯಲ್ಲೇ ಈ ಕಾರ್ಯಕ್ರಮ ನಡೆಯುತ್ತಿದೆ.

ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಹೀಗಾಗಿ ಈ ವೇದಿಕೆಯಲ್ಲಿ ಸೋಮಣ್ಣ ಮತ್ತು ಬಿಎಸ್‌ವೈ ಮುಖಾಮುಖಿ ನಡೆಯಬಹುದು ಎಂಬ ನಿರೀಕ್ಷೆ ಇತ್ತು. ಈ ಕಾರ್ಯಕ್ರಮಕ್ಕೆ ಬಿಎಸ್‌ವೈ ಬರುತ್ತಾರಾ ಎಂಬ ಪ್ರಶ್ನೆಗೆ ಶುಕ್ರವಾರ ವಿ. ಸೋಮಣ್ಣ ಅವರು ಮಾರ್ಮಿಕ ಉತ್ತರ ನೀಡಿದ್ದರು. ಇದೊಂದು ದೇವರ ಕಾರ್ಯಕ್ರಮ. ಎಲ್ಲರಿಗು ಆಹ್ವಾನ ನೀಡಿದ್ದೇವೆ. ಮಹದೇಶ್ವರನಿಗೆ ಯಾರು ಇಷ್ಟವೋ ಅವರನ್ನು ಕರೆಸಿಕೊಳ್ಳುತ್ತಾನೆ ಎಂದಿದ್ದರು.

ಹಾಗಿದ್ದರೆ ಎಲ್ಲಿದ್ದಾರೆ ಬಿ.ಎಸ್‌. ಯಡಿಯೂರಪ್ಪ?

ಶನಿವಾರ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಆಗಲೇ ಸಿಎಂ ಬಸವರಾಜ ಬೊಮ್ಮಾಯಿ ಬಂದಿದ್ದಾರೆ. ಆಹ್ವಾನಿತ ಗಣ್ಯರೆಲ್ಲರೂ ಇದ್ದಾರೆ. ಆದರೆ, ಬಿ.ಎಸ್‌ ಯಡಿಯೂರಪ್ಪ ಅವರು ಬಂದಿಲ್ಲ. ಬೆಳಗ್ಗೆ ಶಿವಮೊಗ್ಗದಿಂದ ಹೆಲಿಕಾಪ್ಟರ್‌ನಲ್ಲಿ ತಿಪಟೂರಿಗೆ ತೆರಳಿದಿ ಬಿಎಸ್‌ ಯಡಿಯೂರಪ್ಪ ಅವರು ಅಲ್ಲಿಂದ ರಸ್ತೆ ಮೂಲಕ ಚಿಕ್ಕನಾಯಕನ ಹಳ್ಳಿಗೆ ಹೋಗುವ ಪ್ಲ್ಯಾನ್‌ ಹೊಂದಿದ್ದಾರೆ. ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.

ಇದೀಗ ಬಿಎಸ್‌. ಯಡಿಯೂರಪ್ಪ ಅವರು ಮಹದೇಶ್ವರ ಪ್ರತಿಮೆ ಲೋಕಾರ್ಪಣೆಗೆ ಆಗಮಿಸದೆ ಇರುವುದು ಸೋಮಣ್ಣ ಮತ್ತು ಬಿಎಸ್‌ ಯಡಿಯೂರಪ್ಪ ನಡುವೆ ಇರುವ ಗಂಭೀರ ಭಿನ್ನಮತವನ್ನು ಎತ್ತಿತೋರಿಸಿದೆ.

ಇದನ್ನೂ ಓದಿ : V. Somanna: ಭವಿಷ್ಯಕ್ಕೆ ಏನು ಬೇಕೊ ಅದು ಮಾಡಿದರೆ ಹೈಕ್ಲಾಸ್‌ ಆಗುತ್ತೆ: ಬಿ.ವೈ. ವಿಜಯೇಂದ್ರ ಕುರಿತು ವಿ. ಸೋಮಣ್ಣ ಮಾತು

Exit mobile version