ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಾರ್ಗದಲ್ಲಿ ಟೋಲ್ ಸಂಗ್ರಹ ಆರಂಭವಾದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಬಸ್ ಟಿಕೆಟ್ ದರ ಏರಿಕೆ (Bus Fare Hike) ಬಿಸಿ ತಟ್ಟಿದೆ. ಟೋಲ್ ಹೊರೆಯನ್ನು ಪ್ರಯಾಣಿಕರಿಗೆ ವರ್ಗಾಯಿಸಿರುವ ಕೆಎಸ್ಆರ್‌ಟಿಸಿ, ಬಳಕೆದಾರರ ಶುಲ್ಕ ವಿಧಿಸಲು ನಿರ್ಧಾರ ಮಾಡಿದೆ. ಇದರಿಂದ ಮಾರ್ಚ್ 14ರಿಂದಲೇ ಟಿಕೆಟ್ ದರ 20 ರೂ.ಗಳವರೆಗೆ ಏರಿಕೆಯಾಗಿದೆ.
ಸಾರಿಗೆ ನಿಗಮದ ಈ ನಿರ್ಧಾರದಿಂದ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವ ಕೆಎಸ್ಆರ್‌ಟಿಸಿ ಸಾಮಾನ್ಯ ಬಸ್ ಟಿಕೆಟ್‌ನಲ್ಲಿ 15 ರೂಪಾಯಿ, ರಾಜಹಂಸ ಬಸ್ ಟಿಕೆಟ್ 18 ರೂಪಾಯಿ ಹಾಗೂ ಮಲ್ಟಿ ಆ್ಯಕ್ಸಲ್ ಬಸ್ ಟಿಕೆಟ್ ದರ 20 ರೂಪಾಯಿ ಏರಿಕೆಯಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ | Toll collection : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ