Site icon Vistara News

Bus Accident | ಸಿಗಂದೂರು ಕ್ಷೇತ್ರ ಬಳಿಯ ಶರಾವತಿ ನದಿಗೆ ಬಿದ್ದ ಬಸ್‌; ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Bus Accident siganduru bus in river ಬಸ್‌ ಅಪಘಾತ

ಶಿವಮೊಗ್ಗ: ಸಾಗರದಿಂದ ಶ್ರೀಕ್ಷೇತ್ರ ಸಿಗಂದೂರು ಮಾರ್ಗವಾಗಿ ಕಟ್ಟಿನಕಾರಿಗೆ ಹೊರಟಿದ್ದ ಖಾಸಗಿ ಬಸ್‌ವೊಂದು ನಿಯಂತ್ರಣ ತಪ್ಪಿ (Bus Accident) ಶರಾವತಿ ನದಿಗೆ ಬಿದ್ದು, ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಶಿವಮೊಗ್ಗ ಜಿಲ್ಲೆ ಸಾಗರದ ಹೊಳೆಬಾಗಿಲಿನಲ್ಲಿ ಘಟನೆ ನಡೆದಿದೆ. ಸಾಗರದಿಂದ ಕಟ್ಟಿನಕಾರಿಗೆ ಹೊರಟಿದ್ದ ಬಸ್ ಇದಾಗಿದ್ದು, ಹೊಳೆಬಾಗಿಲಿನಲ್ಲಿ ಲಾಂಚ್‌ಗೆ ಹತ್ತಿಸಲು ರಿವರ್ಸ್‌ ತೆಗೆದುಕೊಂಡು ನಿಲ್ಲಿಸಲು ಮುಂದಾಗಿದ್ದಾಗ ಈ ಅವಘಡ ಸಂಭವಿಸಿದೆ.

ಬಸ್‌ ಅನ್ನು ರಿವರ್ಸ್‌ ಮಾಡಿ ಲಾಂಚ್‌ಗೆ ಹತ್ತಿಸಲು ಸುಲಭವಾಗುವಂತೆ ನಿಲ್ಲಿಸಲು ಮುಂದಾದಾಗ ಈ ಘಟನೆ ನಡೆದಿದೆ. ಗಜಾನನ ಕಂಪನಿಗೆ ಸೇರಿದ ಬಸ್‌ ಇದಾಗಿದ್ದು, ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಈ ಅವಘಡದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಸಾವು, ನೋವುಗಳು ಆಗಿಲ್ಲ. ಸಂಜೆ 6 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ.

ಸ್ಥಳೀಯರ ನೆರವಿನಿಂದ ಪ್ರಯಾಣಿಕರ ರಕ್ಷಣೆ
ಬಸ್‌ ನೀರಿಗೆ ಇಳಿಯುತ್ತಿದ್ದಂತೆ ಭಯಗೊಂಡ ಪ್ರಯಾಣಿಕರು ಕೂಗಿಕೊಂಡಿದ್ದಾರೆ. ಅಲ್ಲದೆ, ತಕ್ಷಣ ಇಳಿಯಲು ನೋಡಿದ್ದಾರೆ. ಆದರೆ, ಅಷ್ಟರಲ್ಲಿ ನೀರು ಬಸ್‌ ಒಳಗೆ ಬರಲು ಪ್ರಾರಂಭಿಸಿದೆ. ಕೂಡಲೇ ಸ್ಥಳದಲ್ಲಿದ್ದ ಪ್ರವಾಸಿಗರು ಸೇರಿದಂತೆ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಅಲ್ಲದೆ, ಅಲ್ಲಿಯೇ ಸೇತುವೆ ಕೆಲಸದಲ್ಲಿ ನಿರತವಾಗಿದ್ದ ಜೆಸಿಬಿ ವಾಹನವನ್ನೂ ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ | Border Dispute | ಮಹಾರಾಷ್ಟ್ರದ ಜತ್‌ನಲ್ಲಿ ಹಾರಿತು ಕನ್ನಡ ಧ್ವಜ; ಕರ್ನಾಟಕ, ಸಿಎಂ ಬೊಮ್ಮಾಯಿ ಪರ ಘೋಷಣೆ

Exit mobile version