Site icon Vistara News

Shakti Scheme : RRR ನಿರ್ದೇಶಕ ರಾಜಮೌಳಿ ಹುಟ್ಟೂರಲ್ಲಿ ಬಸ್‌ ಸಮಸ್ಯೆ; ಮಕ್ಕಳ ಪ್ರತಿಭಟನೆ

Rajamouli hometown Amareshwar Camp students protest

ರಾಯಚೂರು: ಎಸ್.ಎಸ್.‌ ರಾಜಮೌಳಿ (Telugu Film Director SS Rajamouli) ಎಂಬ ಹೆಸರು ಕೇಳಿದರೆ ಇಂದು ಬಹುತೇಕ ಎಲ್ಲರಿಗೂ ಗೊತ್ತು. ಒಮ್ಮೆ ಅವರು ಮಾಡಿದ ಸಿನಿಮಾವನ್ನು ನೋಡದಿದ್ದರೂ, ಅವರ RRR ಸಿನಿಮಾದ “ನಾಟು ನಾಟು” ಹಾಡಿಗೆ ಆಸ್ಕರ್‌ ಅವಾರ್ಡ್‌ (Oscar Award) ಪಡೆಯುವ ಮೂಲಕ ಭಾರತದ ಕೀರ್ತಿ ಜಗತ್ತಿಗೇ ತಿಳಿಯುವಂತೆ ಮಾಡಿದ್ದ ಕಾರಣಕ್ಕಾದರೂ ಬಹುತೇಕರಿಗೆ ಚಿರಪರಿಚಿತ. ಇನ್ನು ಇವರು ಕರ್ನಾಟಕದವರೇ ಎಂಬ ಸಂಗತಿ ಸಹ ಹಲವರಿಗೆ ಗೊತ್ತಿರುವ ವಿಚಾರ. ಇವರ ಹುಟ್ಟೂರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅಮರೇಶ್ವರ ಕ್ಯಾಂಪ್‌ (Amareshwar Camp Manvi). ಇಂಥ ಒಂದು ಗ್ರಾಮದಲ್ಲಿ ಹುಟ್ಟಿರುವ ಅವರು ಬೆಳೆದಿದ್ದೆಲ್ಲ (Andhra Pradesh) ಆಂಧ್ರಪ್ರದೇಶದಲ್ಲಾಗಿದೆ. ಆದರೆ, ಈಗ ಈ ಊರು ಮತ್ತೆ ಸುದ್ದಿಯಲ್ಲಿದೆ. ಕಾರಣ, ಈಗ ಇಲ್ಲಿನ ಮಕ್ಕಳು ಪ್ರತಿಭಟನೆಗೆ ಕುಳಿತಿದ್ದಾರೆ. ಅದೂ ಸಾರಿಗೆ ಇಲಾಖೆಯ ವಿರುದ್ಧ! ಕಾಂಗ್ರೆಸ್‌ ಗ್ಯಾರಂಟಿಯ (Congress Gaurantee) ಭಾಗವಾದ “ಶಕ್ತಿ” ಯೋಜನೆ (Shakti Scheme) ಜಾರಿಗೆ ಬಂದಿದ್ದೇ ಈ ಸಮಸ್ಯೆಗೆ ಮೂಲ ಕಾರಣವಂತೆ!

ರಾಯಚೂರು ಜಿಲ್ಲೆಯಲ್ಲಿ ಶಕ್ತಿ ಯೋಜನೆಯ ಸೈಡ್‌ ಎಫೆಕ್ಟ್‌ ಬಹಳವಾಗಿಯೇ ಬೀರಿದೆ. ಕೆಲವು ಕಡೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು (KSRTC Bus) ನಿಲ್ಲಿಸದೇ ಹೋಗಲಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಇನ್ನು ಈ ಬಗ್ಗೆ ಸಾರಿಗೆ ಸಿಬ್ಬಂದಿಯನ್ನು ಕೇಳಿದರೆ, ಬಸ್‌ನಲ್ಲಿ ಅದಾಗಲೇ ನಿಲ್ಲಲೂ ಜಾಗವಿಲ್ಲದಷ್ಟು ಜನರಿದ್ದರೆ ಹೇಗೆ ಬಸ್‌ ನಿಲ್ಲಿಸೋಣ? ಅವರನ್ನು ಕರೆದುಕೊಂಡು ಹೋಗುವುದಾದರೂ ಹೇಗೆ? ಎಂದು ಪ್ರಶ್ನೆ ಮಾಡುತ್ತಾರೆ. ಆದರೆ, ಈಗ ನಿರ್ದೇಶಕ ರಾಜಮೌಳಿ ಹುಟ್ಟೂರಿನಲ್ಲಿ ಬಸ್ ಸಮಸ್ಯೆ ಎದುರಾಗಿದೆ.

Rajamouli hometown Amareshwar Camp students protest

ಇದನ್ನೂ ಓದಿ: Gruha Lakshmi Scheme : ಜು. 19ಕ್ಕೆ ಗೃಹಲಕ್ಷ್ಮಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಬರಲ್ಲ ಹೈಕಮಾಂಡ್

ವಿದ್ಯಾರ್ಥಿಗಳ ಪ್ರತಿಭಟನೆ

ಮಾನ್ವಿ ತಾಲೂಕಿನ ಅಮರೇಶ್ವರ ಕ್ಯಾಂಪ್‌ನಲ್ಲಿ ಬಸ್‌ ಸಮಸ್ಯೆಯಿಂದ ಬೇಸತ್ತಿರುವ ವಿದ್ಯಾರ್ಥಿಗಳು ರಸ್ತೆ ಮಧ್ಯೆ ಪ್ರತಿಭಟನೆಗೆ ಇಳಿದಿದ್ದಾರೆ. ಅವರಿಗೆ ಪೋಷಕರೂ ಸಾಥ್‌ ನೀಡಿದ್ದಾರೆ. ಏನಾದರೂ ಮಾಡಿಕೊಳ್ಳಿ, ನಮಗೆ ಬಸ್‌ ನಿಲ್ಲಿಸಿ. ನಾವು ಶಾಲೆಗೆ ಹೋಗುವುದಾದರೂ ಹೇಗೆ? ಇಲ್ಲೇನು ನಿಮಿಷಕ್ಕೊಂದು ಬಸ್‌ ಬರುತ್ತದೆಯೇ? ಈ ಬಸ್‌ ಇಲ್ಲದಿದ್ದರೆ ಮತ್ತೊಂದು ಎಂದು ಹೇಳಲು? ಇದು ಮಕ್ಕಳ ಕಲಿಕೆ ಮೇಲೆ ಪ್ರಭಾವ ಬೀರುವುದಿಲ್ಲವೇ? ಬಸ್‌ನಲ್ಲಿ ಜಾಗ ಇಲ್ಲ ಎಂದಾದರೆ ಮಕ್ಕಳಿಗಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು. ಇದರ ಬೆನ್ನ ಹಿಂದೆಯೇ ಮತ್ತೊಂದು ಬಸ್‌ ವ್ಯವಸ್ಥೆಯನ್ನು ಕಲ್ಪಿಸಬೇಕು. ಆದರೆ, ಇಲ್ಲಾಗುತ್ತಿರುವುದು ಏನು? ಎಂದು ಪ್ರಶ್ನೆ ಮಾಡಿದ್ದಾರೆ.

Rajamouli hometown Amareshwar Camp students protest

ಸಿಂಧನೂರು-ರಾಯಚೂರು ರೂಟ್ ಬಸ್‌ಗಳನ್ನು ಇಲ್ಲಿ ನಿಲುಗಡೆ ಮಾಡಬೇಕು. ಈ ಮೊದಲು ಈ ಬಸ್‌ಗಳನ್ನು ಕ್ಯಾಂಪ್‌ನಲ್ಲಿ ನಿಲುಗಡೆ ಮಾಡಲಾಗುತ್ತಿತ್ತು. ಆದರೆ, ಯಾವಾಗ ರಾಜ್ಯ ಸರ್ಕಾರ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್‌ ಯೋಜನೆಯನ್ನು ಘೋಷಣೆ ಮಾಡಿತೋ ಅಂದಿನಿಂದ ಈ ಸಮಸ್ಯೆ ಎದುರಾಗಿದೆ. ಹೆಚ್ಚಿನ ಬಸ್‌ಗಳು ರಶ್‌ (Buses Rush) ಆಗಿಯೇ ಬರುತ್ತಿವೆ. ಇನ್ನು ಕೆಲವು ಬಸ್‌ಗಳಲ್ಲಿ ಜಾಗವಿದ್ದರೂ ಇಲ್ಲಿ ನಿಲ್ಲಿಸದೇ ಹೋಗಲಾಗುತ್ತಿದೆ. ಇದರಿಂದ ಶಾಲಾ ಮಕ್ಕಳಿಗೆ ಭಾರಿ ತೊಂದರೆಯಾಗುತ್ತಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: Lok Sabha Election 2024 : ಬೆಳಗಾವಿಯಿಂದ ಲೋಕಸಭೆಗೆ ನಿಲ್ತೇನೆ: ಸತೀಶ್‌ ಜಾರಕಿಹೊಳಿ

ಕ್ಲಾಸ್‌ ಬಿಟ್ಟು ಪ್ರತಿಭಟನೆಗೆ ಕುಳಿತ ಮಕ್ಕಳು

ಇನ್ನು ಈ ಬಗ್ಗೆ ಮಕ್ಕಳು ಸಹ ತೀವ್ರವಾಗಿ ಆಕ್ರೋಶಗೊಂಡಿದ್ದು, ತಮಗೆ ಬಸ್‌ ವ್ಯವಸ್ಥೆಯನ್ನು ಮಾಡಲೇಬೇಕು. ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಲು ಆಗುತ್ತಿಲ್ಲ. ನಮಗೆ ಶಾಲೆಗೆ ಹೋಗಲು ಸರ್ಕಾರಿ ಬಸ್‌ಗಳೇ ಆಸರೆ. ಅದೇ ಇಲ್ಲವಾದರೆ ನಮಗೆ ಪಾಠಗಳು ತಪ್ಪಿ ಹೋಗುತ್ತವೆ. ಇದರಿಂದ ನಮಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.

Exit mobile version