Site icon Vistara News

Modi in Mangalore | ಮೋದಿ ಕಾರ್ಯಕ್ರಮಕ್ಕೆ ಬಂದ ಉದ್ಯಮಿ ಬಿ.ಆರ್‌ ಶೆಟ್ಟಿಯನ್ನೇ ತಡೆದ ಪೊಲೀಸರು!

modi in Mangalore

ಮಂಗಳೂರು : ಇಲ್ಲಿನ ಗೋಲ್ಡ್‌ಫಿಂಚ್‌ ಮೈದಾನದಲ್ಲಿ ಶುಕ್ರವಾರ ನಡೆದ ಪ್ರಧಾನಿ ನರೇಂದ್ರ ಮೋದಿ (Modi in Manglore) ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಉದ್ಯಮಿ ಬಿ. ಆರ್‌ ಶೆಟ್ಟಿ ಅವರನ್ನು ಪೊಲೀಸರು ತಡೆಗೆ ಪ್ರಸಂಗ ನಡೆದಿದೆ. ಮೋದಿಯ ಆತ್ಮೀಯರೆನಿಸಿಕೊಂಡಿದ್ದ ಬಿ.ಆರ್‌. ಶೆಟ್ಟಿಗೆ ಕಾರ್ಯಕ್ರಮಕ್ಕೆ ಎಂಟ್ರಿ ಕೊಡದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಬಿ.ಆರ್. ಶೆಟ್ಟಿ ಅವರು ಕಾರ್ಯಕ್ರಮ ನಡೆಯುವ ಸಭಾಂಗಣದ ಬಳಿಗೆ ಹೋಗುವ ವೇಳೆ ಪೊಲೀಸರು ತಡೆದಿದ್ದಾರೆ. ಅವರ ಬಳಿ ಪ್ರವೇಶ ಮಾನ್ಯತಾ ಪತ್ರ ಇರಲಿಲ್ಲ. ಹೀಗಾಗಿ ಪೊಲೀಸರು ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ ಎನ್ನಲಾಗಿದೆ. ಸ್ಥಳದಲ್ಲಿದ್ದ ಕಾರ್ಯಕರ್ತರು ಉದ್ಯಮಿಯನ್ನು ಒಳಗೆ ಬಿಡುವಂತೆ ಕೋರಿದ್ದು, ಪೊಲೀಸರು ಬಳಿಕ ಒಳಗೆ ಬಿಟ್ಟಿದ್ದಾರೆ. ಅವರು ಒಳಗೆ ತೆರಳುವಾಗ ಅಲ್ಲಿ ಇಡಲಾಗಿದ್ದ ಕುರ್ಚಿಗಳು ಭರ್ತಿಯಾಗಿದ್ದ ಕಾರಣ ಕುಳಿತುಕೊಳ್ಳುವುದಕ್ಕೆ ಆಗಲಿಲ್ಲ ಎನ್ನಲಾಗಿದೆ.

ಕರಾವಳಿ ಮೂಲದ ಉದ್ಯಮಿ ಬಿ. ಆರ್‌. ಶೆಟ್ಟಿ ನಾನಾ ದೇಶಗಳಲ್ಲಿ ಉದ್ಯಮವನ್ನು ಹೊಂದಿದ್ದಾರೆ. ದುಬೈನ ಬುರ್ಜ್‌ ಖಲಿಫಾದ ೧೦೦ನೇ ಮಹಡಿಯನ್ನು ಖರೀದಿಸುವ ಮೂಲಕ ವಿಶ್ವ ವಿಖ್ಯಾತಿ ಪಡೆದುಕೊಂಡಿದ್ದರು. ಅವರನ್ನು ಕರಾವಳಿಯ ಹೆಮ್ಮೆಯ ವ್ಯಕ್ತಿ ಎಂದೇ ಕರೆಯಲಾಗುತ್ತಿತ್ತು. ಈ ಹಿಂದೆ ಪ್ರಧಾನಿ ಮೋದಿ ಅವರು ದುಬೈಗೆ ಹೋಗಿದ್ದ ವೇಳೆ ಕಾರ್ಯಕ್ರಮ ಅಯೋಜಿಸಿ, ವೇದಿಕೆಯನ್ನು ಹಂಚಿಕೊಂಡಿದ್ದರು. ಅವರನ್ನೇ ಪೊಲೀಸರು ಗುರುತಿಸದೇ ಹೋದದ್ದು ಚರ್ಚೆಗೆ ಆಸ್ಪದ ನೀಡಿದೆ.

ಬಳಿಕ ಬಿ. ಆರ್‌ ಶೆಟ್ಟಿ ಅವರು ಲಂಡನ್‌ನ ಬ್ಯಾಂಕ್ ಗೆ ವಂಚಿಸಿದ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದರು. 960 ಕೋಟಿ ವಂಚನೆ ಪ್ರಕರಣ ಅವರ ಮೇಲಿತ್ತು. ಲಂಡನ್ ಕೋರ್ಟ್ ಬಿ.ಆರ್.ಶೆಟ್ಟಿ ಆಸ್ತಿ ಮುಟ್ಟುಗೋಲಿಗೆ ಆದೇಶಿಸಿದೆ.

Exit mobile version