ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಶಂಕರ್ ಜಿ.ಕೆ (೫೬) (Ravi Shankar) ಅವರು ಗುರುವಾರ (ಡಿ.೨೯) ಬೆಳಗ್ಗೆ ಮೋಕಾ ರಸ್ತೆಯಲ್ಲಿ ವಾಕ್ ಮಾಡುವ ಸಂದರ್ಭದಲ್ಲಿ ಹೃದಾಯಾಘಾತವಾಗಿ ನಿಧನರಾದರು.
ರವಿಶಂಕರ್ ಅವರು ಕಳೆದ ೧೮ ವರ್ಷಗಳಿಂದ ಬುಡಾದಲ್ಲಿ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಇವರು ಮೂಲತಃ ಈಗಿನ ವಿಜಯನಗರ ಜಿಲ್ಲೆಯ ಗುಡೇಕೋಟೆಯವರು. ಇವರ ಅಂತ್ಯಕ್ರಿಯೆ ಬಳ್ಳಾರಿಯ ವೀರಶೈವ ರುದ್ರಭೂಮಿಯಲ್ಲಿ ಗುರುವಾರ ಸಂಜೆಯೊಳಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಅಮಾನವೀಯತೆಯ ಪರಮಾವಧಿ; ದಲಿತರ ಕುಡಿವ ನೀರಿನ ಟ್ಯಾಂಕ್ಗೆ ಮಲ ಸುರಿದ ದುಷ್ಕರ್ಮಿಗಳು, ಮಕ್ಕಳಿಗೆ ಅನಾರೋಗ್ಯ