ಮಂಗಳೂರು: ನಗರ ಹೊರವಲಯದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ಖಾಸಗಿ ಬಸ್ ಸುಟ್ಟು ಕರಕಲಾಗಿದ್ದು, ಚಾಲಕ ಸೇರಿ ಮೂವರು ಅಪಾಯದಿಂದ ಪಾರಾಗಿದ್ದಾರೆ.
ಕಟೀಲು ಮಾರ್ಗದಲ್ಲಿ ಚಲಿಸುವಾಗ ಬುಧವಾರ ಒಎಂಪಿಎಲ್ ಸಂಸ್ಥೆಯ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಕಟೀಲು ಕಡೆಯ ನೌಕರರನ್ನು ಬಿಟ್ಟು ವಾಪಸಾಗುತ್ತಿದ್ದಾಗ ಬಸ್ಗೆ ಬೆಂಕಿ ತಗುಲಿದ್ದು, ಬಸ್ನಲ್ಲಿದ್ದ ಡ್ರೈವರ್ ಸೇರಿ ಮೂವರು ಅಪಾಯದಿಂದ ಪಾರಾಗಿದ್ದಾರೆ. ಅವಘಡ ಸಂಭವಿಸಿದಾಗ ಪಕ್ಕದಲ್ಲೇ ನೀರಿನ ಟ್ಯಾಂಕರ್ ಸಂಚರಿಸುತ್ತಿತ್ತು. ಹೀಗಾಗಿ ಟ್ಯಾಂಕರ್ ನೀರಿನಿಂದ ಬೆಂಕಿಯನ್ನು ನಂದಿಸಲಾಗಿದೆ.
ಇದನ್ನೂ ಓದಿ | Chitradurga News: ಹೊಸದುರ್ಗದಲ್ಲಿ ಸರ್ಕಾರಿ ವೈದ್ಯೆ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು
ಅಗ್ನಿ ಅವಘಡದಿಂದ ಸುಟ್ಟು ಕರಕಲಾದ ಅಂಗಡಿ
ಬೆಂ.ಗ್ರಾಮಾಂತರ: ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿ ಸುಟ್ಟು ಕರಕಲಾಗಿರುವ ಘಟನೆ ಹೊಸಕೋಟೆ ನಗರದ ವಿವೇಕಾನಂದನಗರದಲ್ಲಿ ಬುಧವಾರ ನಡೆದಿದೆ. ಕಾರ್ತಿಕ್ ಎಂಬುವವರ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ನಡೆದಿರಬಹುದು ಎಂದು ಶಂಕಿಸಲಾಗಿದೆ.