Site icon Vistara News

Budget 2023 : ಮೋದಿ ಸರ್ಕಾರ ಅನುದಾನ ಘೋಷಿಸಿದ ಭದ್ರಾ ಮೇಲ್ದಂಡೆ ಯೋಜನೆ ಏನು? ಅದರಿಂದ ಯಾರಿಗೆ ಲಾಭ? ಇಲ್ಲಿದೆ ಸಂಪೂರ್ಣ ವಿವರ

budget 2023 complete details about upper bhadra project

#image_title

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೇಂದ್ರ ಸರ್ಕಾರ ಅನುದಾನ ನೀಡುವುದಾಗಿ ಕೇಂದ್ರ ಬಜೆಟ್‌ನಲ್ಲಿ (Budget 2023) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ. ಇದರಿಂದ, ಬರಪೀಡಿತ ಮಧ್ಯ ಕರ್ನಾಟಕಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ. ಹಾಗಾದರೆ ಈ ಯೋಜನೆ ಏನು? ಯಾವಾಗ ಆರಂಭವಾಯಿತು? ಅದರಿಂದ ಯಾರಿಗೆ ಅನುಕೂಲ ಎಂಬ ಕುರಿತು ಪೂರ್ಣ ಮಾಹಿತಿ ಇಲ್ಲಿದೆ.

ಭದ್ರಾ ಮೇಲ್ದಂಡೆ ಯೋಜನೆ
ಭದ್ರಾ ಮೇಲ್ದಂಡೆ ಯೋಜನೆಯನ್ನು ಮಧ್ಯ ಕರ್ನಾಟಕದ ಬರಪೀಡಿತ ಚಿತ್ರದುರ್ಗ, ಚಿಕ್ಕಮಗಳೂರು,
ದಾವಣಗೆರೆ ಹಾಗೂ ತುಮಕೂರು ಜಿಲ್ಲೆಯಲ್ಲಿನ 2,25,515 ಹೆಕ್ಟೇರ್ (5,57,022 ಎಕರೆ) ಭೂ ಪ್ರದೇಶಕ್ಕೆ
ಹನಿ ನೀರಾವರಿ ಪದ್ದತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ 367 ಕೆರೆಗಳಿಗೆ ನೀರನ್ನು ತುಂಬಿಸಲು
ಉದ್ದೇಶಿಸಿ ರೂಪಿಸಲಾಗಿದೆ.

➢ ನೀರಿನ ಹಂಚಿಕೆ:- ಭದ್ರಾ ಮೇಲ್ದಂಡೆ ಯೋಜನೆಗೆ 29.90 ಟಿ.ಎಂ.ಸಿ. ನೀರಿನ ಹಂಚಿಕೆ ಮಾಡಲಾಗಿದೆ.
➢ ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿ:-
– 2020-21 ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ 21473.67 ಕೋಟಿ ರೂ.ಗೆ ಅನುಮೋದನೆಯಾಗಿದೆ (16-12-2020).

ಯೋಜನೆಯ ಪ್ರಮುಖ ಅಂಶಗಳು ಹೀಗಿವೆ

ಅನುದಾನದ ವೆಚ್ಚ ಹೇಗೆ?

ಯೋಜನೆಯಿಂದ ತಾಲ್ಲೂಕಾವಾರು ನೀರಾವರಿ ಗೊಳಪಡುವ ಪ್ರದೇಶ ಹಾಗೂ ತುಂಬಿಸುವ ಕೆರೆಗಳ ವಿವರಗಳು
(ಜಿಲ್ಲಾ/ತಾಲ್ಲೂಕುವಾರು ನೀರಿನ ಹಂಚಿಕೆಯ ವಿವರಗಳೊಂದಿಗೆ)

ಯೋಜನೆಯ ರೂಪರೇಷೆಗಳು:

➢ ತುಂಗಾ ನದಿಯಿಂದ 17.40 ಟಿ.ಎಂ.ಸಿ. ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಭದ್ರಾ
ಜಲಾಶಯಕ್ಕೆ ನೀರು ಹರಿಸುವುದು, ಭದ್ರಾಜಲಾಶಯದಿಂದ 29.90 ಟಿ.ಎಂ.ಸಿ. ನೀರನ್ನು ಎರಡು
ಹಂತಗಳಲ್ಲಿ ಲಿಫ್ಟ್ ಮಾಡಿ ಅಜ್ಜಂಪುರ ¸ ಸುರಂಗದವರೆಗೆ ಕೊಂಡೊಯ್ಯುವುದು ಮತ್ತು ಅಜ್ಜಂಪುರ ಸುರಂಗ ಮಾರ್ಗದ ಮೂಲಕ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸುವುದು.

➢ ಈ ಯೋಜನೆಗಾಗಿ ಒಟ್ಟು 4 ಸ್ಥಳದಲ್ಲಿ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ತುಂಗಾ ನದಿಯಿಂದ ಭದ್ರಾ
ಜಲಾಶಯಕ್ಕೆ ಹೋಗುವ ಕಾಲುವೆ ಮಾರ್ಗದ 2 ಸ್ಥಳಗಳಲ್ಲಿ 80ಮೀ ಎತ್ತರಕ್ಕೆ (ಎನ್.ಆರ್.ಪುರ
ತಾಲ್ಲೂಕಿನ ಕಣಬೂರು ಮತ್ತು ಕುಸಬೂರು ಗ್ರಾಮಗಳ ಹತ್ತಿರ) ಹಾಗೂ ಭದ್ರಾ ಜಲಾಶಯದಿಂದ
ಅಜ್ಜಂಪುರ ಸುರಂಗಕ್ಕೆ ಹೋಗುವ ಕಾಲುವೆಯ ಮಾರ್ಗದಲ್ಲಿ 2 ಸ್ಥಳಗಳಲ್ಲಿ, 80ಮೀ ಎತ್ತರಕ್ಕೆ (ತರೀಕೆರೆ
ತಾಲ್ಲೂಕಿನ ಶಾಂತಿಪುರ ಮತ್ತು ಬೆಟ್ಟತಾವರೆಕೆರೆ ಗ್ರಾಮಗಳ ಹತ್ತಿರ) ಲಿಫ್ಟ್ ಮಾಡಲಾಗುವುದು.

➢ ತರೀಕೆರೆ ಏತ ನೀರಾವರಿ ಮುಖಾಂತರ ತರೀಕೆರೆ ತಾಲ್ಲೂಕಿನ 20,150 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ
ಮೂಲಕ ನೀರನ್ನು ಒದಗಿಸುವುದು ಹಾಗೂ 79 ಕೆರೆಗಳನ್ನು ತುಂಬಿಸುವುದು.

➢ ಚಿತ್ರದುರ್ಗ ಶಾಖಾ ಕಾಲುವೆ ಮುಖಾಂತರ ಚಿಕ್ಕಮಗಳೂರು ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಹನಿ
ನೀರಾವರಿ ಮೂಲಕ 1,07,265 ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಕಲ್ಪಿಸಿ 36 ಕೆರೆಗಳಿಗೆ ನೀರನ್ನು
ತುಂಬಿಸುವುದು.

➢ ತುಮಕೂರು ಶಾಖಾ ಕಾಲುವೆ ಮುಖಾಂತರ ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ತುಮಕೂರು
ಜಿಲ್ಲೆಗಳಲ್ಲಿ ಹನಿ ನೀರಾವರಿ ಮುಖಾಂತರ 84,900 ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಕಲ್ಪಿಸಿ, 131 ಕೆರೆಗಳಿಗೆ
ನೀರನ್ನು ತುಂಬಿಸುವುದು.

➢ ಜಗಳೂರು ಕಾಲುವೆ ಮುಖಾಂತರ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಮತ್ತು ಚಿತ್ರದುರ್ಗ
ತಾಲ್ಲೂಕಿನ ಒಟ್ಟು 13,200 ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಕಲ್ಪಿಸಿ, 9 ಕೆರೆಗಳಿಗೆ ನೀರನ್ನು ತುಂಬಿಸುವುದು.
➢ ಹೊಳಲ್ಕೆರೆ ತಾಲೂಕಿನಲ್ಲಿ ಬರುವ 21 ಕೆರೆಗಳಿಗೆ, ಚಳ್ಳಕೆರೆ ತಾಲ್ಲೂಕಿನಲ್ಲಿ ಬರುವ 41 ಕೆರೆಗಳಿಗೆ,
ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಬರುವ 20 ಕೆರೆಗಳಿಗೆ ನೀರನ್ನು ತುಂಬಿಸುವುದು.
➢ ಪಾವಗಡ ತಾಲೂಕಿನಲ್ಲಿ ಬರುವ 30 ಕೆರೆಗಳಿಗೆ ನೀರನ್ನು ತುಂಬಿಸುವುದು.
➢ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ತುಮಕೂರು ಶಾಖಾ ಕಾಲುವೆ ಮುಖಾಂತರ 2.00 ಟಿ.ಎಂ.ಸಿ
ನೀರನ್ನು ಹರಿಸುವುದು.

ಇದನ್ನೂ ಓದಿ : Budget 2023 : ಭದ್ರಾ ಮೇಲ್ದಂಡೆಗೆ ಅನುದಾನ: ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಇಲ್ಲಿವರೆಗಿನ ಪ್ರಗತಿ(ಡಿಸೆಂಬರ್‌ 2022)

ಹಂತ-1
ಪ್ರಥಮ ಹಂತದಲ್ಲಿ ಈ ಕೆಳಗಿನ ಬರುವ ಮೂರು ಪ್ರಮುಖ ಕಾಮಗಾರಿಗಳನ್ನು 1,580 ಕೋಟಿ ರೂ. ಮೊತ್ತದಲ್ಲಿ 2008ರಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಪ್ರಗತಿಯಲ್ಲಿದೆ.
1. ತುಂಗಾ ನದಿಯಿಂದ ಭದ್ರಾಜಲಾಶಯಕ್ಕೆ ಲಿಫ್ಟ್ ಮಾಡುವುದು (ಪ್ಯಾಕೇಜ್‌-1): ಶೇ.65 ಕಾಮಗಾರಿ ಪೂರ್ಣಗೊಂಡಿದೆ.
2. ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗದವರೆಗೆ ನೀರನ್ನು ಲಿಫ್ಟ್ ಮಾಡುವುದು(ಪ್ಯಾಕೇಜ್-2): ಪೂರ್ಣಗೊಂಡಿದೆ.
3. ಅಜ್ಜಂಪುರ ಸುರಂಗ ನಿರ್ಮಾಣ (ಪ್ಯಾಕೇಜ್-3): ಪೂರ್ಣಗೊಂಡಿದೆ.

ಭದ್ರಾಜಲಾಶಯದಿಂದ ಅಜ್ಜಂಪುರ ಸುರಂಗದ ಮೂಲಕ ನೀರನ್ನು 2019-2020ನೇ ಸಾಲಿನಲ್ಲಿ ವಾಣಿ ವಿಲಾಸ ಸಾಗರಕ್ಕೆ 3.44 ಟಿ.ಎಂ.ಸಿ ಹರಿಸಿದ್ದು, 2020-21ನೇ ಸಾಲಿನಲ್ಲಿ ಭದ್ರಾಜಲಾಶಯದಿಂದ 6.61 ಟಿ.ಎಂ.ಸಿ ನೀರನ್ನು ವಾಣಿ ವಿಲಾಸ ಸಾಗರಕ್ಕೆ ಹರಿಸಲಾಗಿದೆ. 2021ರ ಜುಲೈ 7ರಿಂದ 2021ರ ಆಗಸ್ಟ್‌ 10ರವರೆಗೆ ವಾಣಿ ವಿಲಾಸ ಸಾಗರಕ್ಕೆ 6.82 ಟಿ.ಎಂ.ಸಿ ನೀರನ್ನು ಹರಿಸಲಾಗಿದೆ. 2022-23 ನೇ ಸಾಲಿನಲ್ಲಿ ಬಾರಿ ಮಳೆಯಿಂದಾಗಿ ಜಲಾಶಯವು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ.

(ii)ಹಂತ-2
ಎರಡನೇ ಹಂತದಲ್ಲಿ ತರೀಕೆರೆ ಏತ ನೀರಾವರಿ, ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ಶಾಖಾ ಕಾಲುವೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಪ್ರಸ್ತುತ ಹಂತ ಈ ಕೆಳಕಂಡಂತೆ ಪ್ರಗತಿಯಲ್ಲಿದೆ.

➢ ತರೀಕೆರೆ ಏತ ನೀರಾವರಿ ಯೋಜನೆ: ತರೀಕೆರೆ ತಾಲ್ಲೂಕಿನ 20,150 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ
ಪದ್ಧತಿಯಲ್ಲಿ ನೀರೊದಗಿಸುವ ಮತ್ತು 79 ಕೆರೆಗಳನ್ನು ತುಂಬಿಸಲು 812.02 ಕೋಟಿ ರೂ. ಮೊತ್ತದ (2
ಪ್ಯಾಕೇಜ್‌ಗಳಲ್ಲಿ) ತರೀಕೆರೆ ಏತ ನೀರಾವರಿ ಯೋಜನಾ ಕಾಮಗಾರಿಗಳು ಪ್ರಗತಿಯಲ್ಲಿವೆ. ತರೀಕೆರೆ ಏತ
ನೀರಾವರಿ ಪ್ಯಾಕೇಜ್-2ಗೆ ಸಂಬಂಧಿಸಿದಂತೆ 9,892 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಸೃಜಿಸಲಾಗಿರುತ್ತದೆ.
➢ ಚಿತ್ರದುರ್ಗ ಶಾಖಾ ಕಾಲುವೆ : 134.597 ಕಿಲೋಮೀಟರ್‌ವರೆಗಿನ ಚಿತ್ರದುರ್ಗ ಶಾಖಾ
ಕಾಲುವೆಯ 1639.53 ಕೋಟಿ ರೂ. ಮೊತ್ತದ ಕಾಮಗಾರಿಯನ್ನು 12 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿದ್ದು, ಕಾಮಗಾರಿಗಳ ಪ್ರಗತಿಯು ವಿವಿಧ ಹಂತದಲ್ಲಿರುತ್ತವೆ. ಒಟ್ಟು 134.597 ಕಿ.ಮೀ ಕಾಲುವೆ ಹಾದು
ಹೋಗುತ್ತಿದ್ದು, 118.41 ಕಿ.ಮೀ ಕಾಲುವೆ ಅಗೆತ ಪೂರ್ಣಗೊಂಡಿರುತ್ತದೆ. 103.56 ಕಿ.ಮೀ ಸಿ.ಬಿ.ಎಲ್‌ವರೆಗೆ ಕಾಲುವೆ ಅಗೆತ ಪೂರ್ಣಗೊಂಡಿರುತ್ತದೆ. 82.60 ಕಿ.ಮೀ ಕಾಲುವೆ ಲೈನಿಂಗ್ ಪೂರ್ಣಗೊಂಡಿದೆ.
➢ ತುಮಕೂರು ಶಾಖಾ ಕಾಲುವೆ: 159.684 ಕಿಲೋಮೀಟರ್‌ವರೆಗಿನ ತುಮಕೂರು ಶಾಖಾ
ಕಾಲುವೆಯ 1107.36 ಕೋಟಿ ರೂ. ಮೊತ್ತದ ಕಾಮಗಾರಿಯನ್ನು 9 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿದ್ದು, ಕಾಮಗಾರಿಗಳ ಪ್ರಗತಿಯು ವಿವಿಧ ಹಂತದಲ್ಲಿರುತ್ತವೆ. ಒಟ್ಟು 159.684 ಕಿ.ಮೀ ಕಾಲುವೆ ಹಾದು
ಹೋಗುತ್ತಿದ್ದು, 72.34 ಕಿ.ಮೀ ಕಾಲುವೆ ಅಗೆತ ಪೂರ್ಣಗೊಂಡಿದೆ. 43.68 ಕಿ.ಮೀ ಸಿ.ಬಿ.ಎಲ್‌ವರೆಗೆ ಕಾಲುವೆ ಅಗೆತ ಪೂರ್ಣಗೊಂಡಿದೆ. 15.50 ಕಿ.ಮೀ ಕಾಲುವೆ ಲೈನಿಂಗ್ ಪೂರ್ಣಗೊಂಡಿದೆ.

ಇದನ್ನೂ ಓದಿ : Budget 2023 : ರಾಜ್ಯದ ಮೇಲೆ ಮೋದಿ ಕಣ್ಣು: ಬಜೆಟ್‌ನಲ್ಲಿ ಪ್ರಸ್ತಾಪವಾದ ಏಕೈಕ ರಾಜ್ಯ ಕರ್ನಾಟಕ !

➢ ಕೆರೆ ತುಂಬಿಸುವ ಕಾಮಗಾರಿಗಳು:
✓ ಚಳ್ಳಕೆರೆ ಮತು ್ತ ಮೊಳಕಾಲ್ಮೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿ:
ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿ ಚಿತ್ರದುರ್ಗ ಶಾಖಾ ಕಾಲುವೆಯ 120.82 ಕಿ.ಮೀನಿಂದ ಪ್ರಾರಂಭವಾಗುತ್ತಿದ್ದು 705.87 ಕೋಟಿ ರೂ. ಮೊತ್ತದ ಕಾಮಗಾರಿಯನ್ನು 3 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿದ್ದು, ಪ್ರಗತಿಯಲ್ಲಿದೆ.
✓ ಪಾವಗಡ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿ:
ಚಿತ್ರದುರ್ಗ ಶಾಖಾ ಕಾಲುವೆಯ 132.05 ಕಿ.ಮೀನಿಂದ ಪೈಪಲೈನ್ ಮೂಲಕ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು 632.45 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಪ್ರಗತಿಯಲ್ಲಿದೆ.
✓ ಹೊಳಲ್ಕೆರೆ ಫೀಡರ್ ಕಾಲುವೆ: ಚಿತ್ರದುರ್ಗ ಶಾಖಾ ಕಾಲುವೆಯಡಿ ಬರುವ ಹೊಳಲ್ಕೆರೆ ಫೀಡರ್
ಕಾಲುವೆಯ ರೂ. 196.75 ಕೋಟಿ ಮೊತ್ತದ ಕಾಮಗಾರಿಯನ್ನು 3 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿದ್ದು, ಪ್ರಗತಿಯಲ್ಲಿದೆ.
✓ ಶಿರಾ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆ ತುಂಬಿಸುವುದು.
ತುಮಕೂರು ಶಾಖಾ ಕಾಲುವೆಯ 159.180 ಕಿಮೀ ನಿಂದ ಪೈಪಲೈನ್ ಮೂಲಕ ಶಿರಾ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ರೂ.1165.29 ಕೋಟಿ ಮೊತ್ತದ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಪ್ರಗತಿಯಲ್ಲಿದೆ. ತುಮಕೂರು ಶಾಖಾ ಕಾಲುವೆಯ 113.329 ಕಿಮೀ ನಿಂದ ಪೈಪಲೈನ್ ಮೂಲಕ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ 69.74 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಪ್ರಗತಿಯಲ್ಲಿದೆ.

➢ ಹನಿ ನೀರಾವರಿ :
ತರೀಕೆರೆ ಏತ ನೀರಾವರಿ ಯೋಜನೆ ಅಡಿ, 2022 ಮಾರ್ಚ್ ವೇಳೆಗೆ ತರೀಕೆರೆ ಏತ ನೀರಾವರಿ ಯೋಜನೆಯ ಎರಡನೇ ಪ್ಯಾಕೇಜನ್ನು ಪರೀಕ್ಷಾರ್ಥ ಚಾಲನೆಗೊಳಿಸಿ, ಒಟ್ಟು 9892.22 ಹೆಕ್ಟೇರ್ ಪ್ರದೇಶವನ್ನು Dry Potential ಅಡಿ ಸೃಜಿಸಲಾಗಿರುತ್ತದೆ. ಬಾಕಿ ಉಳಿದ 10,257.80 ಹೆಕ್ಟೇರ್ ಪ್ರದೇಶವನ್ನು ಸೃಜಿಸಕಾಗುತ್ತಿದೆ.

ಚಿತ್ರದುರ್ಗ ಶಾಖಾ ಕಾಲುವೆಯಡಿ 40,749 ಹೆಕ್ಟೇರ್, ತುಮಕೂರು ಶಾಖಾ ಕಾಲುವೆಯಡಿ 27,590 ಹೆಕ್ಟೇರ್ ಮತ್ತು ಜಗಳೂರು ಶಾಖಾ ಕಾಲುವೆಯಡಿ 13,200 ಹೆಕ್ಟೇರ್ ಪ್ರದೇಶವನ್ನು ಸೃಜಿಸಲು ಕಾಮಗಾರಿಗಳಿಗೆ ಗುತ್ತಿಗೆ ಕರಾರು ಮಾಡಿಕೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಚಿತ್ರದುರ್ಗ ಶಾಖಾ ಕಾಲುವೆಯಡಿ ಬಾಕಿ ಉಳಿದ 66,516 ಹೆಕ್ಟೇರ್ ಪ್ರದೇಶಕ್ಕೆ ಟೆಂಡರ್ ಆಹ್ವಾನಿಸಲಾಗುತ್ತದೆ. ತುಮಕೂರು ಶಾಖಾ ಕಾಲುವೆಯಡಿ ಬಾಕಿ ಉಳಿದ 49,159.56 ಹೆಕ್ಟೇರ್ ಪ್ರದೇಶಕ್ಕೆ ಟೆಂಡರ್ ಆಹ್ವಾನಿಸಲಾಗುತ್ತದೆ. ಅದರವಿವರ ಈ ಕೆಳಗಿನಂತಿದೆ:
*ಚಿತ್ರದುರ್ಗ ಶಾಖಾ ಕಾಲುವೆಯ 61.23 ಕಿಲೋಮೀಟರ್‌ವರೆಗೆ 40749 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವುದಕ್ಕಾಗಿ 3 ಪ್ಯಾಕೇಜ್‌ಗಳಾಗಿ ಕೈಗೆತ್ತಿಕೊಳ್ಳಲಾಗಿದ್ದು, ರೂ. 2,389.87 ಕೋಟಿ ಮೊತ್ತದ ಟೆಂಡರ್ ಗುತ್ತಿಗೆ ಮಾಡಿಕೊಳ್ಳಲಾಗಿದೆ. ಒಂದು ಕಾಮಗಾರಿಯ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ. ಇನ್ನೆರಡು ಕಾಮಗಾರಿಯ ಸರ್ವೆ ಕಾರ್ಯವು ಪೂರ್ಣಗೊಂಡಿದ್ದು, ವಿನ್ಯಾಸವನ್ನು ಅನುಮೋದನೆಗೆ ಸಲ್ಲಿಸಲಾಗಿದೆ.
*ತುಮಕೂರು ಶಾಖಾ ಕಾಲುವೆಯ 76 kilOmIqrffvregin 27,590 ಹೆ. ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವುದಕ್ಕಾಗಿ 2 ಪ್ಯಾಕೇಜ್‌ಗಳಾಗಿ ಕೈಗೆತ್ತಿಕೊಳ್ಳಲಾಗಿದ್ದು, ರೂ. 1,286.79 ಕೋಟಿ ಮೊತ್ತದ ಟೆಂಡರ್ ಗುತ್ತಿಗೆ ಮಾಡಿಕೊಳ್ಳಲಾಗಿದೆ. ಕಾಮಗಾರಿಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ.
*ತುಮಕೂರು ಶಾಖಾ ಕಾಲುವೆಯಡಿ ಹನಿ ನೀರಾವರಿ ಬ್ಲಾಕ್-4 ಕಾಮಗಾರಿಯ ಅಂದಾಜು ಪಟ್ಟಿಯಲ್ಲಿ ಹೊಸದುರ್ಗ ತಾಲ್ಲೂಕಿನ 8150.44 ಹೆ.ಅಚ್ಚುಕಟ್ಟು ಪ್ರದೇಶಕ್ಕೆ ಹನಿ ನೀರಾವರಿ ಮತ್ತು 25 ಕೆರೆಗಳಿಗೆ ನೀರು ಹರಿಸಲು ಅವಕಾಶ ಕಲ್ಪಿಸಲಾಗಿದೆ. ರೂ.465.00 ಕೋಟಿ ಮೊತ್ತದ ಅಂದಾಜು ಪಟ್ಟಿಗೆ ತಾಂತ್ರಿಕ ಮಂಜೂರಾತಿ ನೀಡಲಾಗಿದ್ದು, ಟೆಂಡರ್‌ ಆಹ್ವಾನಿಸಲಾಗಿದೆ.
*ತುಮಕೂರು ಶಾಖಾ ಕಾಲುವೆಯಡಿ ಹನಿ ನೀರಾವರಿ ಬ್ಲಾಕ್-5,6,7&8 ಕಾಮಗಾರಿಗ¼ À ಅಂದಾಜು
ಪಟ್ಟಿಗೆ ತಾಂತ್ರಿಕ ಮಂಜೂರಾತಿ ನೀಡಲಾಗಿದ್ದು, ಟೆಂಡರ್‌ನ್ನು ಆಹ್ವಾನಿಸಬೇಕಿರುತ್ತದೆ.
*ಜಗಳೂರು ಶಾಖಾ ಕಾಲುವೆ: ಈ ಕಾಲುವೆಯು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಜಗಳೂರು
ತಾಲೂಕುಗಳಲ್ಲಿ ಬರುತ್ತದೆ. ಈ ಕಾಮಗಾರಿಯನ್ನು 2 ಪ್ಯಾಕೇಜ್‌ಗಳಾಗಿ ಕೈಗೆತ್ತಿಕೊಳ್ಳಲಾಗಿದ್ದು, ರೂ.1,833.45 ಕೋಟಿ ಮೊತ್ತದ ಟೆಂಡರ್ ಗುತ್ತಿಗೆ ಮಾಡಿಕೊಳ್ಳಲಾಗಿದೆ. ಸರ್ವೆ ಕಾರ್ಯ ಮುಗಿದಿದೆ.

ಭೂಸ್ವಾಧೀನ:
ಭದ್ರಾ ಮೇಲ್ದಂಡೆ ಯೊಜನೆಗೆ ಒಟ್ಟಾರೆ 7,720 ಎಕರೆ 36.94 ಗುಂಟೆ ಭೂಮಿ ಅವಶ್ಯಕತೆ ಇದ್ದು, ಇದರಲ್ಲಿ ಈವರೆಗೆ 3,922 ಎಕರೆ 13.88 ಗುಂಟೆ ವಶಕ್ಕೆ ಪಡೆಯಲಾಗಿದೆ. ಇಲ್ಲಿಯವರೆಗೂ ರೂ.8537.23 ಕೋಟಿಗಳನ್ನು ಠೇವಣಿ ಮಾಡಲಾಗಿದ್ದು, ರೂ.800.00 ಕೋಟಿಗಳ ಅನುದಾನ ಅವಶ್ಯಕತೆ ಇದೆ.
ಚಿಕ್ಕಮಗಳೂರು, ತರೀಕೆರೆ ಮತ್ತು ಕಡೂರು ಕೆರೆ ತುಂಬಿಸುವ ಯೋಜನೆಗೆ ಒಟ್ಟಾರೆ 63 ಎಕರೆ 33 ಗುಂಟೆ ಭೂಮಿ ಅವಶ್ಯಕತೆ ಇದ್ದು, ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ರೂ.0.96 ಕೋಟಿ ಅನುದಾನ ಅವಶ್ಯಕತೆ ಇದೆ.

Exit mobile version