Site icon Vistara News

ಧ್ವಜಾರೋಹಣ ವಿವಾದ | ಮಾಣಿಕ್‌ಷಾ ಪರೇಡ್‌ ಗ್ರೌಂಡ್‌ಗಿಂತ ಚಾಮರಾಜಪೇಟೆ ಮೈದಾನವೇ ಈಗ ಕೇಂದ್ರಬಿಂದು!

ಚಾಮರಾಜಪೇಟೆ

| ಅಭಿಷೇಕ್‌.ಬಿ.ವಿ, ಬೆಂಗಳೂರು
ಸ್ವಾತಂತ್ರ್ಯ ದಿನಾಚರಣೆ ಹೊಸ್ತಿಲಿನಲ್ಲಿ ಮಾಣಿಕ್‌ಷಾ ಪರೇಡ್‌ ಮೈದಾನಕ್ಕಿಂತಲೂ ಚಾಮರಾಜಪೇಟೆ ಮೈದಾನವೇ ಈಗ ಕೇಂದ್ರಬಿಂದುವಾಗಿದೆ. ಇಲ್ಲಿನ ಧ್ವಜಾರೋಹಣವೇ ಈಗ ಪಾಯಿಂಟ್‌ ಆಫ್ ಅಟೆನ್ಷನ್‌ ಆಗಿದೆ. ಈ ಮೈದಾನದಲ್ಲಿ ಯಾರು ತಿರಂಗಾ ಧ್ಜಜ ಹಾರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಚಾಮರಾಜಪೇಟೆ ಮೈದಾನದಲ್ಲಿ ನಾನೇ ಬಾವುಟ ಹಾರಿಸುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಈ ಹಿಂದೆ ಹೇಳಿದ್ದರು. ಆದರೆ ಜಮೀರ್ ಯಾವುದೇ ಕಾರಣಕ್ಕೂ ಧ್ವಜ ಹಾರಿಸಬಾರದೆಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಒತ್ತಾಯ ಮಾಡಿದೆ.

ಹೀಗಾಗಿ ಕಂದಾಯ ಇಲಾಖೆಯ ಭೂಮಿಯಲ್ಲಿ ಧ್ವಜ ಯಾರು ಹಾರಿಸಬೇಕು, ಇದನ್ನು ಕಂದಾಯ ಇಲಾಖೆ ನಿರ್ಧಾರಿಸಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಈ ನಡುವೆ ಧ್ವಜಾರೋಹಣ ಮಾಡಲು ಅನುಮತಿ ಕೋರಿ ಶ್ರೀರಾಮಸೇನೆಯಿಂದ ನಗರದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಈ ಎಲ್ಲ ಗೊಂದಲಗಳಿಗೆ ಸೂಕ್ತ ಪರಿಹಾರ ಸಿಗಲೇಬೇಕಿದ್ದು, ಧ್ವಜಾರೋಹಣಕ್ಕೆ ಯಾರಿಗೆ ಅವಕಾಶ ದೊರೆಯಲಿದೆ ಎಂಬ ಸಾಧ್ಯಾಸಾಧ್ಯತೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ | ಚಾಮರಾಜಪೇಟೆ ಮೈದಾನ | ಧ್ವಜಾರೋಹಣಕ್ಕೆ ಸಿದ್ಧವೆಂದ ಮುಸ್ಲಿಂ ಸಂಘಟನೆ; ಆದರೆ..!

ಸಾಧ್ಯತೆ ನಂಬರ್ -1
ಸಿಹಿ‌ ಸುದ್ದಿ‌ ನೀಡುತ್ತೇನೆ ಎಂದಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರು, ಹಿಂದು ಸಂಘಟನೆಗಳ ಪರವಾಗಿ ‌ನಿಂತುಕೊಳ್ಳುವ ಸಾಧ್ಯತೆ ಇದೆ. ಶಾಸಕ ರೇಣುಕಾಚಾರ್ಯ ಹಾಗೂ ಸಿ.ಟಿ.ರವಿ ಜಮೀರ್ ವಿರುದ್ಧ ವಾಗ್ದಾಳಿ ಮಾಡಿದ್ದು, ಸರ್ಕಾರಿ ಜಾಗದಲ್ಲಿ ಧ್ವಜಾರೋಹಣ ಮಾಡಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಎಂದ ಸಿಟಿ ರವಿ ಹೇಳಿದ್ದರು. ಸಿ.ಟಿ.ರವಿ ಹೇಳಿಕೆಗೆ ರೇಣುಕಾ ಚಾರ್ಯರ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದೆ. ಈ‌ ಹಿನ್ನೆಲೆಯಲ್ಲಿ ಆರ್.ಅಶೋಕ್, ಹಿಂದುಗಳ ಪರ ಧನಿಯೆತ್ತುವ ಸಾಧ್ಯತೆ? ಇದ್ದು, ಚಾಮರಾಜಪೇಟೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆಗೆ ಧ್ವಜಾರೋಹಣಕ್ಕೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.

ಸಾಧ್ಯತೆ ನಂಬರ್ -2
ಕಂದಾಯ ಇಲಾಖೆಯಿಂದ ಧ್ವಜಾರೋಹಣ ಮಾಡಲಾಗುತ್ತದೆ, ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಹಾಗೂ ಮುಖಂಡರಿಗೂ ಆಮಂತ್ರಣವಿರುತ್ತದೆ. ಎಲ್ಲ ಒಕ್ಕೂಟಗಳು ಸರ್ಕಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಧರ್ಮಾತೀತ, ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಳ್ಳಲು ಅವಕಾಶ.

ಸಾಧ್ಯತೆ ನಂಬರ್ – 3
ಚಾಮರಾಜಪೇಟೆ ಮೈದಾನ ಸುತ್ತ 144 ಸೆಕ್ಷನ್ ಜಾರಿಗೊಳಿಸಲಾಗುತ್ತದೆ. ಧ್ವಜಾರೋಹಣದ ದಿನ ಯಾರೂ ಮೈದಾನಕ್ಕೆ ಭೇಟಿ ನೀಡುಂತಿಲ್ಲ, ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ಮಾಡುವುದಕ್ಕೆ ಅವಕಾಶವಿಲ್ಲ. ಮೈದಾನದ ಸುತ್ತಮುತ್ತ ಗುಂಪುಗೂಡದಂತೆ ಪೊಲೀಸರಿಂದ ಹದ್ದಿನಕಣ್ಣು ಇರುತ್ತದೆ. ಒಂದು ವೇಳೆ ಅನುಮಾನಸ್ಪದ ಚಟುವಟಿಕೆ ಕಂಡುಬಂದಲ್ಲಿ ಕಾನೂನು ಕ್ರಮ, ಮಾಲೀಕತ್ವ ಯಾರದ್ದು ಎಂದು ನಿರ್ಧಾರ ಆಗುವವರೆಗೂ ಯಾವ ಕಾರ್ಯಕ್ರಮಕ್ಕೂ ಅನುಮತಿ ಇಲ್ಲ.

ಸಾಧ್ಯತೆ ನಂಬರ್ -4
ಸಣ್ಣ ಅವಕಾಶ ಸಿಕ್ಕರೂ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇರುವುದರಿಂದ ಪೊಲೀಸರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಹಿಂದುಪರ ಸಂಘಟನೆ ಹಾಗೂ ಮುಸ್ಲಿಂ ಸಂಘಟನೆಗಳ ಶಾಂತಿ ಸಭೆ ಆಗಿದೆ. ಇಲ್ಲಿ ರೆಬಲ್ ಆದವರನ್ನು ಪಟ್ಟಿ ಮಾಡಿರುವ ಪೊಲೀಸ್ ಇಲಾಖೆ, ಪಕ್ಷಾತೀತ, ಧರ್ಮಾತೀತ ಹಾಗೂ ಸಂಘಟನೆಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿದೆ.

ರೆಬಲ್ ಹಾಗೂ ಸೌಹಾರ್ದ ಕದಡುವವರನ್ನು ಮೊದಲೇ ವಶಕ್ಕೆ ಪಡೆಯುವ ಸಾಧ್ಯತೆಯಿದ್ದು, ಆಗಸ್ಟ್ 13ರಿಂದ 14ರೊಳಗೆ ಪ್ರಿವೆಂಟಿವ್ ಅರೆಸ್ಟ್‌ ಮಾಡಿ, ಆಗಸ್ಟ್ 15ರ ಧ್ವಜಾರೋಹಣೆ ಕಾರ್ಯಕ್ರಮ ನಂತರ ಬಿಡುಗಡೆಗೊಳಿಸುವ ಸಾಧ್ಯತೆ. ಮುಂಜಾಗ್ರತಾ ಕ್ರಮವಾಗಿ ಶಂಕಿತರಿಂದ ಬಾಂಡ್ ಮಾಡಿಸಿಕೊಳ್ಳಲು ತಯಾರಿ, ಎಲ್ಲ ಧರ್ಮಗಳ ಮುಖಂಡರಿಂದ ಶಾಂತಿ ಕಾಪಾಡಲು ಸೂಚನೆ ನೀಡುವಂತೆ ಮನವಿ. ರಾಜಕಾರಣಿಗಳು, ಮುಖಂಡರ ಜತೆ ಕೂಡ ಗುಪ್ತವಾಗಿ ಶಾಂತಿ ಸೌಹಾರ್ದತೆ ಸಭೆ ನಡೆಸುವ ಸಾಧ್ಯತೆ.

ಇದನ್ನೂ ಓದಿ | ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ: ಬಿಬಿಎಂಪಿ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಆರ್ಡರ್‌

Exit mobile version