ಬೆಂಗಳೂರು: ಎಸ್‌ಸಿ ಎಸ್‌ಟಿ ಮೀಸಲು ಹೆಚ್ಚಳವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವ ಕರ್ನಾಟಕ ಸರ್ಕಾರ, ಸಿದ್ಧಿ ಸಿರಿ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆ, ಕರ್ನಾಟಕ ಕೃಷಿ ಸೇವೆಗಳ ನೇಮಕಾತಿಗೆ ತಿದ್ದುಪಡಿ, 296 ಪಶು ಚಿಕಿತ್ಸಾ ಘಟಕಗಳ ನಿರ್ವಹಣೆಗೆ ಗುತ್ತಿಗೆ, ಕಾಗವಾಡ ತಾಲೂಕಿನ 23 ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಅನುಮತಿ ಸೇರಿದಂತೆ ಅನೇಕ ನಿರ್ಧಾರಗಳನ್ನು ರಾಜ್ಯ ಸಚಿವ ಸಂಪುಟ ಸಭೆ(Cabinet Meeting)ಯಲ್ಲಿ ತೆಗೆದುಕೊಳ್ಳಲಾಗಿದೆ.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳ ಬಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಾಧ್ಯಮಗಳ ಮಾಹಿತಿ ನೀಡಿದರು.
ಸಂಪುಟ ಕೈಗೊಂಡ ಇತರ ನಿರ್ಧಾರಗಳೇನು?
- ಸಿದ್ದಿ ಸಿರಿ ಸೌಹಾರ್ದ ಕೋಪರೇಟೀವ್ ಕಾರ್ಖಾನೆಗೆ 300 ಹಳ್ಳಿಗಳನ್ನು ಅಡಾಪ್ಟ್ ಮಾಡಲಾಗವುದು. ಈ ಮೊದಲು ರೈತರು ಚಿಂಚೋಳಿ ಕಾರ್ಖಾನೆಗೆ ಕಬ್ಬು ಕಳುಹಿಸುತ್ತಿದ್ದರು. ಇನ್ನು ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಳುಹಿಸಬೇಕಾಗುತ್ತದೆ.
- ಕರ್ನಾಟಕ ಕೃಷಿ ಸೇವೆಗಳ ನೇಮಕಾತಿ ಕಾಯಿದೆಗೆ ತಿದ್ದುಪಡಿ ತರಲಾಗುವುದು.
- 293 ಸಂಚಾರಿ ಪಶು ಚಿಕಿತ್ಸಾ ಘಟಕಗಳ ನಿರ್ವಹಣೆ ಗುತ್ತಿಗೆ
- ಕಾಗವಾಡದ ೨೩ ಕೆರೆಗಳಿಗೆ ನೀರು ತುಂಬುವ ಯೋಜನೆ. ಇದಕ್ಕಾಗಿ ೨೨೯.೪೦ ಕೋಟಿ ರೂಪಾಯಿ ವೆಚ್ಚಕ್ಕೆ ಸಮ್ಮತಿ
- ವಿಶ್ವೇಶ್ವರಯ್ಯ ಜಲನಿಗಮಕ್ಕೆ 250 ಕೋಟಿ ರೂ. ಸಾಲ ಪಡೆಯಲು ಖಾತರಿ
- ಕರ್ನಾಟಕ ನೀರಾವರಿ ನಿಗಮ ಮಾಡಲಿರುವ 850 ಕೋಟಿ ರೂ. ಸಾಲಕ್ಕೆ ಖಾತರಿ
- ರಾಯಚೂರು ವಿವಿ ಮೂಲಸೌಕರ್ಯಕ್ಕೆ ಅನುದಾನ. 15 ಕೋಟಿ ರೂ. ನೀಡಲು ಒಪ್ಪಿಗೆ.
- ವಿಜಯಪುರ ವಿಮಾನನಿಲ್ದಾಣ ಮೇಲ್ದರ್ಜೇಗೇರಿಸಲು ಕ್ರಮ. ೩೪೭ ಕೋಟಿ ರೂ. ವೆಚ್ಚಕ್ಕೆ ಅನುಮೋದನೆ. ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಹೆಸರಿಡಲು ನಿರ್ಧಾರ
- ವೈದ್ಯಕೀಯ ಸಂಸ್ಥೆಗಳಿಗೆ ಅನಸ್ತೇಷಿಯ ಉಪಕರಣ ಖರೀದಿಗೆ ೩೩.೯೨ ಕೋಟಿ ವೆಚ್ಚಕ್ಕೆ ಅನುಮೋದನೆ.
- ಸುಬ್ಬರಾಡಿ ಕಿಂಡಿ ಅಣೆಕಟ್ಟು ನಿರ್ಮಾಣ. ೪೭.೪೭ ಕೋಟಿ ಅನುಮೋದನೆ ಒಪ್ಪಿದ್ದೇವೆ
- ಬೆಳ್ತಂಗಡಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ. ೧೨ ಕೋಟಿ ರೂ ಅನುದಾನ.
- ಬೃಹತ್ ಮಳೆ ನೀರುಗಾಲುವೆ ಅಭಿವೃದ್ಧಿಗೆ 1500 ಕೋಟಿ ರೂ. ಕ್ರಿಯಾಯೋಜನೆಗೆ ಅನುಮತಿ
ಬಹುಗ್ರಾಮ ಕುಡಿಯುವ ನೀರು
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಯೋಜನೆಯಡಿ ಬಾನಗುಂದಿ ೨೬೦ ಹಳ್ಳಿಗಳಿಗೆ ೨೬೦ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಒಟ್ಟಾರೆ ರಾಜ್ಯ ಸಚಿವ ಸಂಪುಟವು ೨೪ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಹಿರಿಯೂರಿನ ೩೦೦ ವಸತಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, 592 ಕೋಟಿ ರೂ. ಅನುದಾನು ನೀಡಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.