Site icon Vistara News

Bus Accident | BMTCಗೆ ಮತ್ತೊಂದು ಬಲಿ, ತಾಯಿ ಜತೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ 15 ವರ್ಷದ ಬಾಲಕಿ ಮೃತ್ಯು

BMTC balaki death

ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಧಾವಂತಕ್ಕೆ ೧೫ ವರ್ಷದ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಲಾವ್ಯಾಶ್ರೀ ಎಂಬ ಬಾಲಕಿ ಮೃತಪಟ್ಟ ದುರ್ದೈವಿ. ಟಿ ಸಿ ಪಾಳ್ಯಯಿಂದ ಬಟ್ಟರಹಳ್ಳಿ ಹೋಗುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಬಸ್‌ ಸ್ಕೂಟರ್‌ ಒಂದಕ್ಕೆ ಡಿಕ್ಕಿ ಹೊಡೆದಾಗ ಈ ದುರಂತ ನಡೆದಿದೆ.

ಪ್ರಿಯದರ್ಶಿನಿ (೪೫) ಎಂಬವರು ತಮ್ಮ ಸ್ಕೂಟರ್‌ನಲ್ಲಿ ಮಕ್ಕಳಾದ ಲಾವ್ಯಶ್ರೀ ಹಾಗೂ ಯಾಶ್ವಿನ್‌ನನ್ನು ಕರೆದುಕೊಂಡು ಬಟ್ಟರ ಹಳ್ಳಿ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭ ಭಟ್ಟರಹಳ್ಳಿ ಸಿಗ್ನಲ್ ಬಳಿ ಸ್ಕೂಟರ್‌ ಸ್ಕಿಡ್‌ ಆಗಿದೆ.

ಸ್ಕೂಟರ್‌ ಸ್ಕಿಡ್‌ ಆಗಿ ಉರುಳಿದಾಗ ತಾಯಿ ಪ್ರಿಯದರ್ಶಿನಿ ಮತ್ತು ಯಾಶ್ವಿನ್‌ ಎಡಭಾಗಕ್ಕೆ ಬಿದ್ದರೆ, ಲಾವ್ಯಶ್ರೀ ಬಲಕ್ಕೆ ಬಿದ್ದಳು. ಈ ಸಂದರ್ಭ ಹಿಂಬದಿಯಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್‌ ಲಾವ್ಯ ಶ್ರೀಯ ಮೇಲೆಯೇ ಹರಿದಿದೆ.

ಲಾವ್ಯಶ್ರೀಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆಕೆಯ ಜೀವ ರಕ್ಷಣೆ ಸಾಧ್ಯವಾಗಲಿಲ್ಲ. ಕಣ್ಣೆದುರೇ ಸಂಭವಿಸಿದ ದುರಂತದಲ್ಲಿ ಮಗಳನ್ನು ಕಳೆದುಕೊಂಡ ಪ್ರಿಯದರ್ಶಿನಿ ಅವರು ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಯಾಶ್ವಿನ್‌ಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | Killer BMTC | ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ, ಚಕ್ರಕ್ಕೆ ಸಿಲುಕಿ ಸವಾರ ಸಾವು

Exit mobile version