Site icon Vistara News

Ramesh Jarakiholi : ಸಿಡಿ ಷಡ್ಯಂತ್ರ ಕಥೆ ಸೇರಿಸಿ ರಕ್ತ ಕಣ್ಣೀರು ಪಾರ್ಟ್-3 ಮಾಡ್ತೇವೆ ಎಂದ ಲಖನ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ

#image_title

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಷಡ್ಯಂತ್ರ ನಡೆದಿದೆ. ಇದರಲ್ಲಿ ಯಾರ ಕೈವಾಡ ಇದೆ ಎಂಬುವುದರ ಬಗ್ಗೆ ಸಿನಿಮಾ ಮಾಡುತ್ತೇವೆ. ರಕ್ತ ಕಣ್ಣೀರು ಪಾರ್ಟ್-3 ಸಿನಿಮಾ ಮಾಡಲು ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಎಂಎಲ್‌ಸಿ ಲಖನ್‌ ಜಾರಕಿಹೊಳಿ ಹೇಳಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಗೋಕಕ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ರಮೇಶ್‌ ಜಾರಕಿಹೊಳಿ ಅವರ ವಿರುದ್ಧ ಮಾಡಿರುವ ಸಿಡಿ ಷಡ್ಯಂತ್ರದಲ್ಲಿ ಮಹಾನಾಯಕ (ಡಿ.ಕೆ.ಶಿವಕುಮಾರ್), ವಿಷ ಕನ್ಯೆ (ಲಕ್ಷ್ಮೀ ಹೆಬ್ಬಾಳ್ಕರ್‌) ಸೇರಿ ಅನೇಕ ನಾಯಕರು ಇದ್ದಾರೆ. ಮಹಾನಾಯಕ ಸರ್ಕ್ಯೂಟ್‌ ಹೌಸ್‌ನಿಂದ ಎಲ್ಲಿ ಹೋಗಿ ಪ್ಯಾಂಟ್ ಬಿಚ್ಚುತ್ತಾನೆ. ಎಲ್ಲಿ ಲುಂಗಿ ಬಿಚ್ಚುತ್ತಾನೆ ಎಲ್ಲಾ ಗೊತ್ತಿದೆ ಎಂದು ಹೇಳಿದರು.

ವಿಷ ಕನ್ಯೆ, ಮಟಾಷ್ ಲೆಗ್, ರಕ್ತ ಕಣ್ಣೀರು ಎಂದು ಜನ ಮಾತನಾಡುತ್ತಾರೆ. ಮಟಾಷ್ ಲೆಗ್ ಎಂದರೆ ಕುಮಾರಸ್ವಾಮಿ ಸರ್ಕಾರ ಹೋಯ್ತು, ಸಮ್ಮಿಶ್ರ ಸರ್ಕಾರ ಆಯಿತು. ಆಮೇಲೆ ಇದ್ದಿದ್ದು ರಕ್ತ ಕಣ್ಣೀರು. ಇದಕ್ಕೆಲ್ಲಾ ಕಾರಣ ಆ ಹೆಣ್ಣುಮಗಳು ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಿಡಿ ಕಾರಿದರು.

ಇದನ್ನೂ ಓದಿ | Lakhan Jarkiholi : ಕರ್ನಾಟಕ ಪ್ರದೇಶ ಸಿಡಿ ಕಮಿಟಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್:‌ ಲಖನ್ ‌ಜಾರಕಿಹೊಳಿ

ಸಿಡಿ ಷಡ್ಯಂತ್ರದ ಬಗ್ಗೆ ರಕ್ತ ಕಣ್ಣೀರು ಪಾರ್ಟ್-3 ಮಾಡುತ್ತೇವೆ. ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಸಿನಿಮಾ ಮಾಡಿಸಲು ಪ್ಲ್ಯಾನ್ ಮಾಡುತ್ತಿದ್ದೇವೆ. ಇದಕ್ಕಾಗಿ ಉಪೇಂದ್ರ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿರುವೆ. ಆದರೆ, ನಾಲ್ಕು ವರ್ಷದಿಂದ ಉಪೇಂದ್ರ ಕಬ್ಜಾ ಚಿತ್ರದಲ್ಲಿ ಬಿಜಿ ಇದ್ದರು. ಆ ಚಿತ್ರ ಬಿಡುಗಡೆ ಆದ ಮೇಲೆ ಉಪೇಂದ್ರ ಅವರನ್ನು ಭೇಟಿ ಮಾಡುತ್ತೇವೆ. ಅರ್ಧ ಸ್ಕ್ರಿಪ್ಟ್ ನಾನು ಹೇಳುತ್ತೀನಿ, ಉಳಿದದ್ದು ಉಪೇಂದ್ರ ಅವರೇ ರೆಡಿ ಮಾಡುತ್ತಾರೆ ಎಂದು ಹೇಳಿದರು.

ಸಿನಿಮಾಗೆ ಯಾರು ಸರ್ ವಿಲನ್ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಅವನೇ ಮಂಗಳವಾರ ಪ್ರೆಸ್‌ಮೀಟ್ ಮಾಡಿದವನು, ಎರಡು ಕೋಟಿ ಕೊಟ್ಟರೆ ಅವನು ಆ್ಯಕ್ಟಿಂಗ್ ಮಾಡುತ್ತಾನೆ ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್‌ ಸಹೋದರ ಹಾಗೂ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಕುರಿತು ವ್ಯಂಗ್ಯವಾಡಿದರು.

Exit mobile version