Site icon Vistara News

Challakere Election Results : ಚಳ್ಳಕೆರೆಯಲ್ಲಿ ಕೈ ಬಲಪಡಿಸಿದ ಟಿ. ರಘುಮೂರ್ತಿ ಗೆಲುವು

Challakere assembly election winner T Raghumurthi

Chelakere T Raghumurthi

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭೆ ಕ್ಷೇತ್ರದಲ್ಲಿ (Challakere Election Results) ಕಾಂಗ್ರೆಸ್‌ನ ಟಿ. ರಘುಮೂರ್ತಿ ಅವರು ಗೆಲುವು ದಾಖಲಿಸಿದ್ದಾರೆ.

ಬಿಜೆಪಿಯಿಂದ ಆರ್.‌ ಅನಿಲ್‌ ಕುಮಾರ್‌, ಕಾಂಗ್ರೆಸ್‌ನಿಂದ ಟಿ. ರಘು ಮೂರ್ತಿ ಸ್ಪರ್ಧಿಸಿದ್ದರು. ಜೆಡಿಎಸ್‌ ಪಕ್ಷದಿಂದ ರವೀಶ್‌ ಕುಮಾರ್ ಕಣದಲ್ಲಿದ್ದರು. ಟಿ. ರಘುಮೂರ್ತಿ ಅವರು 62560 ಮತಗಳನ್ನು ಗಳಿಸಿ ಜಯ ಗಳಿಸಿದ್ದಾರೆ. ಜೆಡಿಎಸ್‌ನ ರವೀಶ್‌ ಕುಮಾರ್‌ 45,045 ಮತ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅನಿಲ್‌ ಕುಮಾರ್‌ 21,676 ಮತ ಗಳಿಸಿದ್ದಾರೆ. 1508 ನೋಟಾ ಮತಗಳು ಚಲಾವಣೆಯಾಗಿವೆ.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ನ ಟಿ. ರಘುಮೂರ್ತಿ 72,874 ಮತಗಳೊಂದಿಗೆ ಗೆಲುವು ದಾಖಲಿಸಿದ್ದರು. ಜೆಡಿಎಸ್‌ನ ರವೀಶ್‌ ಕುಮಾರ್‌ 59,339 ಮತ ಗಳಿಸಿದ್ದರು. ಬಿಜೆಪಿಯ ಕೆ.ಟಿ ಕುಮಾರ ಸ್ವಾಮಿ 33,471 ಮತ ಗಳಿಸಿ ಸೋಲು ಅನುಭವಿಸಿದ್ದರು. ಗೆಲುವಿನ ಅಂತರ 13,530 ಮತಗಳಾಗಿತ್ತು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 206,504 ಪುರುಷರು: 104,078 ಮಹಿಳೆಯರು : 102,423

ಇದನ್ನೂ ಓದಿ: http://vistaranews.com/live-news/karnataka-assembly-election-result-2023-vote-counting-live-updates-check-details-in-kannada/321413.html

Exit mobile version