Site icon Vistara News

Cabinet Expansion : ಬೋಸರಾಜ್‌ಗೆ ಮಂತ್ರಿಗಿರಿ ಪ್ರಸ್ತಾಪಕ್ಕೆ ವಿರೋಧ; ಸಿಟ್ಟಿಗೆದ್ದ ರಾಯಚೂರು ಕೈ ಶಾಸಕರು

NS Bosaraju to be minister, Raichur MLAs oppose

NS Bosaraju to be minister, Raichur MLAs oppose

ರಾಯಚೂರು: ರಾಜ್ಯ ಸಚಿವ ಸಂಪುಟದಲ್ಲಿ (Cabinet Expansion) ತಮಗೆ ಸ್ಥಾನ ನೀಡಬೇಕು ಎಂದು ಶಾಸಕರು ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಪಟ್ಟಿ ಫೈನಲ್‌ ಮಾಡಲು ನಾಯಕರು ಒದ್ದಾಡುತ್ತಿರುವ ನಡುವೆಯೇ ಸಂಪುಟದಲ್ಲಿ ನಾಯಕರೊಬ್ಬರಿಗೆ ಸ್ಥಾನ ನೀಡಲು ಉದ್ದೇಶಿಸಿರುವುದು ಕೂಡಾ ಆಕ್ಷೇಪಕ್ಕೆ ಕಾರಣವಾಗಿದೆ.

ರಾಜ್ಯ ಸಚಿವ ಸಂಪುಟದ ವಿಸ್ತರಣೆಗೆ ಸಂಬಂಧಿ ದಿಲ್ಲಿಯಲ್ಲಿ ಗುರುವಾರ ಮಹತ್ವದ ಸಭೆ ನಡೆದು ಮೇ 27 (ಶನಿವಾರ) ಬೆಳಗ್ಗೆ 11.45ಕ್ಕೆ ಪ್ರಮಾಣ ವಚನ ಸ್ವೀಕರಿಸಲು ಕಾರ್ಯಕ್ರಮ ನಿಗದಿಯಾಗಿದೆ. ಈ ಕಾರ್ಯಕ್ರಮದಲ್ಲಿ ಒಟ್ಟು 23 ಮಂದಿ ಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಇವರಲ್ಲಿ ಒಬ್ಬರು ರಾಯಚೂರು ಜಿಲ್ಲೆಯವರಾದ, ಎಐಸಿಸಿ ಕಾರ್ಯದರ್ಶಿಗಳೂ ಆಗಿರುವ ಎನ್ ಎಸ್‌ ಬೋಸರಾಜು (NS Bosaraju).

ಎನ್‌ ಎಸ್‌ ಬೋಸರಾಜ್‌ ಅವರು ಹಾಲಿ ಶಾಸಕರಲ್ಲ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿಯೂ ಇಲ್ಲ. ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಮಂತ್ರಿಗಿರಿ ನೀಡಲು ನಿರ್ಧರಿಸಲಾಗಿದೆ. ಇದು ಹೈಕಮಾಂಡ್‌ ಅಂದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರ ಆಯ್ಕೆ ಎಂದು ಹೇಳಲಾಗಿದೆ.

ಇದೀಗ ಬೋಸರಾಜ್‌ ಅವರಿಗೆ ಮಂತ್ರಿ ಹುದ್ದೆ ನೀಡಲು ಮುಂದಾಗಿರುವುದು ರಾಯಚೂರು ಜಿಲ್ಲೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇವರ ಪಕ್ಷ ವಿರೋಧಿ ಚಟುವಟಿಕೆಯ ಗಂಭೀರ ಆರೋಪ ಮಾಡಿರುವ ಜಿಲ್ಲೆಯ ಶಾಸಕರು, ತಮ್ಮನ್ನು ಬಿಟ್ಟು ಅವರಿಗೆ ಟಿಕೆಟ್‌ ನೀಡಿರುವುದನ್ನು ಆಕ್ಷೇಪಿಸಿದ್ದಾರೆ.

ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ನಾಯಕರಾದ ಎ ವಸಂತ್ ಕುಮಾರ್ ಮತ್ತು ಅಸ್ಲಂ ಪಾಷಾ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ‌ಖರ್ಗೆ ಅವರಿಗೆ ಪತ್ರ ಬರೆದು ಎನ್‌.ಎಸ್‌. ಬೋಸರಾಜ್ ವಿರುದ್ಧ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೋಸರಾಜ್‌ ಅವರು ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎನ್ನುವುದು ಅವರ ಪ್ರಧಾನ ಆರೋಪ. ಆದರೆ, ತಮ್ಮನ್ನು ಬಿಟ್ಟು ಬೋಸರಾಜ್‌ ಅವರು ಮಂತ್ರಿಗಿರಿ ಗಿಟ್ಟಿಸಿಕೊಳ್ಳುತ್ತಿರುವುದು ಅವರಿಗೆ ಬೇಸರ ಮೂಡಿಸಿದೆ.

ಬೋಸರಾಜು ಅವರಿಗೆ ಯಾಕೆ ಮಂತ್ರಿಗಿರಿ?

ಬೋಸರಾಜ್‌ ಅವರು ಕಳೆದ ಚುನಾವಣೆಯ ಸಂದರ್ಭದಲ್ಲಿ ತಮಗೆ ಅಥವಾ ಮಗನಿಗೆ ಟಿಕೆಟ್ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಬೋಸರಾಜು ಕುಟುಂಬ ರಾಯಚೂರು ನಗರದ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿತ್ತು.

ವಿಧಾನ ಸಭಾ ಕ್ಷೇತ್ರದ ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ಅವರಿಗೆ ಪರಿಷತ್ ಸ್ಥಾನ ನೀಡಿ ಮಂತ್ರಿ ಮಾಡುವ ಭರವಸೆ ನೀಡಿತ್ತು ಹೈಕಮಾಂಡ್. ಇದೀಗ ಭರವಸೆಯಂತೆ ಮಂತ್ರಿ ಪಟ್ಟಿಯಲ್ಲಿ ಹೆಸರು ಫೈನಲ್ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: Cabinet Expansion: ಜಗದೀಶ್‌ ಶೆಟ್ಟರ್‌ಗೆ ಎಂಎಲ್ಸಿ ಸ್ಥಾನ; ಸಂಪುಟ ಸೇರಲಿರುವ 23 ಶಾಸಕರ ಹೆಸರು ಇಲ್ಲಿದೆ

Cabinet-expansion : Raichur MLAs oppose ministership to NS Bosaraju, writes to Kharge

Exit mobile version