Site icon Vistara News

BY Vijayendra : ಶಿಕಾರಿಪುರದಲ್ಲಿ ಜನಸಂಪರ್ಕ ಕಚೇರಿ ತೆರೆದ ಬಿ.ವೈ. ವಿಜಯೇಂದ್ರ

BY Vijayendra new office in shikaripura

ಶಿಕಾರಿಪುರ: ಶಾಸಕ ಎಂದರೆ ಜನರಿಗೆ ಹತ್ತಿರ ಇರಬೇಕು. ಅವರ ಕುಂದು-ಕೊರತೆಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವರಿಗೆ ಪ್ರತಿಧ್ವನಿಯಾಗಿ ಇರಬೇಕು ಎಂಬ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಶಿಕಾರಿಪುರ ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ಜನಸಂಪರ್ಕ ಕಚೇರಿಗೆ ಶುಕ್ರವಾರ (ಆಗಸ್ಟ್‌ 18) ಚಾಲನೆ ನೀಡಿದರು. ಬೆಳಗ್ಗೆ 8 ಗಂಟೆಗೆ ಲಕ್ಷ್ಮೀ, ಗಣೇಶ ಪೂಜೆ ನಡೆಸಿ ಜನಸಂಪರ್ಕ ಕಚೇರಿಗೆ (Janasamparka office) ಚಾಲನೆ ನೀಡಲಾಯಿತು.

ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯ ಪಕ್ಕದಲ್ಲಿರುವ ಆಡಳಿತ ಸೌಧ ಕಟ್ಟಡದಲ್ಲಿ ಶಾಸಕರ ಜನಸಂಪರ್ಕ ಕಚೇರಿ ಆರಂಭಗೊಂಡಿದೆ. ಕೊಠಡಿ ನಂ.6ರಲ್ಲಿ ಶಾಸಕರ ನೂತನ ಕಚೇರಿಯನ್ನು ತೆರೆಯಲಾಗಿದೆ.

ಇದನ್ನೂ ಓದಿ: Karnataka Politics : ದುಬಾರಿ ಗ್ಯಾರಂಟಿಯಲ್ಲಿ ಈ ಬಾರಿ ಶಾಸಕರ ನಿಧಿ 50 ಲಕ್ಷ ರೂ.ಗೆ ಸೀಮಿತ? 1.5 ಕೋಟಿ ಖೋತಾ!

ಈ ವೇಳೆ ಮಾತನಾಡಿದ ಶಾಸಕ ವಿಜಯೇಂದ್ರ, ಶಾಸಕರಾದವರು ನಿರಂತರವಾಗಿ ಜನರ ಸಂಪರ್ಕದಲ್ಲಿ ಇರಬೇಕು. ನನ್ನನ್ನು ಭೇಟಿ ಮಾಡಬೇಕು ಎಂದರೆ ಎಲ್ಲಿ ಬರುವುದು ಎಂಬ ಗೊಂದಲವು ಸಾರ್ವಜನಿಕರಿಗೆ ಆಗಬಾರದು ಎಂಬ ನಿಟ್ಟಿನಲ್ಲಿ ಜನಸಂಪರ್ಕ ಕಚೇರಿಯನ್ನು ತೆರೆದಿದ್ದೇನೆ. ಇದರಿಂದ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆಗೆ ಅನುಕೂಲವಾಗಲಿದೆ. ನಾಗರಿಕರು ಸಮಸ್ಯೆಗಳಿದ್ದರೆ ಇಲ್ಲಿಗೆ ಬಂದು ನನ್ನನ್ನು ಭೇಟಿ ಮಾಡಿ ಹೇಳಿಕೊಳ್ಳಬಹುದು ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಕಚೇರಿಗೆ ಆಗಮಿಸಿ, ಸಹೋದರ ವಿಜಯೇಂದ್ರ ಅವರಿಗೆ ಹೂಗುಚ್ಚ ನೀಡಿ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಅವರು, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಈ ಕಚೇರಿ ಸಹಕಾರಿಯಾಗಲಿದೆ. ಶಾಸಕರು ವಾರದ ಎರಡು ದಿನ ಬೆಂಗಳೂರಿನಲ್ಲಿ ಇದ್ದರೆ, ಉಳಿದ ದಿನ ಶಿಕಾರಿಪುರದಲ್ಲಿ ಲಭ್ಯರಿರಲಿದ್ದಾರೆ. ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳಬೇಕು. ವಿಜಯೇಂದ್ರ ಅವರು ಜನಸೇವೆಗೆ ಸದಾ ಸಿದ್ಧರಿರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ

ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಸಹಿತ ಹಲವು ಗಣ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಆಗಮಿಸಿ ಶಾಸಕರಿಗೆ ಅಭಿನಂದಿಸಿದರು.

Exit mobile version