ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ (Cabinet Expansion) ಸಂಬಂಧಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಹಲವಾರು ವಿಚಾರಗಳು ಚರ್ಚೆಗೆ ಒಳಗಾಗಿವೆ. ಸುದೀರ್ಘ ಚರ್ಚೆಯ ಸಂದರ್ಭದಲ್ಲಿ ಸಚಿವರಾಗಬಹುದಾದ ಹಲವರ ಹೆಸರು ಚರ್ಚೆಗೆ ಬಂದಿವೆ. ಇದುವರೆಗಿನ ಮಾತುಕತೆಯಲ್ಲಿ 18 ಸಚಿವರ ಹೆಸರು ಫೈನಲ್ ಆಗಿದೆ. ಇನ್ನು ಇಬ್ಬರ ಹೆಸರು ಎರಡನೇ ಸುತ್ತಿನ ಚರ್ಚೆ ಬಳಿಕ ಫೈನಲ್ ಆಗುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.
ಬುಧವಾರ ಸಂಜೆ ಅಧಿವೇಶನ ಮುಗಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ದಿಲ್ಲಿಗೆ ಹೋಗಿದ್ದರು. ಅವರನ್ನು ಅನುಸರಿಸಿ ಸುಮಾರು 35ಕ್ಕೂ ಹೆಚ್ಚು ಸಚಿವ ಸ್ಥಾನಾಕಾಂಕ್ಷಿ ಶಾಸಕರು ಕೂಡಾ ದಿಲ್ಲಿಯಲ್ಲಿದ್ದಾರೆ. ಬುಧವಾರ ರಾತ್ರಿಯೇ ಒಂದು ಸುತ್ತಿನ ಸಭೆ ನಡೆಯಲಿದೆ ಎಂದು ಹೇಳಲಾಗಿದ್ದರೂ ಅದು ಗುರುವಾರಕ್ಕೆ ಮುಂದೂಡಲ್ಪಟ್ಟಿತ್ತು. ಗುರುವಾರ ಬೆಳಗ್ಗೆ ಮೊದಲ ಹಂತದ ಮಾತುಕತೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಮನೆಯಲ್ಲಿ ಸಭೆ ನಡೆಯುವುದು ಎಂದು ತೀರ್ಮಾನವಾಗಿತ್ತು. ಆದರೆ ಬಳಿಕ ಅದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಶಿಫ್ಟ್ ಆಯಿತು. ಅಲ್ಲಿ ಸಚಿವರ ಆಯ್ಕೆ ವಿಚಾರ ಬಂದಾಗ ಪ್ರಮುಖವಾಗಿ ಹಲವು ವಿಚಾರಗಳು ಬಂದವು.
1. ಯುವಕರಿಗೆ ಈ ಬಾರಿ ಮನ್ನಣೆ ನೀಡಬೇಕು ಎಂದು ಒಂದು ಕಡೆಯಾದರೆ, ಹಿರಿಯರನ್ನು ಕಡೆಗಣಿಸೋದು ಸರಿಯಲ್ಲ ಎಂಬುದು ಮತ್ತೊ0ದು ಕಡೆಯ ವಾದ.
2. ಜಾತಿವಾರು, ಪ್ರಾಂತ್ಯವಾರು ಸಚಿವ ಸ್ಥಾನ ನೀಡಬೇಕು ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ, ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಿಗೆ ಸ್ಥಾನ ಮಾನ ನೀಡಬೇಕು ಎಂಬುದು ಇನ್ನೊಂದು ವಾದ.
3. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆ ಆಗಲಿದೆ. ಹೀಗಾಗಿ ಪಕ್ಷಕ್ಕೆ ಪ್ರಾಮುಖ್ಯತೆ ನೀಡುವವರಿಗೆ ಆದ್ಯತೆ ನೀಡಬೇಕು.
4.ಮುಂಬರುವ ಲೋಕಸಭಾ ಚುನಾವಣೆ ಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ಹಂಚಿಕೆ ಮಾಡಬೇಕು. ಲೋಕಸಭೆಯಲ್ಲಿ 20+ ಸೀಟ್ ಗೆಲ್ಲಲು ಸಂಘಟನೆ ಮುಖ್ಯ.
ನಾಲ್ಕನೆ ವಾದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಸಂಭವನೀಯ ಸಚಿವರು, ಅವರ ಜಿಲ್ಲೆ ಮತ್ತು ಸಮುದಾಯದ ವಿವರ
1. ಈಶ್ವರ ಖಂಡ್ರೆ -ಬೀದರ್- ಲಿಂಗಾಯತ
2. ಲಕ್ಷ್ಮೀ ಹೆಬ್ಬಾಳ್ಕರ್ – ಬೆಳಗಾವಿ – ಲಿಂಗಾಯತ
3. ಶಿವಾನಂದ ಪಾಟೀಲ್ – ಬಿಜಾಪುರ- ಲಿಂಗಾಯತ
4. ರಹೀಂ ಖಾನ್ – ಬೀದರ್ – ಮುಸ್ಲಿಂ
5. ಅಜಯ್ ಸಿಂಗ್ – ಕಲಬುರಗಿ – ಸಿಂಗ್
6. ಪುಟ್ಟರಂಗಶೆಟ್ಟಿ – ಚಾಮರಾಜನಗರ – ಉಪ್ಪಾರ
7.ಎಸ್ ಎಸ್ ಮಲ್ಲಿಕಾರ್ಜುನ – ದಾವಣಗೆರೆ – ಲಿಂಗಾಯತ
8. ಬೈರತಿ ಸುರೇಶ್ – ಬೆಂಗಳೂರು -ಕುರುಬ
9. ಬಸವರಾಜ ರಾಯರೆಡ್ಡಿ -ಕೊಪ್ಪಳ- ರೆಡ್ಡಿ ಲಿಂಗಾಯತ
10. ಡಾ. ಮಹಾದೇವಪ್ಪ – ಮೈಸೂರು- ದಲಿತ ಬಲ
11. ಪಿರಿಯಾಪಟ್ಟಣ-ವೆಂಕಟೇಶ್ – ಮೈಸೂರು- ಒಕ್ಕಲಿಗ
12. ಕೃಷ್ಣ ಬೈರೇಗೌಡ – ಬೆಂಗಳೂರು- ಒಕ್ಕಲಿಗ
13. ನರೇಂದ್ರ ಸ್ವಾಮಿ – ಮಂಡ್ಯ- ಎಸ್ಸಿ ಬಲ
14. ಚಿಂತಾಮಣಿ ಸುಧಾಕರ್ – ಚಿಕ್ಕಬಳ್ಳಾಪುರ ಜಿಲ್ಲೆ – ರೆಡ್ಡಿ
15. ಹಿರಿಯೂರು ಸುಧಾಕರ್ – ಚಿತ್ರದುರ್ಗ – ಒಕ್ಕಲಿಗ
16. ಎಚ್ ಕೆ ಪಾಟೀಲ್ – ಗದಗ – ರೆಡ್ಡಿ ಲಿಂಗಾಯತ
17. ಚಲುವರಾಯಸ್ವಾಮಿ – ಮಂಡ್ಯ – ಒಕ್ಕಲಿಗ
18. ಶಿವರಾಜ ತಂಗಡಗಿ- ಕೊಪ್ಪಳ- ನಾಯಕ
ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಸಿಎಂ-ಡಿಸಿಎಂ ಫೈಟ್
ಈ ನಡುವೆ ಬೆಂಗಳೂರು ನಗರಾಭಿವೃಧಧಿ ಖಾತೆಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಬಿಗ್ ಫೈಟ್ ನಡೆಯುತ್ತಿದೆ ಎನ್ನಲಾಗಿದೆ. ಬೆಂಗಳೂರು ಅಭಿವೃದ್ಧಿ ಖಾತೆ ತಮ್ಮ ಬಳಿಯೇ ಇಟ್ಟುಕೊಳ್ಳಲು ಸಿಎಂ ಸಿದ್ದರಾಮಯ್ಯ ಚಿಂತನೆ ಮಾಡಿಕೊಂಡಿದ್ದರೆ ಬೆಂಗಳೂರು ಅಭಿವೃದ್ಧಿ ಖಾತೆ ನನಗೆ ಬೇಕು ಎಂದು ಡಿ.ಕೆ ಶಿವಕುಮಾರ್ ಡಿಮ್ಯಾಂಡ್ ಇಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Karnataka Politics : ಆರೆಸ್ಸೆಸ್, ಬಜರಂಗ ಬ್ಯಾನ್ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದ ಪರಮೇಶ್ವರ್