Site icon Vistara News

Caste clash: ಶಿರೂರಲ್ಲಿ ಜಾತಿ ವೈಷಮ್ಯಕ್ಕೆ ವ್ಯಕ್ತಿ ಬಲಿ; ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಕೊಪ್ಪಳ: ಇಲ್ಲಿನ ಕುಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು (caste clash) ಮೃತಪಟ್ಟಿದ್ದಾನೆ. ಮಾರುತಿ ಮೃತ ದುರ್ದೈವಿ. ಯುವಕರ ನಡುವೆ ನಡೆದ ವಾಗ್ವಾದವು ಒಬ್ಬನ ಸಾವಿನಿಂದ ಅಂತ್ಯವಾಗಿದೆ.

ನೇಣಿಗೆ ಶರಣಾದ ಮಾರುತಿ

ಈ ಹಿಂದೆ ಗಣೇಶ ಹಬ್ಬದ ವೇಳೆ ಗ್ರಾಮದ ಯುವಕ ಹನುಮೇಶ ಪೂಜಾರ ಜತೆ ವಾಗ್ವಾದವಾಗಿ, ಜಾತಿ ವೈಷಮ್ಯಕ್ಕೆ ದಾರಿಯಾಗಿತ್ತು. ಬಡಿದಾಟ, ಬೆದರಿಕೆ ಮಾತುಗಳು, ಪರಸ್ಪರ ಜಾತಿ ನಿಂದನೆಯೊಂದಿಗೆ ವಿಚಾರ ತಾರಕಕ್ಕೇರಿತ್ತು. ಈ ವೇಳೆ ಹಿರಿಯರು ರಾಜಿ ಮಾಡಿಸಲು ಸಹ ಕೋರಿದ್ದರು. ಹೀಗೆ ಕಳೆದ ಶನಿವಾರ ರಾಜಿ ಪಂಚಾಯ್ತಿ ವೇಳೆ ಮಾತಿನ ಚಕಮಕಿ ಉಂಟಾಗಿದ್ದು, ಇದರಿಂದ ಹೆದರಿದ ಮಾರುತಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ: Bar Fight: ಬಾರ್‌ನಲ್ಲಿ ಕಸ್ಟಮರ್‌ ನಿಂತಿದ್ದ ಜಾಗದ ವಿಚಾರಕ್ಕೆ ಕಿರಿಕ್‌; ಮನಸೋ ಇಚ್ಛೆ ಥಳಿಸಿದ ಸಿಬ್ಬಂದಿ

ಘಟನೆಯ ನಂತರ ಸ್ಥಳಕ್ಕೆ ಕೊಪ್ಪಳ ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾರುತಿ ಆತ್ಮಹತ್ಯೆಯ ಬಳಿಕ ಹನುಮೇಶ ಪರಾರಿಯಾಗಿದ್ದಾನೆ. ಹನುಮೇಶನ ಹುಡುಕಾಟಕ್ಕೆ ಪೊಲೀಸರು ತಂಡವನ್ನು ರಚನೆ ಮಾಡಿದ್ದು, ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಪೊಲೀಸರು ನಿಗಾ ವಹಿಸಿದ್ದಾರೆ.

Exit mobile version