Site icon Vistara News

Fraud Case: ಪರಪ್ಪನ ಅಗ್ರಹಾರ ಜೈಲಿನಿಂದ ಚೈತ್ರಾ ಬಿಡುಗಡೆ

Chaitra-kundapura-

ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚನೆ ಪ್ರಕರಣದಲ್ಲಿ (Fraud Case) ಜೈಲು ಸೇರಿದ್ದ ಹಿಂದು ಕಾರ್ಯಕರ್ತೆ ಕುಂದಾಪುರದ ಚೈತ್ರಾ ಪರಪ್ಪನ ಅಗ್ರಹಾರ ಜೈಲಿನಿಂದ ಬುಧವಾರ ರಾತ್ರಿ ಬಿಡುಗಡೆಯಾಗಿದ್ದಾರೆ. ಅವರ ಜತೆ ಮತ್ತೊಬ್ಬ ಆರೋಪಿ ಶ್ರೀಕಾಂತ್‌ ಕೂಡ ಬಿಡುಗಡೆಯಾಗಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಸೆಪ್ಟೆಂಬರ್‌ 12ರಂದು ಚೈತ್ರಾ ಅವರನ್ನು ಉಡುಪಿಯಲ್ಲಿ ಬಂಧಿಸಲಾಗಿತ್ತು. ಅದೇ ಸಂದರ್ಭದಲ್ಲಿ ಆಕೆಯ ಸಹಚರ ಗಗನ್‌ ಕಡೂರ್‌, ಪ್ರಜ್ವಲ್‌, ಶ್ರೀಕಾಂತ್‌ ಕೂಡಾ ಸೆರೆಯಾಗಿದ್ದರು. ನಂತರ ಕಡೂರಿನ ರಮೇಶ್‌ ಮತ್ತು ಧನರಾಜ್‌ ಹಾಗೂ ಚೆನ್ನಾ ನಾಯ್ಕ್‌ ಸೆರೆಸಿಕ್ಕಿದ್ದರು. ಅದಾದ ಕೆಲವೇ ದಿನದಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಕಟಕ್‌ನಲ್ಲಿ ಬಂಧಿಸಲಾಗಿತ್ತು.

ಹಾಲಶ್ರೀ ಸ್ವಾಮೀಜಿಗೆ ನವೆಂಬರ್‌ 11ರಂದು ಕೋರ್ಟ್‌ ಜಾಮೀನು ನೀಡಿತ್ತು. ಇದೀಗ ಪ್ರಕರಣದ ಮೊದಲ ಆರೋಪಿ ಚೈತ್ರಾ ಮತ್ತು ಏಳನೇ ಆರೋಪಿ ಶ್ರೀಕಾಂತ್‌ಗೆ 3ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಆಗಿರುವುದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ | Road Accident : ಸಿಎಂ‌ ಬರುವ ದಾರಿಯಲ್ಲಿ ಅಪಘಾತ; ಆಂಬ್ಯುಲೆನ್ಸ್‌ ಬಾರದೆ ವ್ಯಕ್ತಿ ನರಳಾಟ

ಬಂಧನವಾದ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಚೈತ್ರಾ ಟೀಮ್‌ ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿತ್ತು. ಆದರೆ, ಸಿಕ್ಕಿರಲಿಲ್ಲ. ಈ ನಡುವೆ, ಹಾಲಶ್ರೀಗೆ ಜಾಮೀನು ಸಿಕ್ಕಿರುವುದು ಚೈತ್ರಾ ಮತ್ತು ತಂಡಕ್ಕೆ ಅನುಕೂಲವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳ ವಿರುದ್ಧ ಸುಮಾರು 800 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಇದನ್ನೂ ಓದಿ | Priyank Kharge: ಸುಳ್ಳು ಆರೋಪ ಮಾಡಿದ ಬಿಜೆಪಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ: ಪ್ರಿಯಾಂಕ್‌ ಖರ್ಗೆ

ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದ ಕೋರ್ಟ್‌ ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಎರಡು ಲಕ್ಷ ಬಾಂಡ್ ನೀಡುವಂತೆ ಸೂಚಿಸಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಷರತ್ತು ವಿಧಿಸಿತ್ತು. ಆರೋಪಿಗಳಿಂದ ಈಗಾಗಲೇ ಅವರು ವಂಚನೆ ಮಾಡಿದ ಲಕ್ಷಾಂತರ ರೂ. ನಗದು, ಆಸ್ತಿ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಏನಿದು ಚೈತ್ರಾ ವಂಚನೆ ಪ್ರಕರಣ?

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಗೋವಿಂದ ಪೂಜಾರಿ ಅವರು ಸಮಾಜಸೇವಕರೂ ಆಗಿದ್ದು, ಬೈಂದೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹೊತ್ತಿದ್ದರು. ಈ ಸಂಬಂಧ ಟಿಕೆಟ್‌ ಪಡೆಯಲು ಯಾರ ಮೂಲಕ ಪ್ರಯತ್ನಿಸಬಹುದು ಎಂಬ ಚರ್ಚೆ ನಡೆದಾಗ ಯಾರೋ ಭಾಷಣಕಾರ್ತಿ ಚೈತ್ರಾ ಹೆಸರು ಹೇಳಿದ್ದರು. ಆಕೆಯನ್ನು ಭೇಟಿ ಮಾಡಿದಾಗ ಆಕೆ ಖಂಡಿತವಾಗಿಯೂ ಟಿಕೆಟ್‌ ಕೊಡಿಸುವ ಭರವಸೆ ನೀಡಿದ್ದಳು. ಈ ನಡುವೆ, ಚೈತ್ರಾ ಗೋವಿಂದ ಬಾಬು ಪೂಜಾರಿಯವರನ್ನು ಹಾಲಶ್ರೀ ಸ್ವಾಮೀಜಿಗಳ ಬಳಿ ಕರೆದುಕೊಂಡು ಹೋಗಿದ್ದಳು. ಆಗ ಸ್ವಾಮೀಜಿ ಟಿಕೆಟ್‌ ಗಾಗಿ 1.5 ಕೋಟಿ ರೂ ಬೇಡಿಕೆ ಇಟ್ಟಿದ್ದರು. ಅದನ್ನು ಗೋವಿಂದ ಪೂಜಾರಿ ಕೆಲವೇ ಸಮಯದಲ್ಲಿ ಹಸ್ತಾಂತರ ಮಾಡಿದ್ದರು. ಈ ನಡುವೆ, ಎಲ್ಲಾ ದುಡ್ಡು ಸ್ವಾಮೀಜಿ ಪಾಲಾಗುತ್ತದೆ, ಇಷ್ಟು ಕಷ್ಟ ಪಟ್ಟ ತನಗೆ ಏನೂ ಸಿಗುವುದಿಲ್ಲ ಎಂದು ಯೋಚಿಸಿ ಗೋವಿಂದ ಪೂಜಾರಿಯಿಂದ ಹಣ ಕಸಿಯುವ ಪ್ಲ್ಯಾನ್‌ ಮಾಡಿದ್ದಳು. ಅದಕ್ಕೆ ಕಡೂರಿನ ಬಿಜೆಪಿ ನಾಯಕ ಗಗನ್‌ ನನ್ನು ಸೇರಿಸಿಕೊಂಡು ವ್ಯೂಹ ಹೆಣೆದಳು.

ಇದನ್ನೂ ಓದಿ | Crime News: ಖಿನ್ನತೆ, ಕೊಲೆ, ಆತ್ಮಹತ್ಯೆ; ವೈದ್ಯನ ಮನೆಯಲ್ಲಿ ನಡೆದಿದ್ದು ಬೆಚ್ಚಿ ಬೀಳಿಸುವ ಘಟನೆ!

ಆರೆಸ್ಸೆಸ್‌ನ ಹಿರಿಯ ನಾಯಕರು, ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡಿಸುವ ನಾಟಕವಾಡಿ ನಾಟಕದ ವ್ಯಕ್ತಿಗಳನ್ನು ತೋರಿಸಿ ಹಣ ಪಡೆದುಕೊಂಡಳು. ಕೊನೆಗೆ ಟಿಕೆಟ್‌ ಸಿಗದೆ ಹೋದಾಗ ತನಿಖೆಗೆ ಶುರು ಮಾಡಿದ ಗೋವಿಂದ ಪೂಜಾರಿ ಅವರಿಗೆ ಜ್ಞಾನೋದಯವಾಗಿ ದೂರು ನೀಡಿದರು. ಸೆ. 12ರಂದು ಚೈತ್ರಾ ಮತ್ತು ಟೀಮ್‌ ಬಂಧನವಾಗಿ ಜೈಲು ಸೇರಿತ್ತು.

Exit mobile version