ಚಾಮರಾಜನಗರ: ಜೋಳದ ಬೆಳೆಯನ್ನು ಎತ್ತುಗಳು ತಿಂದು ನಾಶ ಮಾಡಿವೆ ಎಂದು ಪಾಪಿಗಳು ಎತ್ತುಗಳ ಕಾಲುಗಳನ್ನೇ ಕತ್ತರಿಸಿದ್ದಾರೆ. ಈ ಕ್ರೂರ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಒಡೆಯರ ಪಾಳ್ಯದ ಟಿಬೆಟಿಯನ್ ಕ್ಯಾಂಪ್‌ನ ದಿ ವಿಲೇಜ್‌ನಲ್ಲಿ (Chamarajanagar News) ನಡೆದಿದೆ.
ದಿ ವಿಲೇಜ್‌ನಲ್ಲಿ ಟಿಬೆಟಿಯನ್ನರು ವ್ಯವಸಾಯ ಮಾಡಿಕೊಂಡು ವಾಸವಿದ್ದಾರೆ. ಜೋಳದ ಫಸಲನ್ನು ನಾಶ ಮಾಡಿವೆ ಎಂಬ ಕಾರಣಕ್ಕೆ ಮೂವರು ಟಿಬೆಟಿಯನ್ನರು ಈ ಕೃತ್ಯವನ್ನು ಎಸಗಿದ್ದಾರೆ. ಗಡಿ ಜಿಲ್ಲೆ ರೈತರ ಮೇಲೆ ದರ್ಪ ಮೆರೆಯುತ್ತಿರುವ ಟಿಬೆಟಿಯನ್ನರು, 15ಕ್ಕೂ ಹೆಚ್ಚು ಎತ್ತುಗಳ ಕಾಲು, ಬಾಲ, ಕೊಂಬುಗಳನ್ನು ಕತ್ತರಿಸಿದ್ದಾರೆ. ಇದರಿಂದಾಗಿ ಎತ್ತುಗಳು ಬದುಕಿದ್ದು ಸತ್ತಂತೆ ಆಗಿವೆ.
ಇತ್ತ ಎತ್ತುಗಳ ಸ್ಥಿತಿ ಕಂಡು ರೈತ ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯರ ಮೇಲೆ ಟಿಬೆಟಿಯನ್‌ರ ದರ್ಪಕ್ಕೆ ಕಿಡಿಕಾರಿದ್ದಾರೆ. ಕೃಷಿಗೆ ಈ ಎತ್ತುಗಳೇ ಆಧಾರವಾಗಿದ್ದವು. ಮನೆ ಮಕ್ಕಳಂತೆ ಜೋಪಾನ ಮಾಡಿದ್ದ ಎತ್ತುಗಳ ಕಾಲುಗಳನ್ನು ಕತ್ತರಿಸಿದ್ದಾರೆ. ನಮ್ಮ ಬದುಕು ಬೀದಿಗೆ ಬಂದಿದೆ.
ಇದನ್ನೂ ಓದಿ: Road Accident : ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು; ಇಬ್ಬರು ಸಾವು, ಮತ್ತಿಬ್ಬರು ಗಂಭೀರ
ಮಗು ಅಳುತ್ತಿದ್ದಕ್ಕೆ ಸಿಟ್ಟಾಗಿ ಗೋಡೆಗೆ ಎಸೆದು ಬಿಸಾಡಿದ ಪಾಪಿ ತಂದೆ!
ಧಾರವಾಡ: ಮಗಳಿಗೆ ಬೆರಗುವ ಮೂಡಿಸುವ ಜಾದೂಗಾರನಾಗಿ ಇರಬೇಕಾದ ಅಪ್ಪನೊಬ್ಬ ಕ್ರೂರಿಯಾದ ಸುದ್ದಿ ಇದು. ಮಗು ಮಲಗುವಾಗ ಅಳುತ್ತೆ ಎಂಬ ಕಾರಣಕ್ಕೆ ಪಾಪಿ ತಂದೆ ಗೋಡೆಗೆ ಎಸೆದು ಬೀಸಾಕಿದ್ದಾನೆ. ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಒಂದು ವರ್ಷದ ಹೆಣ್ಣು ಮಗು ಸಾವು ಬದುಕಿನ ಮಧ್ಯೆ ಹೋರಾಡಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಶಂಬುಲಿಂಗಯ್ಯ ಶಾಪುರಮಠ ಎಂಬಾತ ಪಾಪಿ ತಂದೆಯಾಗಿದ್ದಾನೆ. ಕಳೆದ ರಾತ್ರಿ ಮಗು ಅಳುತ್ತಿತ್ತು. ಅಳುವ ಮಗುವಿಗೆ ಸಮಾಧಾನ ಪಡಿಸುವ ಬದಲಿಗೆ ಮಗುವಿನ ಕಾಲು ಹಿಡಿದು ಗೋಡೆಗೆ ಎಸೆದಿದ್ದಾನೆ.
ಗೋಡೆಗೆ ರಭಸವಾಗಿ ಎಸೆದ ಪರಿಣಾಮ ಮಗುವಿನ ತಲೆಗೆ ಬಲವಾದ ಪೆಟ್ಟಾಗಿದೆ. ಕೂಡಲೇ ಮಗುವಿನ ತಾಯಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿತ್ತು. ಆದರೆ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.
ಸದ್ಯ ಕುಟುಂಬಸ್ಥರಿಂದ ಗರಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾಪಿ ತಂದೆ ಶಂಬುಲಿಂಗಯ್ಯನನ್ನು ಬಂಧಿಸಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯನ್ನ ನಡೆದ ಘಟನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ