Site icon Vistara News

Shobha Karandlaje: ಶಬರಿಮಲೆಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

shobha karandlaje in shabarimale

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (shobha karandlaje) ಅವರು ನಿನ್ನೆ ಕೇರಳದ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ (shabarimale swamy ayyappa temple) ಭೇಟಿ ನೀಡಿದರು.

ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಸಹಕಾರಿ ಸಚಿವೆ ಶೋಭಾ ಕರಂದ್ಲಾಜೆ, ಕಪ್ಪು ಬಟ್ಟೆ ಧರಿಸಿ, ಇರುಮುಡಿ ಹೊತ್ತು, ಹದಿನೆಂಟು ಮೆಟ್ಟಿಲುಗಳನ್ನು ಏರಿ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.

ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ವರ್ಷದಲ್ಲಿ ಕೆಲವೇ ಬಾರಿ ಮಾತ್ರ ತೆರೆದಿರುತ್ತದೆ. ʼಮಂಡಲ ಪೂಜಾ ಮಹೋತ್ಸವಂʼಗಾಗಿ ನವೆಂಬರ್‌ 16ರಿಂದ 27ರವರೆಗೆ ತೆರೆದಿದ್ದು, ಈ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದಾರೆ.

ಡಿಸೆಂಬರ್‌ 27ರಂದು ಮತ್ತೆ ಮಂಡಲ ಪೂಜೆಗಾಗಿ ದೇವಾಲಯ ಬಾಗಿಲು ತೆರೆಯಲಿದ್ದು, ಜನವರಿ 14ರಂದು ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಮಕರ ಜ್ಯೋತಿಯ ದರ್ಶನ ಆಗಲಿದೆ. ಆ ಬಳಿಕ ದೇಗುಲ ಬಾಗಿಲು ಹಾಕಲಿದ್ದು, ನಂತರ ಮಾಸಿಕ ಪೂಜೆಗಾಗಿ ಫೆಬ್ರವರಿಯಲ್ಲಿ ತೆರೆಯುತ್ತದೆ.

ಮಕರ ಜ್ಯೋತಿಯ ಸಂದರ್ಭದಲ್ಲಿ ಇರುಮುಡಿ ಹೊತ್ತ ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ʼಇರುಮುಡಿ ಕಟ್ಟುವುದುʼ ಎಂಬ ವ್ರತವನ್ನು ಒಂದು ತಿಂಗಳ ಕಾಲ ಭಕ್ತಿಶ್ರದ್ಧೆಗಳಿಂದ ಆಚರಿಸುತ್ತಾರೆ.

ಇದನ್ನೂ ಓದಿ: Sabarimala Temple: ಇಂದಿನಿಂದ ತೆರೆಯಲಿದೆ ಶಬರಿಮಲೆ ದೇಗುಲದ ಬಾಗಿಲು!

Exit mobile version