ಬೆಂಗಳೂರು: ಮತ್ತಷ್ಟು ಅವನತಿ ಹಾದಿ ತಲುಪಿದ ಬೈಜೂಸ್ (BYJU’S ) ಆನ್‌ಲೈನ್ ಟ್ಯೂಷನ್ ಸೆಂಟರ್ ಇದೀಗ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ರಾಮ್ ಕೈಲಾಶ್ ಯಾದವ್ ಎಂಬ ಗ್ರಾಹಕ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಬೈಜೂಸ್ ಟ್ಯೂಷನ್ ಸೆಂಟರ್ ವಿರುದ್ಧ ದೂರು ನೀಡಿದ್ದಾರೆ. “ಇತ್ತ ಟ್ಯೂಷನ್ ಇಲ್ಲ , ರೀಫಂಡ್ ಇಲ್ಲ ಅಷ್ಟಲ್ಲದೆ ಅಕೌಂಟ್‌ನಿಂದ ಹಣ ಸಹ ಕಟ್ ಆಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ. ಮೊದಲು ಸಣ್ಣ ಮಟ್ಟಿನ ಹೊಸತನದ ಉದ್ಯಮವಾಗಿ ಹೊರಹೊಮ್ಮಿದ ಬೈಜೂಸ್ , ಕೋವಿಡ್ ಸಂಧರ್ಭದಲ್ಲಿ ಸಾಕಷ್ಟು ಖ್ಯಾತಿ ಪಡೆದುಕೊಂಡಿತ್ತು. ಇದಕ್ಕೆ ಈ ಹಿಂದೆ ಖ್ಯಾತ ನಟ ಶಾರುಕ್ ಖಾನ್ ಕೂಡ ಪಬ್ಲಿಸಿಟಿ ಮಾಡಿದ್ದರು.
ನಂತರ ಆರ್ಥಕ ಸಂಕಷ್ಟ ಮಕ್ಕಳು ಆನ್‌ಲೈನ್ ಕ್ಲಾಸ್‌ನಲ್ಲಿ ಭಾಗವಹಿಸದ ಹಿನ್ನಲೆ ಕ್ರಮೇಣ ಉದ್ಯಮ ತಳ ಹಿಡಿಯಲು ಶುರುವಾಗಿತ್ತು ಸದ್ಯ ಅದರ ಎಫೆಕ್ಟ್ ಎಂಬಂತೆ ಈಗ ಮತ್ತೊಂದು ಪ್ರಕರಣ ಎಸ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ದೂರುದಾರ ರಾಮ್ ಕೈಲಾಸ್ ಅವರು ತಮ್ಮ ಮಗನನ್ನ ಸಂಪಂಗಿರಾಮನಗರ ಬಳಿ ಇರುವ ಬೈಜೂಸ್ ಸೆಂಟರ್‌ನಲ್ಲಿ ಟ್ಯೂಷನ್‌ಗೆ ಸೇರಿಸಿದ್ದರು. ಸ್ವಲ್ಪ ದಿನಗಳ ಬಳಿಕ ಟ್ಯೂಷನ್ ಸರಿಯಾಗಿ ಮಾಡದ ಕಾರಣ ರಿಫಂಡ್ ಮಾಡಿ ಎಂದು ದೂರುದಾರ ಕೇಳಿಕೊಂಡಿದ್ದರು.
ಇದರ ಮಧ್ಯೆ ಕಟ್ಟಡದ ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಬೈಜೂಸ್ ಸೆಂಟರ್ ಅನ್ನು ಕ್ಲೋಸ್ ಮಾಡಲಾಗಿತ್ತು. ಈ ವೇಳೆ ರಿಫಂಡ್ ಮಾಡಿ ಎಂದು ಬೈಜೂಸ್ ಸೆಂಟರ್‌ಗೆ ಕರೆ ಮಾಡಿದ್ದರು. ರಿಫಂಡ್ ಮಾಡುತ್ತೆವೆ ಆದರೆ ನಿಮ್ಮ ಅಕೌಂಟ್ ವರ್ಕ್ ಆಗುತ್ತಿಲ್ಲ. ಒಂದು ಆ್ಯಪ್ ಕಳಿಸುತ್ತೇವೆ. ಅದನ್ನು ಇನ್‌ಸ್ಟಾಲ್ ಮಾಡಿ ಎಂರು ಹೇಳಿದ್ದರು. ನಂತರ ರಸ್ಟ್ ಡೆಸ್ಕ್ ಎಂಬ ಆ್ಯಪ್‌ನ ಲಿಂಕ್ ಕಳಿಸಿದ್ದಾರೆ. ಇದನ್ನ ಇನ್‌ಸ್ಟಾಲ್ ಮಾಡಿದ ಕೂಡಲೇ ಯಾದವ್ ಅಕೌಂಟ್‌ನಿಂದ ಬರೋಬ್ಬರಿ 1 ಲಕ್ಷದ 30 ಸಾವಿರ ಹಣ ಕಟ್ ಆಗಿದೆ. ಅಷ್ಟೆಲ್ಲದೆ ನಿಮ್ಮ ಟ್ಯೂಷನ್ ಹಣ ಬಾಕಿ ಇದೆ ಎಂದು ಮೆಸೇಜ್ ಕೂಡ ಕಳಿಸಿದ್ದಾರೆಂದು ದೂರಿದ್ದಾರೆ.