Site icon Vistara News

Tomato Price Decline | ಮೂರು ರೂಪಾಯಿಗೂ ಕೇಳೋರಿಲ್ಲ ಟೊಮೇಟೊ, ಬೀದಿಗೆ ಚೆಲ್ಲಿದ ರೈತರು!

tamota rate

ಚಾಮರಾಜನಗರ: ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಟೊಮೇಟೊವನ್ನು ಬೀದಿಗೆ ಚೆಲ್ಲಿದ ಪ್ರಸಂಗ (Tomato Price Decline) ಗುಂಡ್ಲುಪೇಟೆಯಲ್ಲಿ ನಡೆದಿದೆ. ಕೆಜಿ ಟೊಮೇಟೋಗೆ ಮೂರು ರೂಪಾಯಿಗೂ ಕೇಳುವವರಿಲ್ಲದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಎಪಿಎಂಸಿಯಲ್ಲಿ ರೈತರು ರಸ್ತೆಗೆ ಸುರಿದು ಅಸಹಾಯಕತೆ ವ್ಯಕ್ತಪಡಿಸಿದ್ದು, ಪ್ರತಿ ಕೆ.ಜಿ.ಗೆ 3 ರೂಪಾಯಿಗೂ ಟೊಮೆಟೋ ಕೇಳುವವರಿಲ್ಲ ಎನ್ನುವಂತಾಗಿದೆ. ಇದು ವಾಹನ ಬಾಡಿಗೆಗೂ ಸಾಲುವುದಿಲ್ಲ. ಇನ್ನು ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಸೇರಿದಂತೆ ಇತರ ಕಾಮಗಾರಿಗೆ ಪ್ರತಿ ಎಕರೆಗೆ ಸರಿಸುಮಾರು ಲಕ್ಷ ರೂಪಾಯಿವರೆಗೆ ವೆಚ್ಚವಾಗಿದೆ.

ರಸ್ತೆಗೆ ಚೆಲ್ಲಿದ ಟೊಮೇಟೊ

ಆದರೆ, ಮಾರುಕಟ್ಟೆಯಲ್ಲಿ ಟೊಮೇಟೊವನ್ನು ಕೇಳುವವರೇ ಇಲ್ಲ. ಗಡಿ ಜಿಲ್ಲೆ ಚಾಮರಾಜನಗರಕ್ಕೆ ಕೇರಳ ಹಾಗೂ ತಮಿಳುನಾಡು ಕಡೆಯಿಂದ ವ್ಯಾಪಾರಿಗಳು ಬರುತ್ತಿದ್ದರು. ಈ ಬಾರಿ ಅವರೂ ಬರುತ್ತಿಲ್ಲ. ಹೀಗಾಗಿ ಪದಾರ್ಥವನ್ನು ರಸ್ತೆಗೆ ಸುರಿಯಬೇಕಾಗಿದೆ ಎಂದು ರೈತರು ಬೇಸರ ಹಾಗೂ ಆಕ್ರೋಶವನ್ನು ಹೊರಹಾಕಿದ್ದಾರೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ತೋಟಗಾರಿಕೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ರೈತರು ಆಗ್ರಹಿಸಿದರು.

ಇದನ್ನೂ ಓದಿ | Rain News | ಭತ್ತದ ಗದ್ದೆಗಳಿಗೆ ನುಗ್ಗಿದ ನೀರು; ದ.ಕನ್ನಡ ಜಿಲ್ಲೆಯಲ್ಲಿ ರೈತರ ಕಣ್ಣೀರು

Exit mobile version