Site icon Vistara News

Mangalore News: ಮಂಗಳೂರು ನೈತಿಕ ಪೊಲೀಸ್‌ಗಿರಿ ಪ್ರಕರಣ; ಐವರ ವಿರುದ್ಧ ಕೇಸ್ ದಾಖಲು

Ullal police station in Mangalore

ಮಂಗಳೂರು: ಈಗಾಗಲೇ ರಾಜ್ಯ ಸರ್ಕಾರದ ಕಣ್ಣು ಹಿಂದು ಸಂಘಟನೆಗಳ ಮೇಲೆ ಬಿದ್ದಿದೆ. ಈ ನಡುವೆ ನಗರ ಹೊರವಲಯದ ಸೋಮೇಶ್ವರ ಬೀಚ್‌ನಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ‌ ಪ್ರಕರಣದಲ್ಲಿ (Mangalore News) ಅಪ್ರಾಪ್ತ ಸೇರಿ ಐವರನ್ನು ಉಳ್ಳಾಲ ಪೊಲೀಸರು ಬಂಧಿಸಿ, ಅವರ ವಿರುದ್ಧ 307 ಕೇಸ್‌ ದಾಖಲಿಸಿದ್ದಾರೆ.

ಸೋಮೇಶ್ವರ ಬೀಚ್‌ನಲ್ಲಿ ಕೇರಳದ ಕಾಸರಗೋಡಿನ ಮೂವರು ಹಿಂದು ವಿದ್ಯಾರ್ಥಿನಿಯರ ಜತೆ ಕಣ್ಣೂರಿನ ಅನ್ಯಕೋಮಿನ ಮೂವರು ವಿದ್ಯಾರ್ಥಿಗಳ ತಿರುಗುತ್ತಿದ್ದಾಗ ಅವರ ಮೇಲೆ ಗುರುವಾರ ರಾತ್ರಿ ತಂಡವೊಂದು ಹಲ್ಲೆ ನಡೆಸಿತ್ತು. ಗಾಯಾಳುಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಕುಲ್ದೀಪ್ ಜೈನ್ ತಕ್ಷಣ ಕಾರ್ಯ ಪ್ರವೃತ್ತರಾಗಿದ್ದಾರೆ. ಮೂರು ತಂಡ ರಚಿಸಿ ಗುರುವಾರ ಮಧ್ಯಾಹ್ನ ಐವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಗಲಭೆ ಸೃಷ್ಟಿಸಲು ಸಂಚು ಸೇರಿದಂತೆ ಕೊಲೆ ಯತ್ನದ ಜಾಮೀನು ರಹಿತ ಕೇಸ್ ದಾಖಲಿಸಲಾಗಿದೆ.

ಇದನ್ನೂ ಓದಿ | ‘ಮರ್ಯಾದೆ’ ಕಾರಣಕ್ಕೆ ಚಿಕ್ಕಪ್ಪನಿಂದಲೇ ಹತ್ಯೆಗೀಡಾದ ಆಟೋ ಚಾಲಕ; ಬಸಿದ ರಕ್ತ ಹಂತಕನ ದಾರಿ ತೋರಿಸಿತು!

ಪೊಲೀಸ್ ಆಯುಕ್ತ ಕುಲ್ದೀಪ್ ಜೈನ್ ಖುದ್ದು ಉಳ್ಳಾಲ ಪೊಲೀಸ್ ಠಾಣೆಗೆ ಆಗಮಿಸಿ ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಹಿಂದು ಅಮಾಯಕ ಯುವಕರನ್ನು ಬಂಧಿಸಲಾಗಿದೆ ಎಂದು ಠಾನೆ ಬಳಿ ಬಿಜೆಪಿ ಹಾಗೂ ಹಿಂದು ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ನೈಜ ಆರೋಪಿಗಳನ್ನಷ್ಟೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆರೋಪ ಸಾಬೀತಾದರೆ ಮಾತ್ರ ಕೇಸ್ ದಾಖಲಿಸುವುದಾಗಿ ಹೇಳಿ ಕಳುಹಿಸಿದ್ದಾರೆ.

ಪವಿತ್ರ ಕ್ಷೇತ್ರದಲ್ಲಿ ಅಶ್ಲೀಲವಾಗಿ ವರ್ತಿಸಿದಾಗ ಸ್ಥಳೀಯ ಯುವಕರು ಪ್ರಶ್ನೆ ಮಾಡಿದ್ದಾರೆ. ಇದು ತಪ್ಪಾದರೂ ದೇವರ ಕ್ಷೇತ್ರದ ಬಳಿ ಅಶ್ಲೀಲ ವರ್ತನೆ ಕಂಡು ಆಕ್ರೋಶ ಸಹಜ ಅಂತ ಘಟನೆಯನ್ನು ಉಳ್ಳಾಲ ಠಾಣೆಗೆ ಆಗಮಿಸಿದ ಬಿಜೆಪಿ ನಾಯಕ ಸತೀಶ್ ಕುಂಪಲ ಹಾಗೂ ವಿಎಚ್‌ಪಿ, ಬಜರಂಗದಳ ಪ್ರಮುಖರು ಸಮರ್ಥಿಸಿಕೊಂಡಿದ್ದಾರೆ.

Exit mobile version