Site icon Vistara News

Road accident | ಸಿದ್ದಾಪುರ ಬಳಿ ಕಾರು-ಬೈಕ್‌ ಮುಖಾಮುಖಿ ಡಿಕ್ಕಿ: ಬೈಕ್‌ ಸವಾರ ಸ್ಥಳದಲ್ಲೇ ಮೃತ್ಯು

Sirsi accident

ಶಿರಸಿ: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ (Road accident) ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಿದ್ದಾಪುರದ ಹಾಳದಕಟ್ಟಾದಲ್ಲಿ ನಡೆದಿದೆ. ಹೊಸಗದ್ದೆಯ ರಮೇಶ್ ಗಜಾನನ ಹೆಗಡೆ (52) ಮೃತಪಟ್ಟಿದ್ದು, ಅವರು ಸಿದ್ದಾಪುರದಿಂದ ಶಿರಳಗಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು

ಅಪಘಾತಕ್ಕೆ ಒಳಗಾದ ಬೈಕ್‌

ಬೈಕ್‌ ಸಿದ್ಧಾಪುರದಿಂದ ಶಿರಳಗಿಗೆ ಹೋಗುತ್ತಿದ್ದರೆ, ಕಾರು ಸೊರಬ ಕಡೆಯಿಂದ ಸಿದ್ದಾಪುರ ಕಡೆ ಬರುತ್ತಿದ್ದ ಕಾರ್ಬೈಕ್‌ ಸಿದ್ಧಾಪುರದಿಂದ ಶಿರಳಗಿಗೆ ಹೋಗುತ್ತಿದ್ದರೆ, ಕಾರು ಸೊರಬ ಕಡೆಯಿಂದ ಸಿದ್ದಾಪುರ ಕಡೆ ಬರುತ್ತಿತ್ತು. ಅಂಡಗಿಯ ದರ್ಶನ್ (23) ಎಂಬಾತ ಈ ಕಾರನ್ನು ಚಲಾಯಿಸುತ್ತಿದ್ದ.

ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದರೆ ಕಾರು ಕೂಡಾ ಪಲ್ಟಿಯಾಗಿ ಬಿದ್ದಿದೆ. ಪ್ರದೇಶದ ಚಿತ್ರಣ ಅತ್ಯಂತ ಭಯಾನಕವಾಗಿ ಕಾಣುತ್ತಿದೆ. ಕಾರು ಚಾಲಕ ದರ್ಶನ್‌ಗೂ ತೀವ್ರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಕೇಸು ದಾಖಲಾಗಿದೆ.

ಇದನ್ನೂ ಓದಿ | Road accident | ಕೆಆರ್‌ ಪುರಂನಲ್ಲಿ ಭೀಕರ ಅಪಘಾತಕ್ಕೆ ಇಬ್ಬರು ಮಹಿಳೆಯರ ಸಾವು, ಮೂವರು ಗಂಭೀರ

Exit mobile version