ಬೆಂಗಳೂರು: ರಾಜಧಾನಿಯನ್ನು ನಡುಗಿಸಿರುವ ಮಹಾಮಳೆ ಕೇವಲ ರಸ್ತೆ, ಕಟ್ಟಡಗಳನ್ನು ಮುಳುಗಿಸಿದ್ದಲ್ಲ. ಕಾವೇರಿ ನೀರು ಸರಬರಾಜು ಮಾಡುವ ಯಂತ್ರಾಗಾರಗಳೂ ನೀರಿನಲ್ಲಿ ಮುಳುಗಿವೆ. ಹೀಗಾಗಿ ನಗರದ ಹಲವು ಕಡೆಗಳಲ್ಲಿ ಇನ್ನು ಎರಡು ದಿನ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿಲ್ಲ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಅಧಿಕಾರಿಗಳು ತಿಳಿಸಿದ್ದಾರೆ.
ಕಾವೇರಿ 3ನೇ ಹಂತ ಹಾಗೂ 4ನೇ ಹಂತದ ನೀರು ಸರಬರಾಜು ಯಂತ್ರಗಳು ನೀರಿನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ಬಿಬಿಎಂಪಿಯ 8 ವ್ಯಾಪ್ತಿಯಲ್ಲಿ ಕಾವೇರಿ ನೀರಿನ ಸಮಸ್ಯೆ ಎದುರಾಗಹುದೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಪ್ರತಿದಿನ ಟಿ.ಕೆ ಹಳ್ಳಿ ಕಾವೇರಿ ಜಲಾನಯನದಿಂದ ಬೆಂಗಳೂರಿಗೆ 1,450 ಎಂಎಲ್‌ಡಿ (MLD) ನೀರು ಸರಬರಾಜು ಆಗುತ್ತಿತ್ತು. ಆದರೆ ಭಾನುವಾರ ರಾತ್ರಿಯಿಂದ 600 ಎಂಎಲ್‌ಡಿ (MLD) ಮಾತ್ರ ನೀರು ಪೂರೈಕೆಯಾಗಿದೆ. ಉಳಿದಂತೆ 850 ಎಂಎಲ್‌ಡಿ (MLD) ನೀರು ಸರಬರಾಜು ಸ್ಥಗಿತಗೊಂಡಿದೆ. ಇದರಿಂದಾಗಿ ನಗರಕ್ಕೆ 850 MLD ನೀರು ಕೊರತೆ ಕಾಡಲಿದೆ. ಮತ್ತೆ ಇದೇ ರೀತಿ ಮಳೆಯಾದರೆ ನಗರಕ್ಕೆ ನೀರಿನ ಅಭಾವ ಮುಂದುವರೆಯುವ ಸಾಧ್ಯತೆ ಇದೆ.
ಮಿತ ಬಳಕೆಯೇ ಮೂಲ ಮಂತ್ರವಾಗಲಿ
ಅಧಿಕೃತ ಸೂಚನೆ ಬರುವವರೆಗೆ ಮಿತವಾಗಿ ನೀರು ಬಳಕೆ ಮಾಡುವಂತೆ ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಇಂಜಿನಿಯರ್ಸ್ ಮನವಿ ಮಾಡಿದ್ದಾರೆ. ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ, ಇಂಜಿನಿಯರ್ ಇನ್ ಚೀಫ್, ಚೀಫ್ ಇಂಜಿನಿಯರ್‌ಗಳು ಮಂಡ್ಯಕ್ಕೆ ದೌಡಯಿಸಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿರುವುದಾಗಿ ವಿಸ್ತಾರ ನ್ಯೂಸ್‌ಗೆ ಚೀಫ್ ಇಂಜಿನಿಯರ್ ಮಾಹಿತಿ ನೀಡಿದ್ದಾರೆ. ಮಂಗಳವಾರ ಹಾಗೂ ಬುಧವಾರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು ಜನರು ಕುಡಿಯುವ ನೀರಲ್ಲಿ ಮಿತ ಬಳಕೆ ಮಂತ್ರವನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಯಾವ ಏರಿಯಾದಲ್ಲಿ ನೀರಿಲ್ಲ?
ಯಶವಂತಪುರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಓಕಳೀಪುರ, ಶ್ರೀರಾಂಪುರ, ಮತ್ತಿಕೆರೆ, ಸದಾಶಿವನಗರ, ಪ್ಯಾಲೆಸ್ ಗುಟ್ಟಹಳ್ಳಿ, ಆರ್.ಟಿ.ನಗರ, ಸಂಜಯನಗರ, ನ್ಯೂ ಬಿಇಎಲ್ ರಸ್ತೆ, ಹೆಬ್ಬಾಳ, ಗಂಗಾನಗರ ಸೇರಿದಂತೆ ಚಿಕ್ಕಪೇಟೆ, ಧರ್ಮರಾಯ ಸ್ವಾಮಿ ದೇವಸ್ಥಾನ, ಅವಿನ್ಯೂ ರಸ್ತೆ, ಮೆಜೆಸ್ಟಿಕ್, ಗಾಂಧಿ ನಗರ, ಕಸ್ತೂರಿಬಾ ರಸ್ತೆ, ಶಿವಾಜಿ ನಗರ, ದೇವರ ಜೀವನಹಳ್ಳಿ, ಕೋಟೆಪಾರ್ಕ್, ಕಾಡುಗೋಡನಹಳ್ಳ, ಪಿಳ್ಳೆಣ್ಣ ಗಾರ್ಡನ್ -1, 2 &3, ಅಂಗರಾಜಪುರಂ, ಟ್ಯಾನರಿ ರಸ್ತೆ, ಭಾರತಿನಗರ, ವಸಂತನಗರ ಮತ್ತು ಸುತ್ತಮುತ್ತಲನ ಪ್ರದೇಶಗಳಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.
ಜತೆಗೆ ಜಗಜೀವನ್ ಭೀಮಾನಗರ, ಐಟಿಐ ಕಾಲೊನಿ, ಇಂದಿರಾನಗರ 1ನೇ ಹಂತ, ಲಕ್ಷ್ಮೀಪುರ, ಕಲ್ಲಹಳ್ಳಿ, ಹೆಚ್.ಎ.ಎಲ್, ಜೀವನ್ ಭೀಮಾನಗರ, ಇಂದಿರಾನಗರ, ಹಲಸೂರು, ಮರ್ಫಿ ಟೌನ್(Marphy Town) ಚಾಮರಾಜಪೇಟೆ, ಹನುಮಂತ ನಗರ, ಶ್ರೀನಗರ, ರಾಘವೇಂದ್ರ ಬ್ಲಾಕ್, ಕಾಳಿದಾಸ ಲೇಔಟ್, ಬ್ಯಾಟರಾಯನಮಠ, ಗವಿಪುರಂ, ಬಸಪ್ಪ ಲೇಔಟ್, ಯಲಹಂಕ, ಬ್ಯಾಟರಾಯನಪುರ, ಐಇಎಲ್ ಲೇಔಟ್, ಹೆಚ್.ಎಂ.ಲೇಔಟ್, ದಾಸರಹಳ್ಳಿ, ಶೆಟ್ಟಹಳ್ಳಿ, ಮಲ್ಲಸಂದ್ರ, ಬಗಲಗುಂಟೆ ಸುತ್ತಮುತ್ತಲೂ ನೀರು ಕೊರತೆ ಎದುರಾಗಲಿದೆ.
ದಾಸರಹಳ್ಳಿ, ರಾಜ್ ಗೋಪಾಲನಗರ, ಚೊಕ್ಕಸಂದ್ರ, ಹೆಗ್ಗನಹಳ್ಳಿ, ಹೆಚ್.ಎಂ.ಟಿ ವಾರ್ಡ್, ನಂದಿನಿ ಲೇಔಟ್, ಆರ್.ಆರ್.ನಗರ, ಕೆಂಗೇರಿ, ಉಲ್ಲಾಳ, ಅನ್ನಪೂರ್ಣಿಶ್ವರಿ ನಗರ, ಪಾಪರೆಡ್ಡಿಪಾಳ್ಯ, ಮಲ್ಲತ್ತಹಳ್ಳಿ, ಕೆಂಗುಂಟೆ, ಜಗಜ್ಯೋತಿ ಲೇಔಟ್, ಜ್ಞಾನಭಾರತಿ ಲೇಔಟ್, ಐಡಿಯಲ್ ಹೋಮ್ಸ್, ಐಇಎಂಎಲ್ ಲೇಔಟ್, ಪಟ್ಟಣಗೆರೆ, ಚನ್ನಸಂದ್ರ, ಹೊತ್ತನೂರು ದಿಣ್ಣೆ, ಜೆ.ಪಿ.ನಗರ 5,7,8ನೇ ಹಂತ, ವಿಜಯಬ್ಯಾಂಕ್ ಲೇಔಟ್, ಕೂಡ್ಲು, ಅಂಜನಾಮರ, ಬೊಮ್ಮನಹಳ್ಳಿ, ಕೆ.ಆರ್.ಪುರಂ, ರಾಮಮೂರ್ತಿನಗರ, ಮಹದೇವಪುರ, ಎ.ನಾರಾಯಣಪುರ, ನಾಗರಬಾವಿ, ಹೆಚ್.ಎಸ್.ಆರ್.ಲೇಔಟ್, ಕೆ.ಪಿ.ನಗರ, ದೊಮ್ಮಲೂರು, ಬನ್ನೇರುಘಟ್ಟ ರಸ್ತೆ, ಜಂಬೂಸವಾರಿ ದಿಣ್ಣೆ, , ಲಗ್ಗೆರೆ, ಶ್ರೀಗಂಧದ ಕಾವಲ್, ಶ್ರೀನಿವಾಸ ನಗರ, ಬಾಹುಬಲ ನಗರ, ಪಾಲಹಳ್ಳಿ, ಏರೋ ಇಂಜನ್, ಓ.ಎಂ.ಟಿ.ಆರ್, ಬೊಮ್ಮನಹಳ್ಳಿ, ಅರಕೆರೆ, ಐ.ಹೆಚ್.ಇ.ಎಲ್, ಲೇಔಟ್ ಸುಂಕದಕಟ್ಟೆ, ಬ್ಯಾಡರಹಳ್ಳಿ, ಸರ್.ಎಂ.ವಿ.ಲೇಔಟ್, ಕೊಟ್ಟಿಗೆಪಾಳ್ಯ, ಎಲ್.ಐ.ಸಿ.ಲೇಔಟ್, ನಾಗದೇವನಹಳ್ಳಿ, ಮೈಸೂರು ರಸ್ತೆ, ಚಿಕ್ಕಗೊಲ್ಲರಹಟ್ಟಿ, ಸುಬ್ಬಣ್ಣ ಗಾರ್ಡನ್ ನಾಯಂಡನಹಳ್ಳಿ, ಕಾಮಾಕ್ಷಿಪಾಳ್ಯ ಭಾಗದಲ್ಲಿಯೂ ನೀರಿನ ವ್ಯತ್ಯಯ ಉಂಟಾಗಲಿದೆ.
ರಂಗನಾಥಪುರ, ಕೆ.ಹೆಚ್.ಬಿ.ಕಾಲೊನಿ, ಮೂಡಲಪಾಳ್ಯ, ಆದರ್ಶ ನಗರ, ಬಿಡಿಎ ಲೇಔಟ್, ಮುನೇಶ್ವರನಗರ, ಕೊಡಿಗೆಹಳ್ಳಿ, ಅಮೃತಹಳ್ಳಿ, ಜೆ.ಪಿ.ಪಾರ್ಕ್, ಸುಧಾಮನಗರ, ಮುರುಗೇಶ್, ಪಾಳ್ಯ, ಹೆಚ್.ಆರ್.ಬಿ.ಆರ್.ಲೇಔಟ್, ನಾಗವಾರ, ಬಿ.ಜಿ.ಎಸ್.ಲೇಔಟ್, ಎಸ್.ಜಿ.ಎಂ.ಕಾಲೋನಿ, ಹುಳಿ ಮಾವು, ಪಂಡೆಪಾಳ್ಯ, ಸರಸ್ವತಿ ಪುರಂ, ರಾಘವೇಂದ್ರ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ರಾಮಯ್ಯ ಲೇಔಟ್, ಪ್ರಗತಿ ಲೇಔಟ್, ಸಿಲ್ಕ್ ಬೋರ್ಡ್ ಕಾಲೋನಿ, ಮಂಗಮ್ಮನಪಾಳ್ಯ, ಸಿಂಗಸಂದ್ರ, ದೇವರಚಿಕ್ಕನಹಳ್ಳಿ, ಲಕ್ಷ್ಮಿನಾರಾಯಣಪುರ, ಸೋಮಸುಂದರ ಪಾಳ್ಯ, ದೊಡ್ಡನೆಕುಂದಿ, ಗರುಡಾಚಾರ್ ಪಾಳ್ಯ, ಸಪ್ತಗಿರಿ ಲೇಔಟ್, ಇಸ್ರೋ ಲೇಔಟ್, ಬೃಂದಾವನ ನಗರ, ತಿಗಳರಪಾಳ್ಯ, ಅಕ್ಷಯನಗರ, ಮಂಜುನಾಥ್ ನಗರ, ರಾಮಾಂಜನೇಯ ಲೇಔಟ್, ಮಾರೇನಹಳ್ಳಿ ಹಾಗೂ ಸುತ್ತಮುತ್ತಲನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಿದೆ.
ಇದನ್ನೂ ಓದಿ | Rain news| ಕಂಡು ಕೇಳರಿಯದ ಮಳೆಗೆ ನಲುಗಿದ ಚಿಕ್ಕಮಗಳೂರು, ನದಿಯಂತಾದ ರಸ್ತೆಗಳು, ಹೆದ್ದಾರಿಗಳು ಬಂದ್