Site icon Vistara News

Car Accident | ಮತ್ತೆ ಬೆಂಗಳೂರು ವಿವಿಯಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ; ಶಿಲ್ಪಶ್ರೀ ಸಾವಿನ ಬಳಿಕ ಒಂಬತ್ತನೇ ಅಪಘಾತ

car accident

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಪಘಾತ ಪ್ರಕರಣಗಳು (Car Accident) ಮುಂದುವರಿದಿದ್ದು, ವಿದ್ಯಾರ್ಥಿನಿ ಶಿಲ್ಪಶ್ರೀ ಸಾವಿನ ಬಳಿಕ ಒಂಬತ್ತನೇ ಅಪಘಾತ ಸೋಮವಾರ (ನ.21) ಸಂಭವಿಸಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿವಿ ಕೇಂದ್ರ ಕಚೇರಿ ಮತ್ತು ನಾಗರಭಾವಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸ್ವಿಫ್ಟ್ ಮತ್ತು ಸ್ವಿಫ್ಟ್ ಡಿಸೈರ್ ನಡುವೆ ಅಪಘಾತ ನಡೆದಿದೆ.

Car Accident

ಬಯೋಟೆಕ್ ವಿಭಾಗದ ಪ್ರಾಧ್ಯಾಪಕಿಯೊಬ್ಬರು ಕ್ಯಾಬ್‌ ಬುಕ್ ಮಾಡಿದ್ದರು. ಈ ವೇಳೆ ವೇಗವಾಗಿ ಬಂದಂತಹ ಖಾಸಗಿ ವಾಹನವು ಕ್ಯಾಬ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ವಿವಿಯಲ್ಲಿ ಅಪಘಾತ ತಡೆಗೆ ಹಲವಾರು ಕ್ರಮಗಳನ್ನು ಕೈಗೊಂಡರೂ ಅಪಘಾತಗಳು ಮುಂದುವರಿದಿದೆ. ಸಂವಹನ ಮತ್ತು ಬಯೋಟೆಕ್ ವಿಭಾಗದ ಮುಂದೆ ರಸ್ತೆ ಉಬ್ಬುಗಳು ಇಲ್ಲದೇ ಇರುವುದೆ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಹಾಗೂ ವಾಹನ ಸವಾರರು ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಕಾರ್ಯಕ್ರಮದಿಂದಾಗಿ ರಸ್ತೆ ಉಬ್ಬುಗಳನ್ನು ತೆರವು ಮಾಡಲಾಯಿತು. ಕಾರ್ಯಕ್ರಮ ಮುಗಿದು ನಾಲ್ಕು ತಿಂಗಳಾದರೂ ಉಬ್ಬುಗಳ ಮರು ನಿರ್ಮಾಣ ಮಾಡದ ಬಿಬಿಎಂಪಿ ವಿರುದ್ಧ ಕಿಡಿಕಾರಿದ್ದಾರೆ. ಹಲವಾರು ಬಾರಿ ಬಿಬಿಎಂಪಿ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸಿಲ್ಲ. ಬಿಬಿಎಂಪಿಯ ಬೇಜವಾಬ್ದಾರಿಯಿಂದ ರಸ್ತೆ ಸುರಕ್ಷತೆ ಕುಗ್ಗುತ್ತಿದೆ ಎಂಬ ಆರೋಪವು ಕೇಳಿಬಂದಿದೆ.

ಇದನ್ನೂ ಓದಿ | Road Accident | ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ನೀರಿನ ಟ್ಯಾಂಕರ್; ಸ್ಥಳದಲ್ಲಿಯೇ ಚಾಲಕ ಸಾವು

Exit mobile version