ಬೆಂಗಳೂರು: ಇವರು ಖದೀಮ ಕಳ್ಳರಾಗಿದ್ದು (Car Thieves), ಬೇರೆ ಬೇರೆ ರಾಜ್ಯಗಳಲ್ಲಿ ಕಾರುಗಳನ್ನು ಅನಾಯಾಸವಾಗಿ ಕದಿಯುತ್ತಿದ್ದರು. ಬಳಿಕ ಆ ಕಾರನ್ನು ರಾಜಧಾನಿ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು. ಈಗ ಈ ಜಾಲವನ್ನು ಅಶೋಕನಗರ ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಐಷಾರಾಮಿ ಕಾರುಗಳನ್ನು ಟಾರ್ಗೆಟ್ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರು, ನಂಬರ್ ಪ್ಲೇಟ್ ಬದಲಾಯಿಸಿ ಬಳಿಕ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕಾರುಗಳನ್ನು ಮಾರಾಟ ಮಾಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಶೋಕನಗರ ಪೊಲೀಸರು ಅಯಾಝ್ ಪಾಷಾ ಅಲಿಯಾಸ್ ಮೌಲ, ಮತಿನ್ ವುದ್ದೀನ್ ಅಲಿಯಾಸ್ ಮತೀನ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ೧.೨೦ ಕೋಟಿ ರೂ. ಮೌಲ್ಯದ 9 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ದೆಹಲಿ, ಪಂಜಾಬ್, ಹಿಮಾಚಲ, ಉ.ಪ್ರಗಳಲ್ಲಿ ಕಳ್ಳತನ
ಆರೋಪಿಗಳು ದೆಹಲಿ, ಪಂಜಾಬ್, ಹಿಮಾಚಲಪ್ರದೇಶ, ಉತ್ತರ ಪ್ರದೇಶದಿಂದ ಕಾರುಗಳನ್ನು ಕದ್ದು ತಂದು ರಾಜಧಾನಿಯಲ್ಲಿ ಮಾರಾಟ ಮಾಡುತ್ತಿದ್ದರು. 5 ಹುಂಡೈ ಕ್ರೀಟಾ, 2 ಟೊಯೋಟಾ ಇನೋವಾ ,1 ಮಾರುತಿ ಬಲೆನೋ, 1 ಫೋಕ್ಸ್ ವ್ಯಾಗನ್ ಕಾರು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | ರೈಲು ನಿಲ್ದಾಣದಲ್ಲಿ ಕಳ್ಳತನವಾಗಿದ್ದ ಮಗು ಬಿಜೆಪಿ ನಾಯಕಿ ಮನೆಯಲ್ಲಿ ಪತ್ತೆ!