Site icon Vistara News

Champa Shashti | ಷಷ್ಠಿ ಹಬ್ಬದಂದು ಹುತ್ತಕ್ಕೆ ಹಾಲಿನ ಬದಲು ರಕ್ತ ಎರೆಯುವ ಗ್ರಾಮಸ್ಥರು!

Champa Shashti ಚಾಮರಾಜನಗರದಲ್ಲಿ ಕೋಳಿ ರಕ್ತ

ಚಾಮರಾಜನಗರ: ಸ್ಕಂದ, ಷಣ್ಮುಗ, ಕಾರ್ತಿಕೇಯ ಎಂದು ನಾನಾ ಹೆಸರುಗಳ ಮೂಲಕ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗದೇವತೆಗಳನ್ನು ಪೂಜಿಸಲಾಗುತ್ತದೆ. ಈ ದಿನ ನಾಗರ ಕಲ್ಲಿಗೆ ಅಥವಾ ಹುತ್ತಕ್ಕೆ ನೈವೇದ್ಯ ಇಟ್ಟು, ಪೂಜೆ ಸಲ್ಲಿಸಿ ಹಾಲು ಎರೆದು ಪೂಜಿಸಲಾಗುತ್ತದೆ. ಆದರೆಮ ಗಡಿ ಜಿಲ್ಲೆಯಲ್ಲಿ ವಿಶೇಷವಾಗಿ ಹಾಗೂ ವಿಭಿನ್ನವಾಗಿ ಷಷ್ಠಿ ಹಬ್ಬವನ್ನು (Champa Shashti) ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಕೋಳಿ ಬಲಿ ಕೊಟ್ಟು ಪೂಜಿಸುವ ಗ್ರಾಮಸ್ಥರು

ಸಾಮಾನ್ಯವಾಗಿ ಹುತ್ತಕ್ಕೆ ಹಾಲು ಎರೆಯುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಚಾಮರಾಜನಗರದ ಆ ಒಂದು ಭಾಗದಲ್ಲಿ ಹುತ್ತಕ್ಕೆ ಹಾಲಿನ ಬದಲು ಕೋಳಿ ರಕ್ತ ಎರೆದು ಗ್ರಾಮಸ್ಥರು ಪೂಜಿಸುತ್ತಾರೆ. ಇದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಆಚರಣೆ ಎನ್ನಲಾಗಿದೆ. ಜಿಲ್ಲೆಯ ಎಂ. ಮಲ್ಲಯ್ಯನಪುರ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಈ ವಿಶೇಷ ಆಚರಣೆ ಜರುಗುತ್ತದೆ.

Champa Shashti

ಇಲ್ಲಿನ ಜನರು ನಾಗಾರಾಧನೆಗೆ ಕೋಳಿ ಬಲಿ ಕೊಡುತ್ತಾರೆ. ಈ ರೀತಿ ನಾಗಪೂಜೆ ಮಾಡಿದರೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾವುಗಳು ಕಾಣಿಸುವುದಿಲ್ಲ. ಅವುಗಳಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ.

Champa Shashti

ಶ್ರದ್ಧಾ ಭಕ್ತಿಯಿಂದ ಪೂಜೆಯಲ್ಲಿ ಪಾಲ್ಗೊಳ್ಳುವ ಜನರು, ಹುತ್ತಕ್ಕೆ ಮೊಟ್ಟೆ, ಬಾಳೆ ಹಣ್ಣು, ಕೋಳಿ ರಕ್ತವನ್ನು ನೈವೇದ್ಯವಾಗಿ ಸಮರ್ಪಣೆ ಮಾಡುತ್ತಾರೆ. ಈ ಮೂಲಕ ಹಾವುಗಳ ಕಾಟ ತಮಗೆ ಬಾರದೇ ಇರಲಿ, ಕೆಲಸಗಳು ನಿರ್ವಿಘ್ನವಾಗಿ ಸಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ.

ಇದನ್ನೂ ಓದಿ | ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ರಥೋತ್ಸವ | ಬಿಗಿ ಬಂದೋಬಸ್ತ್, ಮುಂದುವರಿದ ಧರ್ಮ ದಂಗಲ್‌

Exit mobile version