ಬೆಂಗಳೂರು: ಹಲಾಲ್ ಅನ್ನು ದೊಡ್ಡ ಮಾರ್ಕೆಟ್ ಆಗಿ ಮುಸ್ಲಿಮರು ಸೃಷ್ಟಿಸುತ್ತಿದ್ದಾರೆ. ಹಲಾಲ್‌ನಿಂದ ಮುಸ್ಲಿಮರು ಬ್ಯಾಂಕ್‌ಗಳ ಸೃಷ್ಟಿ ಮಾಡುತ್ತಿದ್ದು, ಇಸ್ಲಾಂ ರಾಷ್ಟ್ರ ಕಟ್ಟಲು ಹಲಾಲ್ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಹಿಂದೂಗಳು ಬೆಳಕಿನ ಹಬ್ಬ ದೀಪಾವಳಿಯನ್ನು ಹಲಾಲ್ ಬಾಯ್ಕಾಟ್ ಮಾಡುವ ಮೂಲಕ ಆಚರಣೆ ಮಾಡಬೇಕು ಎಂದು ಯುವಾ ಬ್ರಿಗೇಡ್ ಮಾರ್ಗದರ್ಶಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.
ಹಿಂದೂ ಜನ ಜಾಗೃತಿ ವೇದಿಕೆಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ್ ಶಿಂದೆ ರಚನೆಯ ʼಹಲಾಲ್ ಜಿಹಾದ್?ʼ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಲಾಲ್ ಬಗ್ಗೆ ವಿಸ್ತಾರವಾಗಿ ರಮೇಶ್ ಅವರು ಪುಸ್ತಕದಲ್ಲಿ ಮಾಹಿತಿ ನೀಡಿದ್ದಾರೆ.
ಹಲಾಲ್ ಅನ್ನು ಒಂದು ಆರ್ಥಿಕತೆಯಾಗಿ ನೋಡಬೇಕು. ನಮ್ಮ ದೇಶದ ಆರ್ಥಿಕ ತಜ್ಞರು ಈ ಬಗ್ಗೆ ಯಾರು ಯೋಚನೆ ಮಾಡುತ್ತಿಲ್ಲ. ಈ ವಿಷಯ ಬಂದರೆ ಧರ್ಮದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ | ಭಾರತವೂ ಪಾಕಿಸ್ತಾನ ಆಗಬಾರದು ಎಂದರೆ ಈಗಿನ ಪ್ರಭುತ್ವವನ್ನು ಉಳಿಸಬೇಕು: ಡಾ. ಪ್ರೇಮಶೇಖರ್ ಅಭಿಮತ
ಮೊದಲು ನಮ್ಮ ದೇಶದಲ್ಲಿ ದೈಹಿಕವಾಗಿ ದಾಳಿ ನಡೆಸಲಾಯಿತು. ನಂತರ ಮಾನಸಿಕವಾಗಿ ದಾಳಿ ನಡೆಯಿತು. ಈಗ ಒಂದು ಸಮಾಜದ ಹಿಡಿತಕ್ಕೆ ಆರ್ಥಿಕತೆಯನ್ನು ಪಡೆಯಲು ಆರ್ಥಿಕ ಯುದ್ಧ ಮಾಡಲಾಗುತ್ತಿದೆ. ಮುಸ್ಲಿಂ ಹೆಣ್ಣುಮಕ್ಕಳು ಹಲಾಲ್ ಆದರೆ ಮಾತ್ರ ಸೌಂದರ್ಯ ವರ್ಧಕ ಬಳಸಬಹುದು. ಹಲಾಲ್ ಇಲ್ಲ ಎಂದರೆ ಸೌಂದರ್ಯ ವರ್ಧಕ ಬಳಸಲ್ಲ. ನಾವು ತಿನ್ನುವ ಯಾವುದನ್ನೂ ತಿನ್ನಬಾರದು ಎಂದು ಹಲಾಲ್ ತೋರಿಸಿಕೊಡುತ್ತದೆ. ಹಲಾಲ್ ಸರ್ಟಿಫೈಡ್ ಆದ ವಸ್ತುಗಳು ಎಲ್ಲವನ್ನೂ ಅಲ್ಲಾಹುಗೆ ಅರ್ಪಣೆ ಮಾಡಿರುತ್ತಾರೆ. ಒಮ್ಮೆ ಅಲ್ಲಾಹುಗೆ ಸಮರ್ಪಿಸಿದ ವಸ್ತುಗಳನ್ನು ರಾಮನಿಗೇನು ಸಮರ್ಪಿಸುತ್ತೀರಿ ಎಂದ ಅವರು, ಮುಸ್ಲಿಮರು ಆರ್ಥಿಕತೆ ಮೂಲಕ ಸಮಾಜವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಿ
ಬೆಳಕಿನ ಹಬ್ಬ ದೀಪಾವಳಿಗೆ ಹಲಾಲ್ ಬಾಯ್ಕಾಟ್ ಮಾಡಿ ಹಬ್ಬ ಆಚರಣೆ ಮಾಡಲು ಎಂದು ಹಿಂದೂ ಸಂಘಟನೆಗಳು ಕರೆ ನೀಡಿವೆ. ಧಾನ್ಯಗಳು, ಹಣ್ಣು ಹಂಪಲುಗಳು, ಸೌಂದರ್ಯ ಪ್ರಸಾಧನಗಳು, ಔಷಧಗಳು ಸೇರಿ ವಿವಿಧ ವಸ್ತುಗಳನ್ನು ಖರೀದಿಸುವುದನ್ನು ಮುಸ್ಲಿಂ ವ್ಯಾಪಾರಿಗಳಿಂದ ಬಹಿಷ್ಕರಿಸಬೇಕು. ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿದೆ ಎಂದು ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಗಳ ಮುಖಂಡರು ಆರೋಪಿಸಿದರು.
ಇದನ್ನೂ ಓದಿ | ಮತಾಂತರವಾದವರಿಗೆ SCST ಮೀಸಲಾತಿ ಬೇಡ: ವಿಶ್ವ ಹಿಂದು ಪರಿಷತ್ ಆಗ್ರಹ