ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ನೇಮಕ ಮಾಡಿದ ನಡೆ ಸರಿಯಾಗಿದೆ ಎಂಬ ಸಂದೇಶವನ್ನು ಮಂಗಳೂರಿನ ಜನರು ನೀಡಿರುವಂತಿದೆ.
ಕರಾವಳಿಯ ಸಂಸ್ಕೃತಿ, ಜನಜೀವನವು ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಪೂರಕವಾಗಿದೆ ಎಂದು ಜನರನ್ನು ಮೋದಿ ಉತ್ತೇಜಿಸಿದರು.
ಸರ್ಕಾರದ ವಿವಿಧ ಯೋಜನೆಗಳಿಗೆ ಚಾಲನೆ, ಶಿಲಾನ್ಯಾಸ ಹಾಗೂ ಫಲಾನುಭವಿಗಳ ಸಮಾವೇಶವಾದ್ಧರಿಂದ ಹೆಚ್ಚಾಗಿ ರಾಜಕೀಯ ಮಾತಿಗೆ ಮೋದಿ ಮುಂದಾಗದಿದ್ದರೂ ಸಣ್ಣಗೆ ಪ್ರತಿಪಕ್ಷಗಳಿಗೆ ತಿವಿದರು.
ಕರಾವಳಿ ಪ್ರದೇಶಗಳ ಅಭಿವೃದ್ಧಿಯಿಂದಾಗಿ ಸ್ಥಳೀಯ ಮೀನುಗಾರರಿಗೆ ಆರ್ಥಿಕ ಲಾಭ ದೊರಕುತ್ತದೆ ಎಂದ ಪ್ರಧಾನಿ ನರೇಂದ್ರ ಮೋದಿ (Modi in Mangalore), ಇದರಿಂದ ಕರ್ನಾಟಕವಷ್ಟೆ ಅಲ್ಲದೆ ದೇಶದ ಅಭಿವೃದ್ಧಿಗೂ ವೇಗ ಸಿಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಂಗಳೂರಿನಲ್ಲಿ ಕಿಸಾನ್ ಕಾರ್ಡ್ ಮತ್ತು ಆಳ ಸಮುದ್ರ ಮೀನುಗಾರಿಕೆಗೆ ಸಹಾಯ ವಿತರಿಸಿದರು.
ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದಾಗ್ಯೂ ಅಭಿವೃದ್ಧಿಯಲ್ಲಿ ರಾಜ್ಯ ಹಿಂದುಳಿದಿದೆ ಎಂಬ ಪ್ರತಿಪಕ್ಷಗಳ ಮಾತುಗಳಿಗೆ ಪ್ರಧಾನಿ ಮೋದಿ ಸಮ್ಮುಖದಲ್ಲಿಯೇ ಸಿಎಂ ಬೊಮ್ಮಾಯಿ ಉತ್ತರ ನೀಡಿದರು.
ಆತ್ಮನಿರ್ಭರ್ ಭಾರತ್ ಅಭಿಯಾನದಲ್ಲಿ ಕರ್ನಾಟಕದ ಕೊಡುಗೆ ದೊಡ್ಡದು. ರಾಜ್ಯದ ಬಂದರುಗಳ ಅಭಿವೃದ್ಧಿ ದೇಶದ ಎಕಾನಮಿಯ ಪ್ರಗತಿಗೆ ಕೂಡ ಸಹಕಾರಿಯಾಗಲಿದೆ.