Site icon Vistara News

Karnataka Election 2023: ಗುರುರಾಜ ಗಂಟಿಹೊಳೆ ಅಭಿಮಾನಕ್ಕಾಗಿ ಬರಿಗಾಲಲ್ಲೇ ಬಂದು ಮತ ಹಾಕಿದ ಬೈಂದೂರು ಯುವಕರು

Byndoor youths come barefoot to cast their vote

ಉಡುಪಿ: ಪ್ರಸಕ್ತ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಹಲವು ವಿಶೇಷತೆಗಳು ಇವೆ. ರಾಜಕೀಯ ಪಕ್ಷಗಳೂ ಸಹ ಹೊಸ ಮುಖಗಳಿಗೆ ಮಣೆ ಹಾಕಿವೆ. ಈ ವೇಳೆ ಬರಿಗಾಲ ಸೇವಕ ಎಂದೇ ಖ್ಯಾತಿ ಹೊಂದಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಅಭಿಮಾನಿಗಳು ಬರಿಗಾಲಿನಲ್ಲಿ ಬಂದು ಮತದಾನ ಮಾಡಿ ಗಮನ ಸೆಳೆದಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರು ಬರಿಗಾಲಿನಲ್ಲಿಯೇ ಚುನಾವಣಾ ಪ್ರಚಾರ ಮಾಡಿದ್ದರು. ಕಾಲೇಜು ಶಿಕ್ಷಣದ ಬಳಿಕ ಬರಿಗಾಲಿನಲ್ಲಿಯೇ ನಡೆಯುತ್ತಿರುವ ಅವರು ಬರಿಗಾಲಿನ ಸಂತ ಎಂದು ಹೆಸರು ಪಡೆದಿದ್ದಾರೆ.

ಬೈಂದೂರಿನಲ್ಲಿ ಮತಗಟ್ಟೆಗೆ ಬರಿಗಾಲಿನಲ್ಲಿಯೇ ಬಂದು ಮತದಾನ

ಇದನ್ನೂ ಓದಿ: Karnataka Election 2023 Live Updates: ರಾಜ್ಯ ವಿಧಾನಸಭೆ ಚುನಾವಣೆಯ ಕ್ಷಣಕ್ಷಣದ ಸುದ್ದಿ: ರಾಜ್ಯದಲ್ಲಿ ಶೇ. 52.18 ರಷ್ಟು ಹೆಚ್ಚು ಮತದಾನ

ಬರಿಗಾಲಲ್ಲೇ ಬಂದ ಗಂಟಿಹೊಳೆ ಫ್ಯಾನ್ಸ್‌

ಕರೆ ನೀಡಿದ್ದ ಅಣ್ಣಾಮಲೈ

ಈ ಸಂದರ್ಭದಲ್ಲಿ ಬೈಂದೂರಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಅವರು, ಬರಿಗಾಲಿನಲ್ಲಿ ಬಂದು ಮತ ಹಾಕುವಂತೆ ಮನವಿ ಮಾಡಿದ್ದರು. ಅಣ್ಣಾಮಲೈ ಮನವಿಯ ಮೇರೆಗೆ ಬರಿಗಾಲಿನಲ್ಲಿ ಬಂದು ಅಭಿಮಾನಿಗಳು ಮತ ಹಾಕುತ್ತಿದ್ದಾರೆ.

Exit mobile version