ಬೆಂಗಳೂರು: 26/11 ಮುಂಬೈ ದಾಳಿಯಲ್ಲಿ ಹುತಾತ್ಮರಾಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್(Major Sandeep Unnikrishnan) ಅವರ ಪುತ್ಥಳಿಯನ್ನು ಬೆಂಗಳೂರಿನ ದಿ ಫ್ರಾಂಕ್ ಆ್ಯಂಟೋನಿ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಅನಾವರಣ ಮಾಡಲಾಯಿತು. ಇದೇ ಶಾಲೆಯಲ್ಲಿ ಸಂದೀಪ್ ಉನ್ನಿಕೃಷ್ಣನ್ ಅವರು 14 ವರ್ಷಗಳ ಕಾಲ ಅಧ್ಯಯನ ಮಾಡಿದ್ದರು.
ಕರ್ನಾಟಕ ಮತ್ತು ಗೋವಾ ಸಬ್ ಏರಿಯಾ ಕಮಾಂಡಿಂಗ್ ಆಫೀಸರ್, ಎವಿಎಸ್ಎಂ ಮೇಜರಲ್ ಜನರಲ್ ರವಿ ಮುರುಗನ್ ಅವರು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಈ ವೇಳೆ, ಕರ್ನಾಟಕ-ಗೋವಾ ಎನ್‌ಸಿಸಿ ಡೈರೆಕ್ಟರ್, ಡೆಪ್ಯುಟಿ ಡೈರೆಕ್ಟರ್ ಜನರಲ್, ವಿಎಸ್ಎಂ, ಏರ್ ಕಮಾಂಡರ್ ಬಿ.ಎಸ್. ಕನ್ವರ್ ಅವರು ಹಾಜರಿದ್ದರು.
ಇದೇ ವೇಳೆ, ವಿದ್ಯಾರ್ಥಿಗಳು ದೇಶಭಕ್ತಿ ಪ್ರದರ್ಶನದ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಿದರು. ಸಮಾರಂಭಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು, ರಕ್ಷಣಾ ವಲಯದಲ್ಲಿನ ಕೆಲಸದ ಘನತೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಬಳಿಕ ನಾಡಗೀತೆ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.
ಇದನ್ನೂ ಓದಿ | 26/11 Mumbai Attacks| ಮುಂಬಯಿ ಉಗ್ರ ದಾಳಿಗೆ 14 ವರ್ಷ; ದೇಶದ ಇತಿಹಾಸದಲ್ಲಿ ಇದು ಕರಾಳ ದಿನ