Site icon Vistara News

Chaitra Kundapura : ಅಬ್ಬಬ್ಬಾ… ಗೋವಿಂದ ಪೂಜಾರಿಯೇ ವಂಚಕ ಎಂದು ಬಿಂಬಿಸಲು ಕ್ರಿಮಿನಲ್‌ ಐಡಿಯಾ; ITಗೆ ದೂರು

Chaitra Govinda poojari IT letter

ಬೆಂಗಳೂರು: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ (Bynduru BJP Ticket) ಕೊಡಿಸುವುದಾಗಿ ಐದು ಕೋಟಿ ರೂಪಾಯಿ ವಸೂಲಿ (Five crore rupees fraud) ಮಾಡಿ ವಂಚಿಸಿ ಬಂಧನಕ್ಕೆ ಒಳಗಾಗಿರುವ ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ (Chaitra Kundapura) ಅದೆಂಥ ಕಿಲಾಡಿ ಎಂದರೆ, ಈ ಪ್ರಕರಣದಲ್ಲಿ ತನ್ನ ಬಂಧನವಾಗುವುದು ಖಚಿತ ಎಂದು ತಿಳಿಯುತ್ತಿದ್ದಂತೆಯೇ ಗೋವಿಂದ ಪೂಜಾರಿಯೇ (Govinda poojari) ಫ್ರಾಡ್‌ ತಾನೊಬ್ಬ ಸಾಚಾ ಎಂದು ಬಿಂಬಿಸಿ ಆದಾಯ ತೆರಿಗೆ ಇಲಾಖೆಗೆ ಆಕೆ ದೊಡ್ಡ ಪತ್ರವೊಂದನ್ನು ಬರೆದಿರುವುದು ಬೆಳಕಿಗೆ ಬಂದಿದೆ. ಈ ಪತ್ರವನ್ನು ಆಕೆ ಆದಾಯ ತೆರಿಗೆ ಇಲಾಖೆಗೆ (Income tax Department) ಪೋಸ್ಟ್‌ ಮಾಡಿದ್ದಾಳೋ ಇಲ್ಲವೋ ಗೊತ್ತಿಲ್ಲ. ಆದರೆ, ಇದರಲ್ಲಿ ತಾನು ಒಬ್ಬ ಪತ್ರಕರ್ತೆಯಾಗಿ (Chaitra in the guise of Journalist) ಈ ಪ್ರಕರಣದ ಇಂಚಿಂಚು ಮಾಹಿತಿಯನ್ನು ಸಂಗ್ರಹ ಮಾಡಿದ್ದಾಗಿ ಹೇಳಿಕೊಂಡಿದ್ದಾಳೆ.

ಗೋವಿಂದ ಪೂಜಾರಿ ಎಂಬ ಉದ್ಯಮಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಅಕ್ರಮ ದಾರಿಗಳಲ್ಲಿ ಪ್ರಯತ್ನ ಮಾಡಿರುವ ಮಾಹಿತಿ ತಿಳಿದ ತಾನು ಅದರ ತನಿಖೆಯನ್ನು ನಡೆಸಿ ಇದಿಷ್ಟು ವಿವರಗಳನ್ನು ಸಂಗ್ರಹಿಸಿ ಕೊಟ್ಟಿರುವುದಾಗಿ ಪತ್ರದಲ್ಲಿ ಬರೆಯಲಾಗಿದೆ. ಹಲವಾರು ಫೇಸ್‌ ಬುಕ್‌ ಲಿಂಕ್‌ಗಳು, ಆಡಿಯೋಗಳು ಮತ್ತು ವಿಡಿಯೊಗಳನ್ನು ಅದರಲ್ಲಿ ಲಗತ್ತಿಸಲಾಗಿದೆ. ಅಂದರೆ ಒಂದು ವೇಳೆ ಈ ಪ್ರಕರಣದಲ್ಲಿ ತಾನು ಸಿಕ್ಕಿಹಾಕಿಕೊಂಡರೂ ತಾನು ವಂಚಕಿಯಲ್ಲ. ಇದನ್ನು ಒಬ್ಬ ಪತ್ರಕರ್ತೆಯಾಗಿ ಭೇದಿಸಲು ಬಂದಿದ್ದು ಎಂದು ತೋರಿಸಿಕೊಳ್ಳುವ ಪ್ರಯತ್ನವನ್ನು ಆಕೆ ಮಾಡಿದಂತೆ ಕಾಣುತ್ತಿದೆ.

ಇದು ಸೆಪ್ಟೆಂಬರ್‌ 8ರಂದು ಗೋವಿಂದ ಪೂಜಾರಿ ಬೆಂಗಳೂರಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಮತ್ತು ಸೆಪ್ಟೆಂಬರ್‌ 12ರಂದು ಚೈತ್ರಾ ಕುಂದಾಪುರ ಉಡುಪಿ ಕೃಷ್ಣ ಮಠದ ಸಮೀಪದ ಬಂಧನಕ್ಕೆ ಒಳಗಾಗುವ ನಡುವಿನ ನಾಲ್ಕು ದಿನದಲ್ಲಿ ನಡೆದ ಕೆಲಸ. ಅಂದರೆ ಚೈತ್ರಾ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಈ ಕೆಲಸ ನಡೆದಿದೆ. ತಾನು ಆದಾಯ ತೆರಿಗೆ ಇಲಾಖೆಗೆ ಈ ಬಗ್ಗೆ ಪತ್ರ ಬರೆದಿದ್ದೇನೆ, ನನ್ನನ್ನು ಈ ಪ್ರಕರಣದಲ್ಲಿ ಎಳೆದುತಂದರೆ ನೀವು ಕೂಡಾ ಸಿಕ್ಕಿಬೀಳುತ್ತೀರಿ. ಹೀಗಾಗಿ ಎಚ್ಚರಿಕೆಯಿಂದ ಇರಿ ಎಂದು ಗೋವಿಂದ ಪೂಜಾರಿ ಅವರನ್ನು ಹೆದರಿಸುವ ತಂತ್ರ ಇದೆಂದು ಹೇಳಲಾಗುತ್ತಿದೆ.

Chaitra letter to IT

ಪತ್ರದಲ್ಲಿರುವ ಪ್ರಮುಖ ಅಂಶಗಳೇನು?

  1. ನಾನೊಬ್ಬಳು ಪತ್ರಕರ್ತೆ, ಗೋವಿಂದ ಪೂಜಾರಿ ಅವರು ವಾಮಮಾರ್ಗದಿಂದ ಟಿಕೆಟ್‌ ಪಡೆಯಲು ಪ್ರಯತ್ನಿಸಿದ್ದರ ವಿಚಾರ ತಿಳಿದು ತನಿಖೆ ನಡೆಸಿ ಈ ಮಾಹಿತಿ ನೀಡುತ್ತಿರುವುದಾಗಿ ಹೇಳಿಕೆ.
  2. ಗೋವಿಂದ ಪೂಜಾರಿಯವರು ಬಿಜೆಪಿ ಟಿಕೆಟ್‌ ಪಡೆಯಲು ಏನೇನು ವಾಮ ಮಾರ್ಗಗಳನ್ನು ಬಳಸಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
  3. ಹಾಲಶ್ರೀಗಳಿಗೆ 1.5 ಕೋಟಿ ರೂ., ವಿಶ್ವನಾಥ್‌ಜಿಗೆ 3 ಕೋಟಿ ರೂ. ಕೊಟ್ಟಿರುವ ಉಲ್ಲೇಖ ಮಾಡಲಾಗಿದೆ.
  4. ಗೋವಿಂದ ಪೂಜಾರಿ ಆಪ್ತರ ಪ್ರಸಾದ್‌ ಪೂಜಾರಿ ಬೈಂದೂರು, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಗಗನ್‌ ಕಡೂರ್‌ ಅವರೆಲ್ಲ ಈ ಪ್ರಕರಣದಲ್ಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
  5. ಪತ್ರದಲ್ಲಿ ಮಂಗಳೂರಿನ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪ ಮಾಡಲಾಗಿದೆ. ಜುಲೈ 29 ರಂದು ಮಧ್ಯಾಹ್ನ 12:43ಕ್ಕೆ ಚೈತ್ರಾಗೆ ಕರೆ ಮಾಡಿದ್ರಂತೆ ರಾಜಶೇಖರಾನಂದ ಸ್ವಾಮೀಜಿ. ಗೋವಿಂದ ಬಾಬು ಪೂಜಾರಿಯವರು ಬಿಜೆಪಿ ಟಿಕೆಟ್ ಗಾಗಿ 5 ಕೋಟಿ ರೂಪಾಯಿ ನೀಡಿರುವ ಕುರಿತು ಚರ್ಚೆ ನಡೆದಿದೆಯಂತೆ.
  6. ಪತ್ರದಲ್ಲಿ ಸಂತೋಷ್ ಕೆಲ್ಲೋಜಿ ಎಂಬುವರ ಹೆಸರು ಕೂಡಾ ಪ್ರಸ್ತಾಪವಾಗುತ್ತದೆ.

ಹಾಗಿದ್ದರೆ ಚೈತ್ರಾ ಐಟಿ ಇಲಾಖೆಗೆ ಬರೆದಿರುವ ಪತ್ರದಲ್ಲಿ ಏನಿದೆ ನೀವೇ ನೋಡಿ..

Chaitra letter to IT

ರಿಗೆ, ಪ್ರಧಾನ ಮುಖ್ಯ ಆಯುಕ್ತರು, ಆದಾಯ ತೆರಿಗೆ ಇಲಾಖೆ, ದಕ್ಷಿಣ ವಲಯ, ಬೆಂಗಳೂರು,

ಮಾನ್ಯರೇ

ವಿಷಯ : ಅನಧೀಕೃತ ಹಣದ ವಹಿವಾಟು ನಡೆದಿರುವ ಕುರಿತು.

ಚೈತ್ರಾ ಎನ್ನುವ ನಾನು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು ಗೋವಿಂದ ಬಾಬು ಪೂಜಾರಿ ಎನ್ನುವ ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಅಕ್ರಮವಾಗಿ ಹಣದ ವ್ಯವಹಾರ ನಡೆಸಿರುವ ಕುರಿತು ನನಗೆ ಖಚಿತ ಮಾಹಿತಿ ದೊರೆತಿರುತ್ತದೆ, ಗೋವಿಂದ ಬಾಬು ಪೂಜಾರಿ ಎನ್ನುವ ವ್ಯಕ್ತಿ ಮೂಲತಃ ಬೈಂದೂರಿನವರಾಗಿದ್ದು ಹಲವು ವರ್ಷಗಳ ಕಾಲ ಮುಂಬೈನಲ್ಲಿ ನೆಲೆಸಿ ವ್ಯವಹಾರಗಳನ್ನು ನಡೆಸಿದ್ದು, ಕೆಲವು ವರ್ಷಗಳಿಂದ ಈಚೆಗೆ ಬೆಂಗಳೂರಿನಲ್ಲಿ ಸ್ವಂತ ಕೇಟರಿಂಗ್ ಉದ್ಯಮ ನಡೆಸಿಕೊಂಡು ಬಂದಿರುತ್ತಾರೆ, ಜೊತೆಗೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಒಂದಷ್ಟು ಸಮಾಜ ಸೇವೆ ನಡೆಸಿಕೊಂಡು ಇಲ್ಲಿನ ಜನರ ನಡುವೆ ಸಮಾಜ ಸೇವಕ ಎಂದು ಗುರುತಿಸಿಕೊಂಡಿರುವುದರಿಂದ ಕಳೆದ ಒಂದು ವರ್ಷದಿಂದ ನನಗೆ ಅವರ ಆಪ್ತ ಸಹಾಯಕ ಪ್ರಸಾದ್ ಪೂಜಾರಿ ಎನ್ನುವ ವ್ಯಕ್ತಿಯ ಮೂಲಕ ಪರಿಚಿತರಾಗಿರುತ್ತಾರೆ. ಹೀಗಿರುವಾಗ ಕಳೆದ 2-3 ವರ್ಷಗಳಿಂದ ಈಚೆಗೆ ಇವರು ಬೈಂದೂರು ಭಾಗದಲ್ಲಿ ಭಾರತೀಯ ಜನತಾ ಪಾರ್ಟಿಯ ಮೂಲಕ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯ ಆಕಾಂಕ್ಷಿಯಾಗಿರುತ್ತಾರೆ ಈ ಕುರಿತು ಅವರು ಮಾಧ್ಯಮಗಳಲ್ಲಿ ಮಾತನಾಡಿರುವ ಲಿಂಕ್ ಅನ್ನು ಇಲ್ಲಿ ನೀಡಲಾಗಿದೆ. (ಲಿಂಕ್ – https://fb.watch/m7cDA672di/?mibextid=NnVzG8 ಫೈಲ್ ಸಂಖ್ಯೆ-001)

ನಾನು ಪತ್ರಕರ್ತೆ, ರಹಸ್ಯ ವರದಿ ಮಾಡುವ ಆಸಕ್ತಿ ನಂಗೆ

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಟಿಕೆಟ್ ಪಡೆಯಲು ಪ್ರಯತ್ನ ಪಟ್ಟರೂ ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಯಾವುದೇ ಜವಾಬ್ದಾರಿಯುತ ಹುದೆಯಲ್ಲಿರದೆ ಇದ್ದರೂ ತಾನು ಬಿಜೆಪಿ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡುತ್ತಿದ್ದ ಇವರ ಕುರಿತು ನನಗೆ ಸಹಜವಾಗಿಯೇ ಅನುಮಾನ ಮತ್ತು ಕುತೂಹಲ ಹುಟ್ಟಿಕೊಳ್ಳುತ್ತದೆ, ವೃತ್ತಿಯಲ್ಲಿ ಪತ್ರಕರ್ತೆಯಾಗಿರುವ ನನಗೆ ಚುನಾವಣೆ ಸಂದರ್ಭದಲ್ಲಿ ನಡೆಯುವ ಹಣದ ವಹಿವಾಟುಗಳ ಕುರಿತು ರಹಸ್ಯ ವರದಿ ಮಾಡುವ ಆಸಕ್ತಿ ಹಿಂದಿನಿಂದಲೂ ಇತ್ತು. (ನಾನು ಈ ಹಿಂದೆ ರಾಜ್ಯ ಮಟ್ಟದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಉಪಸಂಪಾದಕಿಯಾಗಿ ಹಾಗೂ ಹಲವು ಚಾನೆಲ್ ಗಳಲ್ಲಿ ಸುದ್ದಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿರುವ ದಾಖಲೆಗಳನ್ನು ಲಗತ್ತಿಸಿದ್ದೇನೆ).

ಪ್ರಸಾದ್‌ ಬೈಂದೂರ್‌ಗೆ ಕರೆ ಮಾಡಿ ಆಗಾಗ ಮಾಹಿತಿ ಸಂಗ್ರಹಿಸುತ್ತಿದ್ದೆ

ಹಾಗಾಗಿ ಗೋವಿಂದ ಬಾಬು ಪೂಜಾರಿಯವರು ಟಿಕೆಟ್‌ಗಾಗಿ ಹೇಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿ ಸಂಗ್ರಹಿಸಲು ಅವರೊಂದಿಗೆ ಮತ್ತು ಅವರ ಆಪ್ತನಾಗಿದ್ದ ಪ್ರಸಾದ್ ಪೂಜಾರಿಯೊಂದಿಗೆ ಆಗಾಗ ಕರೆ ಮಾಡುತ್ತಾ ಮಾಹಿತಿ ಸಂಗ್ರಹಿಸುತ್ತಿದ್ದೆ. ಒಂದೊಮ್ಮೆ ಗೋವಿಂದ ಪೂಜಾರಿಯವರು ಹಣ ನೀಡಿ ಅಕ್ರಮ ಮಾರ್ಗದಿಂದ ಟಿಕೆಟ್ ಪಡೆಯುವ ಪ್ರಯತ್ನ ಮಾಡಿದಲ್ಲಿ ಅದನ್ನು ಕಾನೂನು ಮೂಲಕ ದೂರು ನೀಡಿ ತಡೆಯುವ ಮತ್ತು ಅದರ ಕುರಿತು ವರದಿ ಮಾಡುವ ಉದ್ದೇಶದಿಂದ ನಾನು ಅವರು ಟಿಕೆಟ್ ಗಾಗಿ ಯಾರೊಂದಿಗೆಲ್ಲ ಸಂಪರ್ಕದಲ್ಲಿದ್ದರೋ ಅವರೆಲ್ಲರೊಂದಿಗೂ ಹಾಗೂ ಅವರ ಆಪ್ತ ಬಳಗದ ಬಹುತೇಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದ್ದೆ. ಆದರೆ ಇವರು ಹಣ ನೀಡುವ ಅಥವಾ ಹಣದ ರೆಕಾರ್ಡ್ ನಲ್ಲಿ ಮೂರು ಕೋಟಿ ಮತ್ತು 50 ಲಕ್ಷ ಕೊಟ್ಟಿರುವ ಕುರಿತು ಅವರ ಮಾತುಗಳಲ್ಲೇ ಉಲ್ಲೇಖಿಸಿದ್ದಾರೆ ಮತ್ತು ಸ್ವಾಮೀಜಿಯವರಿಗೆ ಹಣ ಕೊಟ್ಟಿರುವ ಬಗ್ಗೆಯೂ ಒಪ್ಪಿಕೊಂಡಿದ್ದಾರೆ. (File no-003)

ಪೊಲೀಸ್‌ ಕೇಸ್‌ ದಾಖಲಿಸಲು ಗೋವಿಂದ ಪೂಜಾರಿಗೆ ಸಲಹೆ ಕೊಟ್ಟಿದ್ದೇ ನಾನು

ಇನ್ನು ಇವರು ಈ ವಿಷಯದ ಕುರಿತು ಅವರು ನನ್ನ ಬಳಿ ಮಾತನಾಡಿದಾಗ ನಾನು ಅವರಿಗೆ ಪೊಲೀಸ್ ಕೇಸ್ ದಾಖಲಿಸಲು ಸಲಹೆ ನೀಡಿರುತ್ತೇನೆ, ಆದರೆ ಅವರು ಈ ವರೆಗೂ ಪೊಲೀಸ್ ಕೇಸ್ ದಾಖಲಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇವರ ಈ ನಡೆ ನನಗೆ ಅನುಮಾನಾಸ್ಪದವಾಗಿ ಕಂಡು ಬಂದಿರುತ್ತದೆ,

ಇದರೊಂದಿಗೆ ಅವರ ಆಪ್ತ ಸಹಾಯಕ ಪ್ರಸಾದ್ ಪೂಜಾರಿಯವರು ಕೂಡ 2023, ಮೇ 11 ನೇ ತಾರೀಕು ನನಗೆ ಕರೆ ಮಾಡಿ ಗೋವಿಂದ ಬಾಬು ಪೂಜಾರಿಯವರು ಟಿಕೆಟ್ ಗಾಗಿ ಕೋಟಿಗಟ್ಟಲೆ ಹಣ ನೀಡಿ ಕಳೆದುಕೊಂಡಿರುವ ಕುರಿತು ಮಾತನಾಡಿರುತ್ತಾನೆ. (ಇದಕ್ಕೆ ಸಂಬಂಧಿಸಿದ ಕಾಲ್ ರೆಕಾರ್ಡ್ ಅನ್ನು ಲಗತ್ತಿಸಿದ್ದೇನೆ File no-004)

ಇದು ನಡೆದು ಸುಮಾರು 2 ತಿಂಗಳ ಬಳಿಕ ನನಗೆ ಕೃಷ್ಣ ಪೂಜಾರಿ ಎಂದು ಪರಿಚಯಿಸಿ ಕೊಂಡ ವ್ಯಕ್ತಿಯಿಂದ ಜುಲೈ 21, 2023ರಿಂದ 23ರ ನಡುವೆ ಹಲವರ ಬಳಿ ಚರ್ಚೆ ನಡೆಸಿದ್ದು +918217220747 ಎಂಬ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದ್ದು, ಅವರು ನನ್ನ ಗೋವಿಂದ ಬಾಬು ಪೂಜಾರಿ ಅವರು ಚುನಾವಣೆ ಟಿಕೆಟ್ ಗಾಗಿ 5 ಕೋಟಿ ರೂಪಾಯಿ ಕೊಟ್ಟಿರುವ ಕುರಿತು ನನ್ನನ್ನು ಪ್ರಶ್ನಿಸಿರುತ್ತಾರೆ, ಈ ಕುರಿತು ನಾನು ಅವರ ಬಳಿ ನನ್ನ ಅಭಿಪ್ರಾಯವನ್ನು ಹಂಚಿಕೊಂಡು ಪೊಲೀಸ್ ಕೇಸ್ ದಾಖಲಿಸುವಂತೆ ಸಲಹೆ ನೀಡಿರುತ್ತೇನೆ.

ರಾಜಶೇಖರಾನಂದ ಸ್ವಾಮೀಜಿ ಕೂಡಾ ಫೋನ್‌ ಮಾಡಿ ಮಾಹಿತಿ ಕೇಳಿದ್ದರು

ತದ ನಂತರ ಪುನಃ ಜುಲೈ 29 ರಂದು ಮಧ್ಯಾಹ್ನ 12:43 ಕ್ಕೆ ನನಗೆ ಪರಿಚಿತರಾಗಿರುವ ರಾಜಶೇಖರಾನಂದ ಸ್ವಾಮೀಜಿಯವರ ಫೋನ್ ನಂಬರ್+919986126131ರಿಂದ ಕರೆ ಬಂದಿದ್ದು, ಅದರಲ್ಲಿ ಅವರು ಗೋವಿಂದ ಬಾಬು ಪೂಜಾರಿಯವರು ಬಿಜೆಪಿ ಟಿಕೆಟ್ ಗಾಗಿ 5 ಕೋಟಿ ರೂಪಾಯಿಯನ್ನು ನೀಡಿರುವ ಕುರಿತು ಅವರ ಆಪ್ತರೊಬ್ಬರು ಅವರಿಗೆ ಮಾಹಿತಿ ನೀಡಿರುವ ಬಗ್ಗೆ ನನ್ನ ಬಳಿ ಚರ್ಚಿಸುತ್ತಾರೆ.

ಅದಾದ ಬಳಿಕ ಮತ್ತೆ ಜುಲೈ 30 ರಂದು ನನಗೆ ಪರಿಚಿತರರಾದ ಸಂತೋಷ್ ಕೆಲ್ಲೋಜಿ ಎನ್ನುವವರು ಮಧ್ಯಾಹ್ನ 2:05 ಕ್ಕೆ ಕರೆಯಲ್ಲಿ ನನ್ನೊಂದಿಗೆ ಮಾತನಾಡಿ ಗೋವಿಂದ ಬಾಬು ಪೂಜಾರಿಯವರಿಗೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಹಣ ನೀಡಿರುವ ಸುದ್ದಿಯೊಂದು ವಾಟ್ಸಾಪ್ ಗಳಲ್ಲಿ ಶೇರ್ ಆಗಿರುವ ಕುರಿತು ನನ್ನ ಬಳಿ ವಿಚಾರಿಸಿರುತ್ತಾರೆ, ಈ ಎಲ್ಲಾ ಕರೆಗಳಿಗೆ ಸಂಬಂಧಿಸಿದಂತೆ ಕರೆಗಳನ್ನು ನಾನು ರೆಕಾರ್ಡ್ ಮಾಡಿ ಕೊಂಡಿದ್ದು, ಅದನ್ನು ಇದರೊಂದಿಗೆ ಲಗತ್ತಿಸಿರುತ್ತೇನೆ. (File no 005, 006, 007)

ಹಣ ಕಳೆದುಕೊಂಡಿದ್ದೇನೆ ಎಂದು ಪೂಜಾರಿಯವರೇ ಬರೆದುಕೊಂಡಂತೆ ಪತ್ರ

ಈ ಎಲ್ಲಾ ವಿಚಾರಗಳೂ ನಡೆಯುವಾಗಲೇ ವಾಟ್ಸಾಪ್ ನಲ್ಲಿ ಗೋವಿಂದ ಬಾಬು ಪೂಜಾರಿಯವರಿಗೆ ಸಂಬಂಧಿಸಿದಂತೆ ಪತ್ರವೊಂದು ಹರಿದಾಡಲು ಪ್ರಾರಂಭವಾಗಿದ್ದು (ವಾಟ್ಸಾಪ್ ನಲ್ಲಿ ಬಂದಿರುವ ಸಂದೇಶದ screen shot ಲಗತ್ತಿಸಲಾಗಿದೆ, ಹಾಗೂ WhatsApp ನಲ್ಲಿ ಈ ಪತ್ರದ ಪ್ರತಿಯನ್ನು ಕಳುಹಿಸಿರುವ ವ್ಯಕ್ತಿಯ ಫೋನ್ ಸಂಖ್ಯೆ ವಿಳಾಸ screen recorder ಮೂಲಕ ರೆಕಾರ್ಡ್ ಮಾಡಿ ಲಗತ್ತಿಸಿದ್ದೇನೆ. (Fill no- 009)

ಆ ಪತ್ರದಲ್ಲಿ ಸ್ವತಹಃ ಗೋವಿಂದ ಬಾಬು ಪೂಜಾರಿಯವರೇ ಹೇಳಿಕೊಂಡಿರುವಂತೆ ಬರೆಯಲಾಗಿದ್ದು ಅವರ ವ್ಯವಹಾರಗಳ ಪರಿಚಯವಿದ್ದು ಸ್ವತಃ ಅವರು ಚುನಾವಣೆ ಟಿಕೆಟ್ ಗಾಗಿ 5 ಕೋಟಿ ರೂಗಳನ್ನು ಕಳೆದುಕೊಂಡಿರುವ ಬಗ್ಗೆ ವಿಕೃತವಾಗಿ ವಿವರಿಸಲಾಗಿದೆ. (ಪತ್ರದ ಪ್ರತಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ pdf file name LETTER-PARTY pdf )

ಮೇಲ್ನೋಟಕ್ಕೆ ನೋಡುವಾಗ ಆ ಪತ್ರವನ್ನು ಸ್ವತಹ ಗೋವಿಂದ ಬಾಬು ಪೂಜಾರಿಯವರೇ ಅಥವಾ ಅವರ ಅತ್ಯಂತ ಆಪ್ತ ಬಳಗವೇ ಬರೆದಿರುವಂತೆ ಕಂಡು ಬರುತ್ತದೆ. ಕಾರಣ 4 ಪುಟಗಳ ಈ ಪತ್ರದಲ್ಲಿ ಗೋವಿಂದ ಬಾಬು ಪೂಜಾರಿಯವರ ವೈಯಕ್ತಿಕ ಬದುಕು ಮತ್ತು ವ್ಯವಹಾರಗಳ ಬಗ್ಗೆ ನಿಖರವಾಗಿ ಉಲ್ಲೇಖಿಸಲಾಗಿದೆ ಮತ್ತು ನನಗೆ ಬಂದಿರುವ ಕರೆಗಳ ರೆಕಾರ್ಡ್ ಗಳನ್ನು ಪರಿಶೀಲಿಸಿದರೆ ಅದರಲ್ಲಿ ಮೇಲ್ಕಂಡ ಎಲ್ಲಾ ವ್ಯಕ್ತಿಗಳೂ ಮಾತನಾಡಿರುವ ವಿಷಯ ಮತ್ತು ಈ ಪತ್ರದಲ್ಲಿ ಉಲ್ಲೇಖವಾಗಿರುವ ವಿಷಯಗಳಲ್ಲಿ ಸಾಮ್ಯತೆ ಇರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಹೀಗಿರುವಾಗ ಈ ಪತ್ರ ನಿಜವಾಗಿಯೂ ಗೋವಿಂದ ಬಾಬು ಪೂಜಾರಿಯವರಿಂದಲೇ ಬಂದಿರುವುದು ನಿಜವಾಗಿದ್ದಲ್ಲಿ ಅವರೇ ಹೇಳಿಕೊಂಡಿರುವಂತೆ ಅವರಿಗೆ 5 ಕೋಟಿ ರೂ ವಂಚನೆಯಾಗಿದ್ದಲ್ಲಿ ಇದುವರೆಗೂ ಅವರು ಪೊಲೀಸ್ ಕೇಸು ದಾಖಲಿಸದೆ ಇರಲು ಕಾರಣವೇನು?? ಅವರು ನಡೆಸಿದ್ದೇನೆ ಎಂದು ಹೇಳಿಕೊಂಡಿರುವಂತೆ ಅದೃಷ್ಟವಶಾತ್ ಇವರಿಗೆ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿಯಿಂದ ಇವರು ನಿರೀಕ್ಷೆ ಮಾಡಿದಂತೆ ಶಾಸಕ ಸ್ಥಾನಕ್ಕೆ ಟಿಕೆಟ್ ಸಿಗುವುದಿಲ್ಲ, ಸಾಮಾನ್ಯವಾಗಿ ಚುನಾವಣೆ ಘೋಷಣೆಯಾದ ಬಳಿಕ ಯಾವುದೇ ಪಕ್ಷಗಳು ಯಾರಿಗೂ ಹುದ್ದೆ ಜವಾಬ್ದಾರಿ ನೀಡುವುದು ಬಹಳ ಕಡಿಮೆ, ಆದರೆ ಆಶ್ಚರ್ಯ ಎನ್ನುವಂತೆ ದಿಢೀರ್ ಆಗಿ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಗೋವಿಂದ ಬಾಬು ಪೂಜಾರಿಯವರಿಗೆ ಜವಾಬ್ದಾರಿ ದೊರೆಯುತ್ತದೆ. (ಇದಕ್ಕೆ ಸಂಬಂಧಿಸಿದಂತೆ ಅವರ ಅಧಿಕೃತ ಪೇಜ್ ನಲ್ಲಿ ಅವರ ಜವಾಬ್ದಾರಿಯನ್ನು ಘೋಷಣೆ ಮಾಡಿರುವ ಪ್ರತಿಯ ಲಿಂಕ್ https://m.facebook.com/story.php?story_fbid=pfbid02Vp YbVvV3YokkV9hsuBQ3PqRcPc3ZA1LK YetCXyMtDkpPjYAKNFTh9jwdDL2UMdaWI&id=1000630621006306210064×2006)

ಮತ್ತು ಈ ಜವಾಬ್ದಾರಿ ದೊರೆತ ಬಳಿಕ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನ ಸ್ಥಳೀಯ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆಯವರ ಪರವಾಗಿ ಇವರು ಪ್ರಚಾರವನ್ನೂ ನಡೆಸಿರುತ್ತಾರೆ.

ಹಾಗೂ ಚುನಾವಣಾ ಪ್ರಚಾರಕ್ಕೆ ಬೈಂದೂರಿಗೆ ಆಗಮಿಸಿದ್ದ ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ನಡುವೆ ಇವರು ಗುರುತಿಸಿಕೊಳ್ಳಲು ಪ್ರಾರಂಭಿಸುತ್ತಾರೆ. (ಈ ಕುರಿತ ಫೋಟೋ ಸಾಕ್ಷಿ ಲಾಗತ್ತಿಸಲಾಗಿದೆ, ಹಾಗೂ ಈ ಫೋಟೋ ಗಳನ್ನು ಗೋವಿಂದ ಬಾಬು ಪೂಜಾರಿಯವರ ಅಧಿಕೃತ ಫೇಸ್ ಬುಕ್ ಖಾತೆಗಳಿಂದ ತೆಗೆದುಕೊಳ್ಳಲಾಗಿದೆ, ಅದಕ್ಕೆ ಸಂಬಂಧಿಸಿದ ಲಿಂಕ್ ಗಳನ್ನು ಕೂಡ ನೀಡಿದ್ದೇವೆ.

ಲಿಂಕ್‌ಗಳು ಇವು -https://m.facebook.com/story.php?story_fbid=pfbid02rz4rDuhrRTMznaqRUIR67hkjPDdNCIQDwX LUWva1YLSryjTLJ7s1dqcVbWyWDhp71&id=10006384220463861

https://m.facebook.com/story.php?story_fbid=pfbid0G7pks6Y9PwsgWLQbxTNXis2QPQ2qvX2w eUcAfkXUasyDTBumuYfunxDotZVUsduel&id=100063842mibe4x3862

https://m.facebook.com/story.php?story_fbid=pfbid0G7pks6 Y9PwsgWLQbxTNXis2QPQ2qvX2w

eUcAfkXUasyDTBumuYfunxDotZVUsduel&id=100063861244042&mibextid=ZbWKWL)

ಇದನ್ನೆಲ್ಲಾ ಗಮನಿಸಿದಾಗ ಈ ಪ್ರಕರಣದಲ್ಲಿ ಬಹುದೊಡ್ಡ ಪ್ರಭಾವಿಗಳು ಶಾಮೀಲಾಗಿರಬಹುದು ಎನ್ನುವ ಅನುಮಾನ ನನಗೆ ಬಲವಾಗ ತೊಡಗಿತು. ಆದರೆ ಇದನ್ನೆಲ್ಲಾ ಸಾಬೀತು ಮಾಡಲು ನನ್ನ ಬಳಿ ಯಾವುದೇ ಸೂಕ್ತ ದಾಖಲೆಗಳು ಇರಲಿಲ್ಲ.

ಆರು ಕೋಟಿ ಕೊಟ್ಟಿದ್ದೇನೆಂದು ನನ್ನ ಬಳಿಯೇ ಹೇಳಿದ್ದಾರೆ ಎಂದಿರುವ ಚೈತ್ರಾ

ಚುನಾವಣೆ ಮುಗಿದ ಬಳಿಕ ಗೋವಿಂದ ಬಾಬು ಪೂಜಾರಿಯವರು ತಾನು ಬಿಜೆಪಿ ಟಿಕೆಟ್ ಗಾಗಿ 6 ಕೋಟಿ ರೂಪಾಯಿ ಹಣವನ್ನು ಅನಧಿಕೃತವಾಗಿ ನೀಡಿರುವ ಕುರಿತು ನನ್ನ ಬಳಿ ಹೇಳಿಕ್ಕೊಂಡಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ದಿನಾಂಕ 11/05/2023 ರಂದು ಅವರ ಅಧಿಕೃತ ಫೋನ್ ಸಂಖ್ಯೆಯಾದ 9833311169 ನಂಬರ್ ನಿಂದ ಕರೆ ಮಾಡಿ ತಾನು ಮಂಜುನಾಥ್ ಎನ್ನುವವರಿಗೆ 1 ಕೋಟಿ ರೂಪಾಯಿಯನ್ನು ಅಭಿನವ ಹಾಲಶ್ರೀ ಸ್ವಾಮೀಜಿ ಅವರಿಗೆ ಒಂದೂವರೆ ಕೋಟಿ ರೂಪಾಯಿಯನ್ನು ಹಾಗೂ ವಿಶ್ವನಾಥ್ ಜೀ ಎನ್ನುವವರಿಗೆ 3 ಕೋಟಿ ರೂಪಾಯಿಯನ್ನೂ ನೀಡಿರುವುದಾಗಿ ನನ್ನೊಂದಿಗೆ ಚರ್ಚೆ ನಡೆಸಿರುತ್ತಾರೆ, ಈ ಕುರಿತು ತಾವು ಹಣ ನೀಡಿರುವುದನ್ನು ಸ್ವತಃ ಗೋವಿಂದ ಬಾಬು ಪೂಜಾರಿಯವರೇ ನನ್ನ ಬಳಿ ಹೇಳಿಕೊಂಡು ಒಪ್ಪಿಕೊಂಡಿರುತ್ತಾರೆ. ಈ ಕುರಿತು ಅವರು ಮಾತನಾಡಿರುವ ಕರೆಯ ರೆಕಾರ್ಡ್ ಗಳನ್ನು ಲಗತ್ತಿಸಿರುತ್ತೇನೆ.

ಹಾಗಿದ್ದರೆ ಗೋವಿಂದ ಪೂಜಾರಿ ಹಣಕಾಸಿನ ಮೂಲ ಯಾವುದು? ತನಿಖೆಯಾಗಲಿ

ಹಣಕಾಸಿನ ಮೂಲ ಯಾವುದು? ಅವರು ಹಣ ವರ್ಗಾವಣೆ ಮಾಡಿರುವ ಬ್ಯಾಂಕ್ ಖಾತೆಗಳ ವಿವರಗಳ ಕುರಿತು ವಿಚಾರಣೆ ನಡೆಯಬೇಕಿದೆ, Prevention Of Money Laundering Act 2002ರ ಪ್ರಕಾರ ಇವರು ನಡೆಸಿರುವ ಹಣಕಾಸಿನ ವ್ಯವಹಾರ ಕಾನೂನು ಬದ್ಧವಾಗಿದೆಯೇ? ಮತ್ತು ಈ ವ್ಯವಹಾರದಲ್ಲಿ ತೊಡಗಿಕೊಂಡಿರುವಂತೆ ಹಣ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿರುವ ಗೋವಿಂದ ಬಾಬು ಪೂಜಾರಿಯವರ ದಾಖಲಿತ ಬ್ಯಾಂಕ್ ವ್ಯವಹಾರಗಳು ಮತ್ತು ಇವರು ಪತ್ರದಲ್ಲಿ ಉಲ್ಲೇಖಿಸಿರುವಂತೆ ಗಗನ್ ಕಡೂರ್ ಹಾಗೂ ಅಭಿನವ ಹಾಲಶ್ರೀ ಸ್ವಾಮೀಜಿಗೆ ಹಣ ನೀಡಿರುವುದು ನಿಜವೇ ಆಗಿದ್ದಲ್ಲಿ ಅವರ ದಾಖಲಿತ ಬ್ಯಾಂಕ್ ವ್ಯವಹಾರ ಗಳು, ಆದಾಯದ ಮೂಲ ಮತ್ತು ಸ್ಥಿರ ಹಾಗೂ ಚರ ಆಸ್ತಿ -ಪಾಸ್ತಿಗಳ ಕುರಿತು ತನಿಖೆ ನಡೆಸಬೇಕು.

ಗೋವಿಂದ ಬಾಬು ಪೂಜಾರಿಯವರು ಕಾನೂನು ಬದ್ಧವಾಗಿ ಹಣಕಾಸು ವ್ಯವಹಾರ ನಡೆಸಿದ್ದಲ್ಲಿ 2022-23 ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಗಡುವು ಜುಲೈ 31 ಕ್ಕೆ ಮುಗಿದಿರುವುದರಿಂದ ಇವರು ಹೇಳಿಕೊಂಡಿರುವ 5 ಕೋಟಿ ರೂ. ಸಾಲವನ್ನು ಈ ITR returnsನಲ್ಲಿ ನಮೂದು ಮಾಡಿದ್ದಾರಾ?? ಒಂದೊಮ್ಮೆ ಇವರು ಕಾನೂನು ಬದ್ಧವಾಗಿ ವ್ಯವಹಾರ ನಡೆಸಿದ್ದು ಈ ವಿಷಯದಲ್ಲಿ ಅವರಿಗೆ ವಂಚನೆ ನಡೆದಿರುವುದು ಸಾಕ್ಷಿ ಸಮೇತ ಸಾಬೀತಾದಲ್ಲಿ ಅವರಿಗೆ ಅವರ ಹಣವನ್ನು ನ್ಯಾಯಬದ್ಧವಾಗಿ ಮರಳಿಸುವಲ್ಲಿ ತಮ್ಮ ಇಲಾಖೆ ಸಹಕರಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಲು ಸಿದ್ಧ ಎಂದಿದ್ದ ಚೈತ್ರಾ

ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ವೈಯಕ್ತಿಕವಾಗಿ ಯಾವುದೇ ತೆರನಾದ ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧಳಿದ್ದೇನೆ ಹಾಗೂ ಇದಕ್ಕೆ ನಾನು ನೀಡಿರುವ ಕಾಲ್ ರೆಕಾರ್ಡ್ ದಾಖಲೆಗಳಿಗೆ ಪೂರಕವಾಗಿ ನನ್ನ ಮೊಬೈಲ್ ಸೇರಿದಂತೆ ಯಾವುದೇ ಯಂತ್ರೋಪಕರಣಗಳನ್ನು ಇಲಾಖೆಗೆ ನೀಡಲು ನಾನು ಸದಾ ಸಿದ್ಧಳಾಗಿದ್ದೇನೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ. ಈ ಪ್ರಕರಣ ಕಾನೂನು ಮೂಲಕ ಬಗೆಹರಿದು ಯಾರೇ ಕಾನೂನನ್ನು ಮೀರಿ ವ್ಯವಹಾರ ನಡೆಸಿದ್ದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಕೋರಿಕೊಳ್ಳುತ್ತೇನೆ.- ಇತೀ ತಮ್ಮ ವಿಶ್ವಾಸಿ

(ಈ ಪತ್ರದೊಂದಿಗೆ ನೀಡಿರುವ ಪೆನ್ ಡ್ರೈವ್ ನಲ್ಲಿ ಮೇಲೆ ತಿಳಿಸಿದ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಸಾಕ್ಷಿ ಆಧಾರಗಳು ಲಭ್ಯವಿರುತ್ತದೆ, ಅದಕ್ಕೆ ಸಂಬಂಧಿಸಿದ ಫೈಲ್ ನಂಬರ್ ಗಳನ್ನು ಕೂಡ ತಿಳಿಸಿರುತ್ತೇನೆ)

Exit mobile version