Site icon Vistara News

Suspicious death : ಮಹಿಳೆ ಶವ ಬಾವಿಯಲ್ಲಿ ಪತ್ತೆ, ವರದಕ್ಷಿಣೆಗಾಗಿ ಕೊಲೆ ಮಾಡಿ ಬಾವಿಗೆ ತಳ್ಳಿದ ಆರೋಪ

Shalini death

#image_title

ಚಾಮರಾಜನಗರ: ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ ಕೆಲವೇ ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿದೆ. ಇದರ ಹಿಂದೆ ಹಲವು ಅನುಮಾನಗಳು (Suspicious death) ವ್ಯಕ್ತವಾಗಿವೆ.

ಮೂಡ್ನಾಕೂಡು ಗ್ರಾಮದ ಮಹೇಶ್ ಎಂಬವರ ಪತ್ನಿ ಶಾಲಿನಿ (22) ಮೃತರು. ಶಾಲಿನಿ ಅವರ ಮೃತದೇಹ ಶನಿವಾರ ಬೆಳಗ್ಗೆ ಮನೆಯ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ.

ಕೆಲವೇ ವರ್ಷದ ಹಿಂದೆ ಮದುವೆಯಾಗಿರುವ ಶಾಲಿನಿಯನ್ನು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿ ಬಾವಿಗೆ ಎಸೆದಿದ್ದಾರೆ ಎಂದು ಮೃತ ಶಾಲಿನಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ತಪ್ಪಿತಸ್ಥರ ಬಂಧನ ಆಗುವವರೆಗೆ ಮೃತದೇಹ ತೆಗೆಯಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಸ್ಥಳಕ್ಕೆ ಚಾಮರಾಜನಗರ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಭೇಟಿ ನೀಡಿದ್ದಾರೆ. ಅವರು ಕುಟುಂಬದವರ ಮನವೊಲಿಸಿದರೂ ಒಪ್ಪುತ್ತಿಲ್ಲ. ಶಾಲಿನಿ ತಂದೆ ಶಾಂತಪ್ಪ ಮತ್ತು ಚಿಕ್ಕಮ್ಮ ಚಿನ್ನಮ್ಮ ಅವರು ಮೊದಲು ತಪ್ಪಿತಸ್ಥರನ್ನು ಬಂಧಿಸಿ ಎಂದು ಮನವಿ ಮಾಡಿದ್ದಾರೆ.

ಕುಡಿತ ಅಮಲಿನಲ್ಲಿ ಸ್ನೇಹಿತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದವನು ಈಗ ಪೊಲೀಸರ ಅತಿಥಿ

ಬೆಂಗಳೂರು: ಕುಡಿತದ ಮತ್ತಿನಲ್ಲಿ ಕಲ್ಲಿನಿಂದ ವ್ಯಕ್ತಿಯ ತಲೆ ಜಜ್ಜಿ ಹತ್ಯೆ ಮಾಡಿ ಪರಾರಿ ಆಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾರಿಮುತ್ತು ಎಂಬಾತ ತನ್ನ ಸ್ನೇಹಿತ ನರೇಶ್‌ನನ್ನು ಟೈಲ್ಸ್‌ ಕಲ್ಲಿನಿಂದ ತಲೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ನರೇಶ್‌ ತೀವ್ರ ರಕ್ತಸ್ರಾವವಾಗಿ ಸ್ಥಳದಲೇ ಮೃತಪಟ್ಟಿದ್ದ.

ಇಲ್ಲಿನ ಗೋವಿಂದರಾಜ ನಗರದ ಕಾಮಧೇನು ಆಸ್ಪತ್ರೆ (Kamadhenu Hospital) ಮುಂಭಾಗ ನರೇಶ್‌ ತಲೆ ಮೇಲೆ ಮಾರಿಮುತ್ತು ಕಲ್ಲು ಎತ್ತಿ ಹಾಕಿ ಹತ್ಯೆ (Bengaluru Murder case) ಮಾಡಿ ಪರಾರಿ ಆಗಿದ್ದ. ಘಟನೆ ಬಳಿಕ ಪೊಲೀಸರು ಏರಿಯಾದ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಸಿದ್ದರು. ಟೆಕ್ನಿಕಲ್ ಅನಾಲಿಸಿಸ್ ಆಧರಿಸಿ ಆರೋಪಿ ಮಾರಿಮುತ್ತುನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗಾರೆ ಕೆಲಸ ಮಾಡಿಕೊಂಡಿದ್ದ ನರೇಶ್‌ಗೆ ಶುಕ್ರವಾರ (ಮಾ.24) ರಜೆ ಇದ್ದ ಕಾರಣ ಕುಡಿಯಲು ಬಾರ್‌ಗೆ ಬಂದಿದ್ದ. ಈ ವೇಳೆ ಕುಡಿದ ಅಮಲಿನಲ್ಲಿ ಇವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಒಬ್ಬರಿಗೊಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡು ಕಿತ್ತಾಡಿಕೊಂಡಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ಬೆನ್ನಲ್ಲೇ ವೈರಲ್ ಆಗ್ತಿದೆ ಬಿಜೆಪಿ ನಾಯಕಿ ಖುಷ್ಬು ಹಳೇ ಟ್ವೀಟ್​; ಶಿಕ್ಷೆ ಇಲ್ವಾ ಎನ್ನುತ್ತಿದ್ದಾರೆ ಕಾಂಗ್ರೆಸ್​ ನಾಯಕರು

ಬಳಿಕ ನರೇಶ್ ಬಾರ್‌ನಿಂದ ಹೊರ ಬರುತ್ತಿದ್ದಂತೆ ಆತನ ಸ್ನೇಹಿತನೇ ಆದ ಮಾರಿಮುತ್ತು, ಮತ್ತೆ ಕ್ಯಾತೆ ತೆಗೆದು ಜಗಳ ಶುರು ಮಾಡಿದ್ದ. ಜಗಳ ತಾರಕಕ್ಕೇರಿದ್ದು ಕೋಪಗೊಂಡ ಮಾರಿಮುತ್ತು, ನರೇಶ್‌ನನ್ನು ಕೆಳಕ್ಕೆ ಕೆಡವಿ ಬಳಿಕ ಅಲ್ಲೆ ಇದ್ದ ಟೈಲ್ಸ್‌ ಕಲ್ಲಿನಿಂದ ತಲೆಯನ್ನು ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದ. ನರೇಶ್‌ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದನ್ನು ಕಂಡು ಮಾರಿಮುತ್ತು ಅಲ್ಲಿಂದ ಪರಾರಿ ಆಗಿದ್ದ. ಸದ್ಯ, ಪ್ರಕರಣ ದಾಖಲಿಸಿಕೊಂಡಿದ್ದ ಗೋವಿಂದರಾಜನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version