Site icon Vistara News

Car Fire | ಚಲಿಸುತ್ತಿದ್ದಾಗಲೇ ಧಗ ಧಗನೆ ಹೊತ್ತಿ ಉರಿದ ಕಾರು; ಪ್ರಾಣಾಪಾಯದಿಂದ ಪಾರು

car fire

ವಿಜಯನಗರ: ಇಲ್ಲಿನ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿಯೇ ಹೊತ್ತಿ ಉರಿದ (car fire) ಘಟನೆ ನಡೆದಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರು ಹೊರ ಬಂದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಆಗಿಲ್ಲ.

ವೀರಾಪುರ ಸರ್ವಿಸ್ ರಸ್ತೆಯ ಬಳಿ ನೋಡನೋಡುತ್ತಿದ್ದ ದಟ್ಟ ಹೊಗೆ ಆವರಿಸಿದ್ದು, ದಿಢೀರ್‌ ಆಗಿ ಕಾಣಿಸಿಕೊಂಡ ಬೆಂಕಿಯು ಧಗ ಧಗನೇ ಹೊತ್ತಿ ಉರಿಯತೊಡಗಿದೆ. ಇದರಿಂದ ಕ್ಷಣ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹೈವೇ ಪೆಟ್ರೋಲಿಂಗ್ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಾರಿನಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂದು ಇನ್ನೂ ತಿಳಿದು ಬಂದಿಲ್ಲ.

ಇದನ್ನೂ ಓದಿ | ಇವಳೆಂಥಾ ಧೂರ್ತ ಹೆಂಗಸು!; ಪುತ್ರನ ಕಾಮದಾಹ ತಣಿಸಲು ಬಾಲಕಿಗೆ ಡ್ರಗ್ಸ್​ ಕೊಟ್ಟು, ಎಚ್ಚರ ತಪ್ಪಿಸಿದ ತಾಯಿ

Exit mobile version