Site icon Vistara News

Car Theft | ಲೋನ್​ ಕಟ್ಟಲಾಗದೇ ಕಾರು ಕಳ್ಳತನದ ಸುಳ್ಳು ದೂರು ಕೊಟ್ಟವ ಸೆರೆಮನೆ ಸೇರಿದ!

Toyota Yaris car theft shivamogga

ಶಿವಮೊಗ್ಗ: ಕಾರು ಕಳ್ಳತನ (Car Theft) ಪ್ರಕರಣವೊಂದನ್ನು ಭೇದಿಸಿರುವ ತುಂಗಾ ನಗರ ಠಾಣೆಯ ಪೊಲೀಸರು ದೂರು ನೀಡಿದ ಮಾಲೀಕನನ್ನೇ ಬಂಧಿಸಿದ್ದಾರೆ.

ಕಾರಿನ ಲೋನ್ ಹಣ ಕಟ್ಟದೆ ಫೈನಾನ್ಸ್ ಸಂಸ್ಥೆಗೆ ವಂಚಿಸಲು ಮತ್ತು ಇನ್ಷುರೆನ್ಸ್ ಹಣಕ್ಕಾಗಿ ತನ್ನ ಕಾರಿನ ನಂಬರ್ ಬದಲಾಯಿಸಿ, ಸ್ನೇಹಿತನಿಗೆ ಕೊಟ್ಟು ಕಳ್ಳತನದ ದೂರು ನೀಡಿದ್ದ ಎಂಬುದು ತನಿಖೆಯ ವೇಳೆ ಗೊತ್ತಾಗಿದೆ.
ಶಿವಮೊಗ್ಗ ವಿದ್ಯಾನಗರದ ಚಂದ್ರು ಕುಮಾರ (28) ಮತ್ತು ಆತನ ಸ್ನೇಹಿತ ದಾವಣೆಗೆರೆ ಸರಸ್ವತಿ ನಗರದ ಪ್ರಶಾಂತ್ (29) ಬಂಧಿತರು.

ಇದನ್ನೂ ಓದಿ | Smriti Sangeetha | ಮಲ್ಲೇಶ್ವರದಲ್ಲಿ ಜ. 8ರಂದು ʼಸ್ಮೃತಿ ಸಂಗೀತʼ ಕಾರ್ಯಕ್ರಮ


ಚಂದ್ರು ಕುಮಾರ್ ತನ್ನ ಟೊಯೊಟಾ ಯಾರಿಸ್ ಕಾರು ಕಳ್ಳತನವಾಗಿದೆ ಎಂದು ತುಂಗಾ ನಗರ ಠಾಣೆಯಲ್ಲಿ ದೂರು ನೀಡಿದ್ದ. ಸೂಳೆಬೈಲು ಸಮೀಪದ ಕುಂಚಿಟಿಗರ ಬೀದಿಯಲ್ಲಿರುವ ಹಳೆ ಮನೆ ಬಳಿ ರಾತ್ರಿ ನಿಲ್ಲಿಸಿದ್ದ ಕಾರು ಬೆಳಗ್ಗೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದ. ಈ ಸಂಬಂಧ 2022ರ ಮೇ 14 ರಂದು ಪ್ರಕರಣ ದಾಖಲಾಗಿತ್ತು.

ಲೋನ್ ಹಣ ಕಟ್ಟದೆ ಫೈನಾನ್ಸ್ ಸಂಸ್ಥೆಗೆ ವಂಚಿಸಲು ಮತ್ತು ಇನ್ಷುರೆನ್ಸ್ ಹಣಕ್ಕಾಗಿ, ಚಂದ್ರು ಕುಮಾರ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಎಂಬಾತನೊಂದಿಗೆ ಸಂಚು ರೂಪಿಸಿ ಕಳ್ಳತನದ ನಾಟಕ ಮಾಡಿದ್ದ. ಯಾರಿಸ್ ಕಾರನ್ನು ಪ್ರಶಾಂತ್ ಗೆ ಕೊಟ್ಟು ದಾವಣಗೆರೆಗೆ ಕಳುಹಿಸಿದ್ದ. ಕಾರು ಹೋಗುವಾಗ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಬಾರದೆಂದುಎಂದು ನಂಬರ್​ ಪ್ಲೇಟ್​ ಬದಲಾಯಿಸಿದ್ದರು

ತುಂಗಾ ನಗರ ಇನ್​ಸ್ಪೆಕ್ಟರ್​ ಮಂಜುನಾಥ್, ಪಿಎಸ್‌ಐ ದೂದ್ಯನಾಯ್ಕ, ಎ.ಎಸ್.ಐ ಮನೋಹರ್, ಸಿಬ್ಬಂದಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಹರೀಶ್, ಅರಿಹಂತ ಶಿರಹಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ | Attack on police | ಬುದ್ಧಿವಾದ ಹೇಳಿದ ಪೊಲೀಸ್‌ಗೆ ಠಾಣೆಯಲ್ಲೇ ಚಾಕುವಿನಿಂದ ದಾಳಿ ಮಾಡಿದ ದುಷ್ಕರ್ಮಿ

Exit mobile version