Site icon Vistara News

ದೇಶವಿರೋಧಿ ಕೃತ್ಯಕ್ಕೆ ಸಂಚು ರೂಪಿಸಿದವರ ಬಂಧನ ಸಂತಸ ತಂದಿದೆ ಎಂದ ಚಕ್ರವರ್ತಿ ಸೂಲಿಬೆಲೆ

ಹಲಾಲ್

ರಾಯಚೂರು: ಎರಡು ದಿನಗಳಿಂದ ದೇಶದಲ್ಲಿ ಒಳ್ಳೆಯ ವಾತಾವರಣ ಕಂಡುಬಂದಿದೆ. ದೇಶ ವಿರೋಧಿ ಕೃತ್ಯಗಳಿಗೆ ಸಂಚು ರೂಪಿಸಿದವರ ಮೇಲೆ ಎನ್ಐಎ ಇನ್ನಿತರ ಸಂಸ್ಥೆಗಳ ಅಧಿಕಾರಿಗಳು ಸರಣಿ ದಾಳಿ ನಡೆಸಿ ಮಾಡಿ ಹೆಡೆಮುರಿಕಟ್ಟಿದ್ದಾರೆ. ಈ ನಿಟ್ಟಿನಲ್ಲಿ ವಿದೇಶಗಳಲ್ಲಿ ಭಾರತದ ಗುಪ್ತಚರ ಸಂಸ್ಥೆ ರಾ(ಆರ್‌ಎಡಬ್ಲ್ಯು) ಕೂಡ ಸಮರ್ಥವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಯುವಾ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದಲ್ಲಿ ಶನಿವಾರ ಮಾತನಾಡಿದ ಅವರು, ಪಿಎಫ್‌ಐ, ಎಸ್‌ಡಿಪಿಐ ಕಚೇರಿಗಳ ಮೇಲೆ ರೈಡ್ ಆದಾಗ ಪಿಎಫ್‌ಐ ಮುಖ್ಯಸ್ಥ, 24 ಗಂಟೆ ಸಮಯ ಕೊಡುತ್ತೇನೆ. ಸಂಘಟನೆಯ ಬಂಧಿತರನ್ನು ಬಿಡುಗಡೆ ಮಾಡಲಿಲ್ಲ ಎಂದರೆ ಸಾಂವಿಧಾನಕವಾಗಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಸಂವಿಧಾನಿಕ ಪ್ರತಿಭಟನೆ ಎಂದರೇ, ಸಂವಿಧಾನಿಕವಾಗಿ ಬಸ್‌ಗೆ ಕಲ್ಲು ಹೊಡೆಯುತ್ತೇವೆ, ಬೆಂಕಿ ಹಚ್ಚುತ್ತೇವೆ, ತಲೆ ಕಡಿಯುತ್ತೇವೆ ಎಂಬರ್ಥವೇ ಎಂದು ಪ್ರಶ್ನಿಸಿದರು.

ಪಿಎಫ್‌ಐ ಕಾರ್ಯಕರ್ತರ ಬಂಧನ ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ಮಾಡಲು ನಾವು ಬಿಡುವುದಿಲ್ಲ, ಪಿಎಫ್‌ಐನಿಂದ ನಮ್ಮ ಹೆಸರು ಹಾಳಾಗುತ್ತಿದೆ. ಅವರಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡಲ್ಲ, ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾದರಿಗೆ ಶಿಕ್ಷೆಯಾಗಬೇಕು ಎಂದು ಪಾಸ್ಮಂಡ ಮುಸ್ಲಿಂ ಸಮಾಜ ಹೇಳಿದೆ ಎಂದು ತಿಳಿಸಿದರು.

ಕೆಲವು ಕನ್ನಡ ಹೋರಾಟಗಾರನ್ನು ಹೋರಾಟಗಾರರು ಎಂದರೆ ತಪ್ಪು. ಅವರನ್ನು ಓಲಾಟಗಾರರು ಎಂದೇ ಕರೆಯಬೇಕು. ಇವರು ಎಂತಹ ನೀಚ ಮಟ್ಟಕ್ಕೆ ಹೋಗಿದ್ದಾರೆಂದರೆ, ಸರ್ದಾರ್ ಪಟೇಲರು ಗುಜರಾತಿನವರು, ಅವರ ಬಗ್ಗೆ ನೀವು ಯಾಕೆ ಮಾತನಾಡುತ್ತೀರಾ? ಎಂದು ಕೇಳುತ್ತಾರೆ. ಇಂತಹವರಿಗೆ ಏನು ಹೇಳಬೇಕೋ ಗೊತ್ತಿಲ್ಲ ಎಂದ ಅವರು, ಸರ್ದಾರ್ ಪಟೇಲರು, ವಿವಿಧ ಸಂಸ್ಥಾನಗಳಾಗಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸಿದರು. ಪಟೇಲರು ಹೈದರಾಬಾದ್ ನಿಜಾಮನಿಗೆ ಸರಿಯಾಗಿ ಪಾಠ ಕಲಿಸಿದ್ದು ಗುಜರಾತ್ ಚೆನ್ನಾಗಿರಲಿ ಎಂದಲ್ಲ ಭಾರತ ಚೆನ್ನಾಗಿರಲಿ ಎಂದು ಕಠಿಣ ಕ್ರಮ ಕೈಗೊಂಡರು ಎಂದು ತಿಳಿಸಿದರು.

ಇದನ್ನೂ ಓದಿ | ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ತಂದೆಯ ಅಂತಿಮ ದರ್ಶನ ಪಡೆದ ಶಂಕಿತ ಉಗ್ರ ಮಾಜ್

Exit mobile version