Site icon Vistara News

Caste Census: ಜಾತಿ ಗಣತಿ ವರದಿ; ಬಾಹ್ಮಣ ಪಟ್ಟಿಗೆ 44 ಉಪ ಜಾತಿ ಸೇರ್ಪಡೆಗೆ ಮನವಿ

HS Sachidananda Murthy

ಬೆಂಗಳೂರು: 2015ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ನೇತೃತ್ವದ ಸಮಿತಿಯು ಜಾತಿ ಗಣತಿ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಇದನ್ನು ಸಿಎಂ ಸಿದ್ದರಾಮಯ್ಯ ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದಾರೆ. ಆದರೆ, ಜಾತಿ ಗಣತಿ (Caste Census) ವೇಳೆ ಬ್ರಾಹ್ಮಣರು ತಮ್ಮ ಉಪಜಾತಿಗಳನ್ನು ನಮೂದಿಸಿದ್ದಾರೆ. ಹೀಗಾಗಿ 44 ಉಪಜಾತಿಗಳನ್ನು ಕೋಡ್‌ ಸಂಖ್ಯೆ 200 (ಬಾಹ್ಮಣ) ಅಡಿ ಸೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಕಟ ಪೂರ್ವ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದಮೂರ್ತಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು,ಕಾಂತರಾಜು ನೇತೃತ್ವದ ಸಮಿತಿಯು ಜಾತಿ ಗಣತಿ ಮಾಡಿಸಿ ಅದರಲ್ಲಿ ಪ್ರತಿ ಒಂದು ಜಾತಿಗೂ ಪ್ರತ್ಯೇಕ ಕೋಡ್ ನಂಬರ್ ನೀಡಿತ್ತು. ಅದರಂತೆ ಬ್ರಾಹ್ಮಣ ಸಮುದಾಯಕ್ಕೆ 200 ಕೋಡ್ ಸಂಖ್ಯೆ ನೀಡಿತ್ತು. ಆದರೆ, ಜಾತಿ ಗಣತಿ ಮಾಡುವಾಗ ಬ್ರಾಹ್ಮಣರು ತಮ್ಮ ಉಪಜಾತಿಗಳನ್ನು ಬರೆಸಿದ್ದರು. ಆದರೆ ಇವರೆಲ್ಲರೂ ಬ್ರಾಹ್ಮಣ ಸಮುದಾಯಡಿಯೇ ಬರುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Congress Guarantee: ಫ್ರೀ ಕರೆಂಟ್‌ ನನಗೂ ಸಿಗುತ್ತಾ? ಅರ್ಜಿ ಸಲ್ಲಿಕೆ ಹೇಗೆ? ಬಾಡಿಗೆದಾರರಿಗೂ ಇದೆಯೆ?: ನಿಮ್ಮ 26 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಉದಾಹರಣೆಗೆ ಸ್ಮಾರ್ತ ಬ್ರಾಹ್ಮಣ, ಶ್ರೀ ವೈಷ್ಣವ ಬ್ರಾಹ್ಮಣ, ಮಾಧ್ವ ಬ್ರಾಹ್ಮಣ, ಹವ್ಯಕ ಬ್ರಾಹ್ಮಣ ಮತ್ತು ಕೂಟ ಬ್ರಾಹ್ಮಣ ಸೇರಿ 44 ಉಪಜಾತಿಗಳನ್ನು ನಮೂದಿಸಿ ಬರೆಸಿರುತ್ತಾರೆ. ಆದರೆ, ಆಯೋಗವು ಈ 44 ಉಪಜಾತಿಗಳಿಗೆ ಪ್ರತ್ಯೇಕ ಕೋಡ್ ಸಂಖ್ಯೆ ನೀಡಿದ್ದು, ಈಗಾಗಲೇ ಹಲವಾರು ಬಾರಿ ಈ 44 ಉಪಜಾತಿಗಳನ್ನು ಕೋಡ್ ಸಂಖ್ಯೆ 200 (ಬ್ರಾಹ್ಮಣ)ರ ಅಡಿಯಲ್ಲಿ ಸೇರಿಸಬೇಕೆಂದು ಹಿಂದಿನ ಸರ್ಕಾರ ಹಾಗೂ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಆದರೆ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.

ಜೂನ್‌ 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2015ರ ಕಾಂತರಾಜ ಸಮಿತಿಯ ಸಾಮಾಜಿಕ, ಶೈಕ್ಷಣಿಕ (ಜಾತಿ ಗಣತಿ) ವರದಿಯನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದ್ದಾರೆ. ಆದರೆ, ಬ್ರಾಹ್ಮಣ ಸಮುದಾಯದದ 44 ಉಪಜಾತಿಗಳನ್ನು ಕೋಡ್ ಸಂಖ್ಯೆ 200ರ (ಬ್ರಾಹ್ಮಣ) ಅಡಿಯಲ್ಲಿ ಸೇರಿಸಬೇಕು ಎಂದು ಕೋರಿದ್ದಾರೆ.

Exit mobile version