Site icon Vistara News

PFI Ban | ಪಿಎಫ್ಐ ನಿಷೇಧಿಸಲು ಕೇಂದ್ರ ಸರ್ಕಾರ ಸಿದ್ಧತೆ?

PFI conspired to establish Islamic Report Given By NIA and ED

ನವ ದೆಹಲಿ: ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಮೇಲೆ ನಿಷೇಧ (PFI Ban)ಸನ್ನಿಹಿತವಾಗುತ್ತಿದೆ. ಕಾನೂನುಬಾಹಿರ ಚಟುಟವಟಿಕೆಗಳ ತಡೆ ಕಾಯಿದೆ(ಯುಎಪಿಎ)ಯ ಅನುಸಾರ ಈಗಾಗಲೇ ಭಾರತವು 42 ಸಂಘಟನೆಗಳನ್ನು ನಿಷೇಧ ಮಾಡಿದೆ. ಆ ಪಟ್ಟಿಗೆ ಈ ಪಿಎಫ್ಐ ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಸೆ.22ರಂದು ದೇಶಾದ್ಯಂತ ಪಿಎಫ್ಐ ಕಚೇರಿಗಳ ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು. ಅದೇ ರೀತಿ, ಸೆ.27ರಂದು ದೇಶದ್ಯಾಂತ ತನಿಖಾ ಸಂಸ್ಥೆಗಳು ಪಿಎಫ್ಐ ನಾಯಕರ ಮನೆ ಮೇಲೆ ದಾಳಿ ನಡೆಸಿ, ಹಲವರನ್ನು ಬಂಧಿಸಿವೆ. ಜತೆಗೆ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿವೆ.

ಸಂಘಟನೆಯೊಂದು ಭಯೋತ್ಪಾದನೆಯ ಕೃತ್ಯಗಳನ್ನು ಎಸಗಿದರೆ ಅಥವಾ ಭಾಗವಹಿಸಿದರೆ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡರೆ ಅಂಥ ಸಂಘಟನೆಯನ್ನು ನಿಷೇಧ ಮಾಡಬಹುದು. ಯಾವುದೇ ಸಂಘಟನೆ ಭಯೋತ್ಪಾದನೆಗೆ ಸಿದ್ಧವಾಗುವುದು; ಭಯೋತ್ಪಾದನೆಯನ್ನು ಉತ್ತೇಜಿಸುವುದು ಅಥವಾ ಪ್ರೋತ್ಸಾಹಿಸುವುದು ಅಥವಾ ಭಯೋತ್ಪಾದನೆಯಲ್ಲಿ ತೊಡಗಿಸಿಕೊಳ್ಳುವುದು ಕೂಡ ನಿಷೇಧಕ್ಕೆ ಕಾರಣವಾಗತ್ತದೆ .

ಈಗ ದೊರೆತಿರುವ ಸಾಕ್ಷ್ಯಾಧಾರಗಳ ಮೇಲೆ ಬೇಹುಗಾರಿಕೆ ಮತ್ತು ತನಿಖಾ ಸಂಸ್ಥೆಗಳು ಈವರೆಗೆ 106 ಪಿಎಫ್ಐ ಶಂಕಿತರನ್ನು ವಿಚಾರಣೆಗೊಳಪಡಿಸಿದೆ. ಈ ಪೈಕಿ ಒಎಂಎ ಸಲಾಮ್ ಪ್ರಮುಖರು. ಈ ಎಲ್ಲ ಹಿನ್ನೆಲೆಯಲ್ಲಿ ಸಾಮಾಜೋ-ಧಾರ್ಮಿಕ ಸಂಸ್ಥೆ ಎನಿಸಿಕೊಂಡಿರುವ ಪಿಎಫ್ಐ ಅನ್ನು ಯುಎಪಿಎ ಕಾನೂನಿನಡಿ ನಿಷೇಧ ಮಾಡಬೇಕೆಂದು ತನಿಖಾ ಸಂಸ್ಥೆಗಳು ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಗಳಿವೆ.

ಪಿಎಫ್ಐ ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂಬುದಕ್ಕೆ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರು ಪರೀಕ್ಷಿಸುತ್ತಿದ್ದಾರೆ. ಎನ್ಐಎ ಪ್ರಕಾರ, ಜಾಗತಿಕ ಜಿಹಾದಿಗಳ ಸಂಘಟನೆಗಳಾಗಿರುವ ಅಲ್ ಕೈದಾ, ಪಾಕಿಸ್ತಾನ ಮೂಲದ ಜೈಷೆ ಮೊಹಮ್ಮದ್ ಮತ್ತು ಲಷ್ಕರೆ ತಯ್ಬಾಗಳಿಗೆ ನೇಮಕಾತಿಗಳನ್ನು ಈ ಪಿಎಫ್ಐ ನಡೆಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ | PFI Targets | ಬಿಜೆಪಿ-ಆರೆಸ್ಸೆಸ್ ನಾಯಕರು, ಸರ್ಕಾರಿ ಸಂಸ್ಥೆಗಳ ವಿರುದ್ಧ ಪ್ರತೀಕಾರದ ದಾಳಿಗೆ ಪಿಎಫ್ಐ ಸ್ಕೆಚ್ಚು!

ಇದನ್ನೂ ಓದಿ | NIA Raid | ಪಿಎಫ್​ಐ ನಿಷೇಧ ಪ್ರಕ್ರಿಯೆಯ ಮೊದಲ ಹೆಜ್ಜೆಯೇ ಇಂದಿನ ಎನ್​ಐಎ ದಾಳಿ?

Exit mobile version