Site icon Vistara News

Bus Accident : ಛಿದ್ರವಾಯ್ತು ಬಾಲಕನ ತಲೆ; ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ!

BMTC bus collides with scooter Boy dies in accident

ಬೆಂಗಳೂರು: ಕಿಲ್ಲರ್‌ ಎಂಬ ಅಪಖ್ಯಾತಿಗೆ ಒಳಗಾಗಿರುವ ಬಿಎಂಟಿಸಿ ಬಸ್‌ ಬಾಲಕನ ಬಲಿ (Bus Accident) ಪಡೆದಿದೆ. ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್‌ನಲ್ಲಿ ಭಾನುವಾರ (ಅ.8) ಸಂಜೆ ಕಿಲ್ಲರ್ ಬಿಎಂಟಿಸಿಗೆ ಮೂರು ವರ್ಷದ ಬಾಲಕ (Killer Bmtc) ಮೃತಪಟ್ಟಿದ್ದಾನೆ. ಆಯಾನ್ ಪಾಷಾ ಮೃತ ದುರ್ದೈವಿ.

3 ವರ್ಷದ ಆಯಾನ್‌ ಪಾಷಾ ದೊಡ್ಡಮ್ಮನ ಜತೆ ವಾಸವಾಗಿದ್ದ. ನಿನ್ನೆ ಭಾನುವಾರ ಸಂಜೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಗಾಡಿ ಹಿಂಬದಿಯಲ್ಲಿ ಕುಳಿತಿದ್ದ ಆಯಾನ್‌ ಪಾಷ್‌ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಸ್ ಚಕ್ರ ಮಗುವಿನ ಮೇಲೆ ಹತ್ತಿದ್ದು, ತಲೆಯು ಛಿದ್ರಗೊಂಡಿದೆ.

ಸ್ಥಳದಲ್ಲೇ ಬಾಲಕ ಜೀವ ಬಿಟ್ಟಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಿಎಂಟಿಸಿ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಸಿದ್ದಾರೆ. ಬಸ್ ಜತೆಗೆ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Murder Case: ʼಗಣೇಶ ಬಲಿ ಕೇಳುತ್ತೆ..ʼʼ ಎಂದರು, ಇರಿದರು! ಮೂರ್ತಿ ವಿಸರ್ಜನೆ ವೇಳೆ ಗಲಾಟೆ, ಕೊಲೆಯಲ್ಲಿ ಅಂತ್ಯ

ಕುಡುಕನ ಜೀವ ಉಳಿಸಿದ ಬೈಕ್‌ ಇಂಡಿಕೇಟರ್‌!

ಚಿಕ್ಕಮಗಳೂರು : ಬೈಕ್‌ ಇಂಡಿಕೇಟರ್‌ ಆನ್‌ ಆಗಿದ್ದರಿಂದ ಕುಡುಕ (drunk and drive) ಸವಾರನ ಜೀವ ಉಳಿದಿದೆ. ಭಾನುವಾರ ರಾತ್ರಿ ಸುಮಾರು 11 ಗಂಟೆ ಆಸುಪಾಸು ಆಗಿರಬಹುದು. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದ ಸಮೀಪ ಬರುತ್ತಿದ್ದ ಕೆಲ ಸವಾರರಿಗೆ ಕೂಗಳತೆ ದೂರದಲ್ಲಿ ಇಂಡಿಕೇಟರ್‌ ಆನ್‌ ಆಗಿ ಕೆಳಗೆ ಬಿದ್ದಿದ್ದ ಬೈಕ್‌ವೊಂದು ಕಂಡಿತ್ತು.

ಅಯ್ಯೋ.. ಬೈಕ್‌ ಆಕ್ಸಿಡೆಂಟ್‌ ಆಗಿರಬೇಕು. ಸವಾರ ಬದುಕಿದ್ದನೋ ಏನೋ ಎಂದು ಆತುರದಲ್ಲಿ ಓಡಿಹೋಗಿದ್ದರು. ಹತ್ತಿರ ಹೋಗಿ ನೋಡಿದಾಗ ಬೈಕ್‌ವೊಂದು ರಸ್ತೆಬದಿ ಬಿದ್ದಿತ್ತು. ಸವಾರ ರಸ್ತೆ ಪಕ್ಕಕ್ಕೆ ಬಿದ್ದಿದ್ದ. ಇದೆಲ್ಲ ನೋಡಿದವರಿಗೆ ಬೈಕ್‌ ಅಪಘಾತವಾಗಿರಬೇಕು ಎಂದುಕೊಂಡಿದ್ದರು. ಹತ್ತಿರ ಹೋಗಿ ನೋಡಿದಾಗ ಸವಾರ ಉಸಿರಾಡುತ್ತಿದ್ದ. ಕೂಡಲೇ ಅಲ್ಲಿದ್ದವರು ಅಪಘಾತವಾಗಿರಬಹುದೆಂದು ಅಂದಾಜಿಸಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರು.

ಕುಡಿದು ರಸ್ತೆ ಮಧ್ಯೆ ಮಲಗಿದ ಭೂಪ

ಇದನ್ನೂ ಓದಿ: Karnataka Weather : ಮುಂದಿನ 3 ದಿನ ಮಳೆ ಸಾಧ್ಯತೆ; ಬೆಂಗಳೂರಲ್ಲಿ ಕವಿದ ಮೋಡ

ಇತ್ತ ಆ್ಯಂಬುಲೆನ್ಸ್‌ ಬರುತ್ತಿದ್ದಂತೆ ದಿಢೀರ್‌ ಎದ್ದು ಕುಳಿತ ಸವಾರನನ್ನು ಕಂಡು ಇತರರು ಶಾಕ್‌ ಆಗಿದ್ದರು. ಬಳಿಕ ಹತ್ತಿರ ಹೋಗಿ ವಿಚಾರಿಸಿ ಆತನನ್ನು ಮೇಲಕ್ಕೆ ಎತ್ತಿದಾಗಲೇ ಗೊತ್ತಾಗಿದ್ದು, ಕಂಠ ಪೂರ್ತಿ ಕುಡಿದು ಬೈಕ್‌ ಓಡಿಸಲು ಆಗದೆ ರಸ್ತೆಯಲ್ಲೇ ಮಲಗಿ ಬಿಟ್ಟಿದ್ದ ಎಂದು. ಹಾಸನದಿಂದ ಸಂಬಂಧಿಕರ ಮನೆಗೆ ಬಂದಿದ್ದ ಸವಾರ, ಕುಡಿದ ಮತ್ತಿನಲ್ಲಿ ಬೈಕ್ ಓಡಿಸಲು ಮುಂದಾಗಿದ್ದಾನೆ. ಆದರೆ ಬೈಕ್‌ ಕಂಟ್ರೋಲ್‌ಗೆ ಸಿಗದೆ ಅತ್ತಿಂದಿತ್ತ ಓಡಿಸಿ ರಸ್ತೆ ಪಕ್ಕಕ್ಕೆ ಬಿದ್ದಿದೆ. ಬೈಕ್‌ ಪಕ್ಕದಲ್ಲೇ ಕುಡುಕ ಸವಾರ ಮಲಗಿ ಬಿಟ್ಟಿದ್ದ.

ಪಕ್ಕದಲ್ಲಿದ್ದ ಬೈಕ್‌ ಇಂಡಿಕೇಟರ್‌ ಆನ್‌ ಆಗಿದ್ದರಿಂದ ಈತನ ಜೀವ ಉಳಿದಿದೆ. ಆ ಕತ್ತಲಿಲ್ಲ ಒಂದು ವೇಳೆ ಇಂಡಿಕೇಟರ್‌ ಆನ್‌ ಆಗಿರಲಿಲ್ಲ ಎಂದಿದ್ದರೆ, ಯಾವುದಾದರೂ ವಾಹನದಿಂದ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಾಶತ್‌ ಇಡಿಕೇಟರ್‌ನಿಂದ ಕುಡುಕನ ಜೀವ ಉಳಿದಿದೆ. ವಿಚಾರ ತಿಳಿಯುತ್ತಿದ್ದಂತೆ ಬಣಕಲ್ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಬೈಕ್ ಸವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version