Site icon Vistara News

Bulls Death | ವಿಜಯನಗರದಲ್ಲಿ ಏಕಾಏಕಿ ಕುಸಿದು ಜೀವಬಿಡುತ್ತಿರುವ ಎತ್ತುಗಳು; ದಡಾರ ಕಾಯಿಲೆ ಶಂಕೆ

ವಿಜಯನಗರ: ಇಲ್ಲಿನ ಕೂಡ್ಲಿಗಿ ತಾಲೂಕಿನ ಶಿವಪುರದ ಗೊಲ್ಲರಹಟ್ಟಿ ಗ್ರಾಮದಲ್ಲಿ ಎತ್ತುಗಳು (Bulls Death) ನಿಂತಲ್ಲೇ ಕುಸಿದು ಬಿದ್ದು ಮೃತಪಡುತ್ತಿವೆ. ಈ ಹಿಂದೆ ಹಾವೇರಿಯಲ್ಲಿ ಜಾನುವಾರುಗಳಿಗೆ ವಿಚಿತ್ರವಾದ ಚರ್ಮ ಗಂಟು ರೋಗ ಕಾಣಿಸಿಕೊಂಡು, ಮಲಗಿದ್ದಲ್ಲಿಂದ ಮೇಲೆ ಏಳಲು ಆಗದೆ ಮತೃಪಡುತ್ತಿರುವ ಪ್ರಕರಣ ಪತ್ತೆಯಾಗಿತ್ತು. ಈಗ ವಿಜಯನಗರದಲ್ಲೂ ಏಕಾಏಕಿ ಜಾನುವಾರುಗಳ ಸಾವಗೀಡಾಗುತ್ತಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.

ವಿಜಯನಗರದಲ್ಲಿ ಜಾನುವಾರು ಸಾವು

ಗ್ರಾಮದ ರೈತ ತಿಪ್ಪಣ್ಣ, ಯರ್ರಪ್ಪ, ನಾಗಪ್ಪ ಎಂಬುವವರ ಎತ್ತುಗಳು ಮೃತಪಟ್ಟಿವೆ. ದಡಾರ ಕಾಯಿಲೆಗಳಿಂದ ಎತ್ತುಗಳು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂರು ದಿನಗಳ ಅಂತರದಲ್ಲಿ 8ಕ್ಕೂ ಹೆಚ್ಚು ಎತ್ತುಗಳ ಸಾವಾಗಿದೆ.

ಇತ್ತ ಸಂಕಷ್ಟಕ್ಕೆ ಸ್ಪಂದಿಸದ ವಿಜಯನಗರ ಜಿಲ್ಲಾಡಳಿತದ ವಿರುದ್ಧ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ. ಮಳೆಯಿಂದಾಗಿ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ರೈತರಿಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಎತ್ತುಗಳ ಸಾವು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ಓದಿ | ಚರ್ಮ ಗಂಟು ರೋಗ: ವಿಜಯಪುರದಲ್ಲಿ ಕಟ್ಟೆಚ್ಚರ, ಮಹಾಗಡಿಯಲ್ಲಿ ತಡೆ, ಜಾನುವಾರು ಜಾತ್ರೆ ರದ್ದು

Exit mobile version