ಬೆಂಗಳೂರು: ರಾಜಧಾನಿಯಲ್ಲಿ ಹಲವು ಪ್ರಖ್ಯಾತ ಹೋಟೆಲ್‌ಗಳಿವೆ. ಅದರಲ್ಲಿ ನಗರದ ಹೃದಯ ಭಾಗದಲ್ಲಿರುವ ಪ್ರಸಿದ್ಧ ಚಾಲುಕ್ಯ ಹೋಟೆಲ್ (Hotel Chalukya) ಕೂಡ ಒಂದು. ವಿವಿಧ ಬಗೆಯ ರುಚಿ ರುಚಿಯಾದ ಖಾದ್ಯಗಳನ್ನು ಉಣಬಡಿಸಿ ಸೈ ಎನಿಸಿಕೊಂಡ, ಸುಮಾರು 45 ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಚಾಲುಕ್ಯ ಹೋಟೆಲ್ ಕೆಲವೇ ದಿನಗಳಲ್ಲಿ ಮುಚ್ಚಲಿದೆ.
ಹೌದು, ಸೆಪ್ಟೆಂಬರ್ 25ಕ್ಕೆ ಚಾಳುಕ್ಯ ಹೋಟೆಲ್ ಮುಚ್ಚಲಿದ್ದು, ಬಳಿಕ ಪ್ರಖ್ಯಾತ ಹೋಟೆಲ್ ವಸತಿ ಸಮುಚ್ಚಯವಾಗಿ ಬದಲಾಗಲಿದೆ. 1977ರಲ್ಲಿ ಆರಂಭವಾದ ಈ ಹೋಟೆಲ್ 45 ವರ್ಷಗಳಷ್ಟು ಹಳೆಯದು. ಬೆಂಗಳೂರು ಮಂದಿಗೆ ಇಡ್ಲಿ-ವಡೆ, ಮಸಾಲೆ ದೋಸೆ, ರೈಸ್ ಬಾತ್, ಖಾರಾ ಬಾತ್, ಬಾದಾಮ್ ಹಲ್ವಾ ಸೇರಿ ಹಲವು ಬಗೆಯ ತಿನಿಸುಗಳನ್ನು ಉಣಬಡಿಸಿದ್ದ ಚಾಲುಕ್ಯ ಹೋಟೆಲ್‌ನಲ್ಲಿರುವ ಸಾಮ್ರಾಟ್ ರೆಸ್ಟೋರೆಂಟ್ ಮುಚ್ಚುತ್ತಿರುವುದರಿಂದ 90 ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಹೋಟೆಲ್ ಮುಚ್ಚುತ್ತಿರುವುದಕ್ಕೆ ರಾಜಧಾನಿ ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Encroachment | ಮಹದೇವಪುರದಲ್ಲಿ ಗರ್ಜಿಸಿದ ಬುಲ್ಡೋಜರ್; ಒತ್ತುವರಿದಾರರಿಗೆ ಬಿಬಿಎಂಪಿ ಮಾಸ್ಟರ್ ಸ್ಟ್ರೋಕ್
ಪ್ರತಿದಿನ ಕನಿಷ್ಠ ಎಂದರೂ 3,000 ಗ್ರಾಹಕರು ಈ ಹೋಟೆಲ್‌ಗೆ ಭೇಟಿ ಕೊಡುತ್ತಾರೆ. ವಾರಾಂತ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಬಂದು ತಮ್ಮಿಷ್ಟದ ಊಟ ಸವಿಯಲು ಕಾಯುತ್ತಿರುತ್ತಾರೆ ಎಂಬುವುದು ಇಲ್ಲಿನ ವಿಶೇಷ. ಹೀಗಾಗಿ ಬಸವೇಶ್ವರ ವೃತ್ತ ಚಾಲುಕ್ಯ ವೃತ್ತವೆಂದೇ ಜನಪ್ರಿಯವಾಗಿದೆ.
ಈಗ ಹೋಟೆಲ್ ಮುಚ್ಚುತ್ತಿರುವುದರಿಂದ ಗ್ರಾಹಕರು ಸಹ ತುಂಬಾ ಬೇಸರದ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕಂದಿನಿಂದಲೂ ಬಂದು ರುಚಿ-ರುಚಿಯಾದ ಊಟ ಸವಿಯುತ್ತಿದ್ದ ಹೋಟೆಲ್ ಮುಚ್ಚುತ್ತಿರುವುದಕ್ಕೆ ಬೇಸರವಾಗುತ್ತಿದೆ. ರವೆ ಇಡ್ಲಿ, ವಡೆ, ಬಾದಾಮ್ ಹಲ್ವಾ, ಮಸಾಲೆ ದೋಸೆ ಇಲ್ಲಿ ಚೆನ್ನಾಗಿರುತ್ತದೆ. ಓಲ್ಡ್ ಬೆಂಗಳೂರು ಸ್ಟೈಲ್ ರೆಸಿಪಿಗಳನ್ನೇ ಇವರು ಕೊಡುತ್ತಾರೆ. ಈ ಹೋಟೆಲ್ ಬೇರೆ ಕಡೆ ಆದರೂ ಹಳೆಯ ಫೀಲ್ ಬರುವುದಿಲ್ಲ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ. ಈ ಹೋಟೆಲ್‌ನ ಖಾದ್ಯಗಳು ಅಚ್ಚುಮೆಚ್ಚಾಗಿದ್ದರೆ, ಕೆಲವೇ ದಿನಗಳು ಬಾಕಿ ಇವೆ, ಕೊನೆಯ ಬಾರಿಗೆ ಹೋಗಿ ಗ್ರಾಹಕರು ರುಚಿ ಸವಿದು ಬರಬಹುದಾಗಿದೆ.
ಇದನ್ನೂ ಓದಿ | ಯಾರೇ ಭೂ ಒತ್ತುವರಿ ಮಾಡಿದ್ದರೂ ತೆರವು ಎಂದ ಸಿಎಂ ಬೊಮ್ಮಾಯಿ; ಐಟಿ ಕಂಪನಿಗಳಿಗೂ ಕಂಟಕ?