Site icon Vistara News

Bus Accident | ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಸಾರಿಗೆ ಬಸ್‌; 6 ಮಂದಿಗೆ ಗಾಯ

Bus Accident

ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ ಕಂದಕಕ್ಕೆ ಉರುಳಿದ್ದರಿಂದ 6ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೋಲಾರ-ಬೆಂಗಳೂರು ‌ಮಾರ್ಗದ ಅಟ್ಟೂರು ಗ್ರಾಮದ ಬಳಿ ಭಾನುವಾರ ಅಪಘಾತ (Bus Accident) ನಡೆದಿದೆ.

ಜಿಲ್ಲೆಯ ಮುಳಬಾಗಿಲು ತಾಲೂಕಿನ ಡಿಪೋ ಬಸ್ ಅಪಘಾತಕ್ಕೀಡಾಗಿದೆ. ಸಾರಿಗೆ ಬಸ್‌ನಲ್ಲಿ 56 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಪೈಕಿ 6 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊಸಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ | Murder Case | ಐ ಲವ್‌ ಯೂ ಎಂದವನ ಪರಲೋಕಕ್ಕೆ ಕಳಿಸಿದ ಭಿಕ್ಷುಕ ದಂಪತಿ; ಸಿಕ್ಕಿ ಬಿದ್ದಿದ್ದು ಹೇಗೆ?

Exit mobile version