ವಿಜಯಪುರ, ಕರ್ನಾಟಕ: 12ನೇ ಶತಮಾನದ ಬಸವಣ್ಣನವರ ಪುಣ್ಯಭೂಮಿಗೆ ಬಂದು ನನ್ನ ಜನ್ಮ ಪಾವನವಾಗಿದೆ. ಜಗಜ್ಯೋತಿ ಬಸವೇಶ್ವರರು ಜನಿಸಿದ ಈ ಪುಣ್ಯಭೂಮಿಗೆ ಕೋಟಿ ಕೋಟಿ ನಮನ ಮಾಡುತ್ತೇನೆ. ಜಗಜ್ಯೋತಿ ಬಸವೇಶ್ವರರು ಆಗಲೇ ಲೋಕತಂತ್ರ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಕೈಲಾಸದ ದಾರಿ ತೋರಿಸಿಕೊಟ್ಟವರು ಅಣ್ಣ ಬಸವಣ್ಣನವರು. ಕಾಯಕಯೋಗಿಗಳಿಗೆ ಮಾತ್ರ ಕೈಲಾಸದ ಪ್ರಾಪ್ತಿ ಯಾಗುತ್ತದೆ. ಬಸವಣ್ಣನವರ ಆಶಯದಂತೆ ಕರ್ನಾಟಕ ಮತ್ತು ಕೇಂದ್ರದ ಡಬಲ್ ಇಂಜಿನ್ ಸರಕಾರಗಳು ಮಾಡುತ್ತಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (UP CM Yogi adityanath)ಅವರು ಹೇಳಿದರು(Karnataka Election 2023).
ಬಸವನ ಬಾಗೇವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಕೆ ಬೆಳ್ಳುಬ್ಬಿ ಪರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಪ್ರಚಾರ ಮಾಡಿದರು.
ಕರ್ನಾಟಕ ಮತ್ತು ಉತ್ತರ ಪ್ರದೇಶದ ಸಂಬಂಧ ಶತಶತಮಾನಗಳಿಂದಲೂ ಇದೆ. ಅಯೋಧ್ಯೆಯ ಶ್ರೀರಾಮನ ಪರಮಭಕ್ತ ಕರ್ನಾಟಕದ ಕಿಷ್ಕಿಂದೆಯಿಂದ ಬಂದವನು. ಅವರ ಹನುಮಾನ ಚಾಲೀಸಾವನ್ನ ಇಡೀ ವಿಶ್ವವೇ ಪಠಿಸುತ್ತದೆ. ಕರ್ನಾಟಕ ಹಾಗೂ ಕೇಂದ್ರ ಸರಕಾರದ ಡಬಲ್ ಇಂಜಿನ್ ಸರಕಾರದ ಪರವಾಗಿ ಮತಯಾಚಿಸಲು ನಾನಿಲ್ಲಿ ಬಂದಿದ್ದೇನೆ ಎಂದು ಹೇಳಿದರು.
ಎಸ್ ಕೆ ಬೆಳ್ಳುಬ್ಬಿಯನ್ನು ಗೆಲ್ಲಿಸಲು ಯುಪಿ ಸಿಎಂ ಮನವಿ
ಬಸವನ ಬಾಗೇವಾಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಕೆ ಬೆಳ್ಳುಬ್ಬಿಯನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕೆಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ಕೋರಿದರು. ಈಗಾಗಲೇ 1947ರಲ್ಲಿ ಭಾರತವನ್ನ ಧರ್ಮಾಧಾರಿತವಾಗಿ ವಿಭಜಿಸಲಾಗಿದೆ. ಈಗಲೂ ಭಾರತದಲ್ಲಿ ಕೆಲ ದುಷ್ಟ ಶಕ್ತಿಗಳು ಕೆಲಸ ಮಾಡುತ್ತಿವೆ. ಅಂತಹ ದುಷ್ಟ ಶಕ್ತಿಗಳನ್ನು ಮೆಟ್ಟಿನಿಲ್ಲುವ ಶಕ್ತಿ ಭಾರತಕ್ಕಿದೆ. ಇಂದು ಭಾರತ ಜಗತ್ತಿನಲ್ಲಿ ಅತ್ಯಂತ ದೊಡ್ಡ ಅರ್ಥವ್ಯವಸ್ಥೆ ಹೊಂದುವತ್ತ ದಾಪುಗಾಲಿಡುತ್ತಿದೆ. ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಬಲಿಷ್ಠವಾಗಿ ಉನ್ನತಿ ಸಾಗಿಸುತ್ತಿದೆ. ಇದರಲ್ಲಿ ಕರ್ನಾಟಕ ಅದರಲ್ಲೂ ಬೆಂಗಳೂರು ಐಟಿ ಬಿಟಿ ಸೆಕ್ಟರಿನಲ್ಲಿ ಸಾಕಷ್ಟು ಕೊಡುಗೆಯನ್ನ ನೀಡಿದೆ ಎಂದು ಅವರು ಹೇಳಿದರು.
ನಮ್ಮಲ್ಲಿ ಆಗಲೇ ನಳಂದಾ, ತಕ್ಷಶಿಲಾದಂತಹ ಶಿಕ್ಷಣ ಕಲ್ಪಿಸುವ ವ್ಯವಸ್ಥೆ ನಮ್ಮಲ್ಲಿತ್ತು ಎಂದು ಗರುತಿಸಿಕೊಂಡಿದ್ದೇವೆ. ನಾವು ಸಮಾಜದಲ್ಲಿ ಜಾತಿ ಮತ ಬೇಧವೆನ್ನದೇ ಮೋದಿಯವರ ನೇತೃತ್ವದಲ್ಲಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: Yogi Adityanath: ಅಯೋಧ್ಯೆಯಲ್ಲಿ ಕರ್ನಾಟಕ ಅತಿಥಿ ಗೃಹಕ್ಕೆ ಭೂಮಿ ಮಂಜೂರು: ಮಂಡ್ಯದಲ್ಲಿ ಯೋಗಿ ಆದಿತ್ಯನಾಥ ಹೇಳಿಕೆ
Karnataka Election 2023: ಸಬ್ ಕಾ ಸಾಥ್, ಸಬ್ ಕಾ ವಿಕಾಸ್
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ನಿಯಮ ನೀತಿ ಗುರಿಯಿಲ್ಲ. ಪ್ರಧಾನಮಂತ್ರಿ ಮೋದಿಯವರ ಗುರಿ ಸ್ಪಷ್ಟವಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ , ಸಬ್ ಕಾ ಪ್ರಯಾಸ್, ಸಬ್ ಕಾ ವಿಕಾಸ್ ಎಂಬ ಗುರಿ ಇದೆ. ಕಾಂಗ್ರೆಸ್ ಸ್ಪಷ್ಟ ಯೋಜನೆಗಳಿಲ್ಲ. ಎಲ್ಲರ ಜೊತೆ ಮುಂದೆ ಸಾಗುವ ಸರ್ವಾಂಗೀಣ ಅಭಿವೃದ್ಧಿ ಗುರಿಯ ಸರಕಾರ ಮೋದಿ ನೇತೃತ್ವದಲ್ಲಿ ಇದೆ. ಟೀಮ್ ಇಂಡಿಯಾದ ಕ್ಯಾಪ್ಟನ್ ರೂಪದಲ್ಲಿ ಮೋದಿ ಕಾರ್ಯ ನಿರ್ವಹಿಸಿದರೆ, ಟೀಮ್ ಇಂಡಿಯಾದ ಕಾರ್ಯಕರ್ತರಾಗಿ ನಾವೆಲ್ಲಾ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದರು.
ಜಯ ಭಾರತ ಜನನಿಯ ತನುಜಾತೆ ಎಂದು ಕನ್ನಡದಲ್ಲಿ ಭಾಷಣ ಮುಗಿಸಿ ನಿರ್ಗಮಿಸಿದ ಜನತೆಯತ್ತ ಕೈಬೀಸಿ ಭಾಷಣ ಮುಗಿಸಿ ಯೋಗಿ ಆದಿತ್ಯನಾಥ ಅವರು ನಿರ್ಗಮಿಸಿದರು. ಬಳಿಕ ಅವರು ಬಸವನ ಬಾಗೇವಾಡಿ ಪಟ್ಟಣದಿಂದ ಹೆಲಿಕಾಪ್ಟರ್ ಮೂಲಕ ಇಂಡಿಗೆ ತೆರಳಿದರು. ಪಕ್ಷದ ಇಂಡಿ ಬಿಜೆಪಿ ಅಭ್ಯರ್ಥಿ ಕಾಸೂಗೌಡ ಬಿರಾದರ ಪರ ಮತಯಾಚನೆ ಮಾಡಿದರು.