ಯಾದಗಿರಿ: ಸಾರ್ವತ್ರಿಕ ವಿಧಾನಸಭೆ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಸತತ ಚುನಾವಣಾ ಪ್ರಚಾರ, ಮನೆ ಮನೆ ಸುತ್ತಾಟದಿಂದ ದಣಿದಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಗುರುವಾರ ರಿಲಾಕ್ಸ್ ಮೂಡ್‌ನಲ್ಲಿದ್ದರು.
ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ತಮ್ಮ ಕುಟುಂಬದ ಸದಸ್ಯರಿಗೂ ಸಮಯ ನೀಡಲಾಗದೇ, ತಮ್ಮ ಪರ ಭರ್ಜರಿ ಚುನಾವಣಾ ಪ್ರಚಾರ ಮಾಡಿ ಮತಯಾಚನೆ ನಡೆಸಿದ್ದರು.
ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆದಿದ್ದು, 37 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಬುಧವಾರ ಮತದಾನ ಮುಕ್ತಾಯವಾದ ನಂತರ ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.
ಇದನ್ನೂ ಓದಿ: Road Accident: ಭೀಕರ ಅಪಘಾತ; ಮೊಮ್ಮಕ್ಕಳ ಜತೆ ಹೋಗುತ್ತಿದ್ದ ವೃದ್ಧೆ, ಬೈಕ್ ಸವಾರರ ದುರ್ಮರಣ
ಯಾದಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಗುರುವಾರ ಬೆಳಿಗ್ಗೆ ತಮ್ಮ ಊರಾದ ಮುದ್ನಾಳ ಗ್ರಾಮಕ್ಕೆ ತೆರಳಿ ಊರಿನವರ ಜೊತೆ ಕೆಲ ಹೊತ್ತು ಕಾಲ ಕಳೆದರು. ನಂತರ ಯಾದಗಿರಿ ನಗರಕ್ಕೆ ಆಗಮಿಸಿ ಮೊಮ್ಮಗನ ಜೊತೆ ಕಾಲ ಕಳೆದು ಖುಷಿಪಟ್ಟರು.
ನಂತರ ಶಾಸಕರು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿಯಾದರು. ತಮ್ಮ ಕ್ಷೇತ್ರದಲ್ಲಿ ತಮ್ಮ ಪರ ಹಾಗೂ ವಿವಿಧ ಪಕ್ಷದ ಅಭ್ಯರ್ಥಿಗಳ ಪರ ಮತವಾದ ಬಗ್ಗೆ ಚರ್ಚೆ ಮಾಡಿದರು.
ಇದನ್ನೂ ಓದಿ: Maharastra political crisis : ಮಹಾರಾಷ್ಟ್ರದಲ್ಲಿ ಠಾಕ್ರೆ ಸರ್ಕಾರ ಮರುಸ್ಥಾಪನೆ ಅಸಾಧ್ಯ: ಸುಪ್ರೀಂಕೋರ್ಟ್
ಈ ವೇಳೆ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪಕ್ಷವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ, ತಾವು ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾದಗಿರಿ ವಿಧಾನಸಭೆ ಕ್ಷೇತ್ರವು ಚತುಷ್ಕೋನ ಸ್ಪರ್ಧೆ ಏರ್ಪಟ್ಟಿತ್ತು. ಪಕ್ಷೇತರ ಅಭ್ಯರ್ಥಿ ಹಣಮೇಗೌಡ ಬೀರನಕಲ್ ಅವರು ಮತದಾನ ನಂತರದ ದಿನ ತಮ್ಮ ಬೆಂಬಲಿಗರ ಜೊತೆ ಯಾದಗಿರಿ ಕ್ಷೇತ್ರದಲ್ಲಿ ತಮಗೆ ಎಷ್ಟು ಪ್ರಮಾಣ ಮತ ಸಿಕ್ಕಿದೆ. ಅದೆ ರೀತಿ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಎಷ್ಟು ಮತ ಸಿಗಬಹುದು ಎಂದು ಚರ್ಚೆ ನಡೆಸಿದರು.