ಬಳ್ಳಾರಿ: ಕಾಲೇಜ್ ಬಸ್ ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ (Bus Accident) ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಗರದ ಹೊಸಪೇಟೆ ರಸ್ತೆಯ ರಾಮೇಶ್ವರಿ ನಗರ ಸಮೀಪದಲ್ಲಿ ಸಂಭವಿಸಿದೆ.
ಬಳ್ಳಾರಿ ನಿವಾಸಿ ಸಂಜೀವ್ (44) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಹೊಸಪೇಟೆ ಕಡೆಯಿಂದ ಬರುತ್ತಿರುವ ಬೈಕ್ ಹಾಗೂ ಎದುರಿನಿಂದ ಬರುತ್ತಿದ್ದ ಖಾಸಗಿ ಕಾಲೇಜಿನ ಬಸ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಅಪಘಾತದಲ್ಲಿ ಬಾಲಕಿ ಸತ್ತ ಬಳಿಕ ಪತ್ತೆಯಾಯ್ತು ನಕಲಿ ನಂಬರ್ ಪ್ಲೇಟ್ ವಂಚನೆ