ಬೆಂಗಳೂರು: ಸುಂಕದಕಟ್ಟೆಯ ಸಾಗರ್ ಪ್ಲೈವುಡ್ ಫ್ಯಾಕ್ಟರಿ ಬಳಿ ಜನವರಿ ೧೩ರಂದು ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಈಗ ಅದು ಯಾರು, ಅವರ ಸಾವಿಗೆ ಕಾರಣ ಏನು ಎನ್ನುವ ಸಂಗತಿ ಬೆಳಕಿಗೆ (Bus driver murder) ಬಂದಿದೆ. ಇದರ ಒಂದೊಂದು ಸಂಗತಿಯೂ ಬೆಚ್ಚಿ ಬೀಳಿಸುವಂತಿದೆ.
ಅಂದು ಅಲ್ಲಿ ಪತ್ತೆಯಾಗಿದ್ದು ವೆಂಕಟಸ್ವಾಮಿ ಎಂಬವರ ಶವ. ಅವರನ್ನು ಕೊಲೆ ಮಾಡಲಾಗಿತ್ತು. ಕೊಲೆ ಮಾಡಿದವನು ವೆಂಕಟೇಶ್ ಎಂಬಾತ. ಅವರಿಬ್ಬರೂ ಬಸ್ ಚಾಲಕ. ವೆಂಕಟೇಶ ಬಸ್ ನಿಲ್ಲಿಸೋ ಜಾಗದಲ್ಲಿ ವೆಂಕಟಸ್ವಾಮಿ ಬಸ್ ನಿಲ್ಲಿಸಿದ್ದ ಎಂಬ ಒಂದೇ ಕಾರಣಕ್ಕೆ ಈ ಕೊಲೆ ನಡೆದಿದೆ. ಆದರೆ, ಅದು ನಡೆದ ರೀತಿ ಮಾತ್ರ ಬರ್ಬರ.
ಅಂದು ಶವ ಪತ್ತೆಯಾದ ಬಳಿಕ ಅದು ಯಾರದ್ದು ಎಂದು ತಿಳಿಯಲು ಪೊಲೀಸರು ಭಾರಿ ಕಷ್ಟಪಟ್ಟಿದ್ದರು. ಸಿಸಿಟಿವಿ ಸೇರಿ ಇನ್ನಿತರ ಮಾರ್ಗದಲ್ಲಿ ತನಿಖೆ ನಡೆಸಿದ್ದರು. ಕೊನೆಗೆ ಅಪರಿಚಿತ ಶವ ವೆಂಕಟಸ್ವಾಮಿ ಎಂಬ ಚಾಲಕನದು ಎಂದು ತಿಳಿದುಬಂತು. ಎಲುಬುಗಳು ಮುರಿದಿದ್ದರಿಂದ ಕೊಲೆಯಾಗಿರುವ ಶಂಕೆ ವ್ತಕ್ತಪಡಿಸಿದ್ದ
ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದರು. ಆಗ ಬೆಚ್ಚಿ ಬೀಳಿಸುವ ಸಂಗತಿ ಹೊರಬಂತು.
ಆವತ್ತು ಆಗಿದ್ದು ಏನೆಂದರೆ, ವೆಂಕಟಸ್ವಾಮಿ ತನ್ನ ಬಸ್ಸನ್ನು ಜಿಟಿ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ ಬಳಿ ನಿಲ್ಲಿಸಿ ಮಲಗಿದ್ದರು. ಸ್ವಲ್ಪ ಹೊತ್ತಿನಲ್ಲಿ ಆ ಜಾಗಕ್ಕೆ ವೆಂಕಟೇಶ್ ಎಂಬ ಚಾಲಕ ತನ್ನ ಬಸ್ಸನ್ನು ಹಿಡಿದುಕೊಂಡು ಬಂದಿದ್ದಾನೆ. ದಿನಾ ತಾನು ನಿಲ್ಲಿಸುವ ಜಾಗದಲ್ಲಿ ಇವನು ನಿಲ್ಲಿಸಿದ್ದಾನಲ್ಲಾ ಎಂದು ಸಿಟ್ಟುಬಂದಿದೆ. ಕಿರಿಕ್ ತೆಗೆದ ವೆಂಕಟೇಶ್ ಬಸ್ಸಿನ ಗಾಜನ್ನು ಪುಡಿ ಮಾಡಿದ್ದ. ನಂತರ ಒಳಗೆ ಮಲಗಿದ್ದ ವೆಂಕಟಸ್ವಾಮಿ ಮೇಲೂ ಹಲ್ಲೆಗೆ ಯತ್ನಿಸಿದ್ದ. ಕೊನೆಗೆ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ವೆಂಕಟಸ್ವಾಮಿಯ ಎದೆ ಭಾಗಕ್ಕೆ ಕಾಲಿನಿಂದ ಒದ್ದಿದ್ದ. ಇದರಿಂದ ಎದೆಗೂಡಿನ ಮೂಳೆಗಳು ಮುರಿದು ವೆಂಕಟಸ್ವಾಮಿ ಪ್ರಾಣ ಕಳೆದುಕೊಂಡಿದ್ದ. ನಂತರ ವೆಂಕಟೇಶ್ ಶವವನ್ನು ಸುಂಕದಕಟ್ಟೆಯ
ನಂತರ ವೆಂಕಟೇಶ್ ಸುಂಕದಕಟ್ಟೆ ಬಳಿ ಮೃತ ದೇಹ ಎಸೆದು ಪರಾರಿಯಾಗಿದ್ದ. ಶವದ ಮೇಲೆ ಯಾವುದೇ ಗಾಯಗಳಿಲ್ಲದೆ ಇದ್ದರೂ ಎದೆಗೂಡಿನ ಮುರಿತವನ್ನು ಗಮನಿಸಿ ಪೊಲೀಸರು ಇದು ಕೊಲೆ ಎಂಬ ನಿರ್ಧಾರಕ್ಕೆ ಬಂದು ಆರೋಪಿಯನ್ನು ಬಂಧಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | Stabbing | ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ